Saturday, January 11, 2020

ಮನೆಯಂಗಣದಲ್ಲಿ ಮಿಂಚಿದ ಬೆಂಗಳೂರಿಗೆ ಜಯ

ಸ್ಪೋರ್ಟ್ಸ್ ಮೇಲ್ ವರದಿ: ಎರಿಕ್ ಪಾರ್ಥಲು (8ನೇ ನಿಮಿಷ) ಹಾಗೂ ನಾಯಕ ಸುನಿಲ್ ಛೆಟ್ರಿ (63ನೇ ನಿಮಿಷ) ಗಳಿಸಿದ ಗೋಲುಗಳು ಮತ್ತು ಗುರ್ಪ್ರೀತ್ ಸಿಂಗ್ ಸಂಧೂ ಅವರ ಅದ್ಭುತ ಗೋಲ್ ಕೀಪಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡ 2-0 ಗೋಲುಗಳ ಅಂತರದಲ್ಲಿ  ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಅಮೂಲ್ಯ ಜಯ ಗಳಿಸಿತು....

ಬಲ್ಗೇರಿಯಾ ವಿರುದ್ಧ ಡ್ರಾ ಸಾಧಿಸಿದ ಭಾರತ

ನವದೆಹಲಿ: ಉದಯೋನ್ಮುಖ ಆಟಗಾರ ಆಕಾಶ್ ಮಿಶ್ರಾ ಅವರು ಮಾಡಿದ ಭರ್ಜರಿ ಹೆಡರ್ ನೆರವಿನಿಂದ 19 ವರ್ಷದೊಳಗಿನ ಫುಟ್ಬಾಲ್ ಟೂರ್ನಿಯಲ್ಲಿ ಭಾರತ 1-1 ರಿಂದ ಬಲ್ಗೇರಿಯಾ ತಂಡದ ವಿರುದ್ಧ ಡ್ರಾ ಸಾಧಿಸಿತು. ಪೆಟ್ರಾಸ್ಕಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ನಡೆದ ಪಂದ್ಯದಲ್ಲಿ ಭಾರತ ಜೂನಿಯರ್ ತಂಡ ಅಮೋಘ ಪ್ರದರ್ಶನ ನೀಡಿ, ಮೂರು ಪಂದ್ಯಗಳಿಂದ ಒಂದು ಅಂಕ ಕಲೆ ಹಾಕಿತು. ಬಲ್ಗೇರಿಯಾ ತಂಡದ...

ನೇಯ್ಮಾರ್‌ ವಿರುದ್ಧ ಅತ್ಯಾಚಾರದ ಆರೋಪ.!

ರಿಯೋ ಡಿ ಜನೈರೊ: ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನ ಹೋಟೆಲ್‌ವೊಂದರಲ್ಲಿ ಬ್ರೆಜಲ್‌ ತಂಡದ ಸ್ಟಾರ್‌ ಸ್ಟ್ರೈಕರ್‌ ನೇಯ್ಮಾರ್‌ ಅವರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ ಎಂದು ಬ್ರೆಜಿಲ್‌ ಮಾಧ್ಯಮಗಳು ವರದಿ ಮಾಡಿವೆ. ಆದರೆ, ನೇಯ್ಮಾರ್‌ ಈ ಆರೋಪವನ್ನು ನಿರಾಕರಿಸಿದ್ದಾರೆ. ನೇಯ್ಮಾರ್ ಅವರು ಮಹಿಳೆಯ ಒಪ್ಪಿಗೆ ಇಲ್ಲದೆ ಅತ್ಯಾಚಾರ ಮಾಡಿರುವಂತೆ ಸಾವ್‌ಪೌಲೊ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ...

2022ರ ಎಎಫ್‌ಸಿ ಮಹಿಳಾ ಏಷ್ಯಾ ಕಪ್‌ ಆತಿಥ್ಯಕ್ಕೆ ಭಾರತದಿಂದ ಬಿಡ್‌ ಸಲ್ಲಿಕೆ

ಕೌಲಾಲಂಪುರ್:  ಮುಂಬರುವ 2022ರ ಎಎಫ್‌ಸಿ ಮಹಿಳಾ ಏಷ್ಯನ್‌ ಕಪ್‌ ಟೂರ್ನಿಗೆ ಆತಿಥ್ಯ ವಹಿಸಲು ಚೈನೀಸ್‌ ತೈಫೆ ಹಾಗೂ ಉಜ್ಬೇಕಿಸ್ತಾನ್‌ನೊಂದಿಗೆ ಅಖಿಲ ಭಾರತೀಯ ಫುಟ್ಬಾಲ್‌ ಒಕ್ಕೂಟ ಆಸಕ್ತಿ ತೋರಿದೆ. ಅಖಿಲ ಭಾರತೀಯ ಫುಟ್ಬಾಲ್‌ ಒಕ್ಕೂಟ ಹಾಗೂ ಚೈನೀಸ್‌ ತೈಫೆ ಫುಟ್ಬಾಲ್‌ ಒಕ್ಕೂಟ ಕ್ರಮವಾಗಿ 1979 ಹಾಗೂ 2001ರಲ್ಲಿ ಮಹಿಳಾ ಏಷ್ಯನ್‌ ಕಪ್‌ ಟೂರ್ನಿಯ ಆತಿಥ್ಯ ವಹಿಸಿದ್ದವು. ಇದೀಗ,...

ಲಿವರ್ಪೂಲ್‌ಗೆ 6ನೇ ಬಾರಿ ಚಾಂಪಿಯನ್ಸ್‌ ಲೀಗ್‌ ಗರಿ

ಮ್ಯಾಡ್ರಿಡ್‌: ಟೊಟ್ಟೆನ್ಯಾಮ್‌ ಹಾಟ್ಸ್‌ಪರ್  ವಿರುದ್ಧ ಲಿವರ್ಪೂಲ್‌ ಫೈನಲ್‌ ಪಂದ್ಯ ಗೆದ್ದು ಆರನೇ ಬಾರಿ ಚಾಂಪಿಯನ್ಸ್‌ ಲೀಗ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಶನಿವಾರ ಇಲ್ಲಿನ ಮೆಟ್ರೋಪೊಲಿಟನ್ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್‌ ಲೀಗ್‌ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊಹಮ್ಮದ್‌ ಸಲಾಹ್‌ (2ನೇ ನಿಮಿಷ) ಹಾಗೂ ಡಿವೋಕ್ ಒರಿಗಿ (87ನೇ ನಿ) ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಲಿವರ್ಪೂಲ್‌ 2-0...

ಲಾ ಲೀಗಾ ಫುಟ್ಬಾಲ್‌ ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಆಯ್ಕೆ

ಮುಂಬೈ: ಲಾ ಲೀಗಾ ಫುಟ್ಬಾಲ್‌ ಸ್ಕೂಲ್‌  ಸ್ಕಾಲರ್‌ಶಿಪ್‌ಗೆ ಬೆಂಗಳೂರಿನಿಂದ ಇಬ್ಬರು ಯುವ ಆಟಗಾರರು ಸೇರಿದಂತೆ ಭಾರತದಿಂದ ಒಟ್ಟು 4 ಮಂದಿ ಆಟಗಾರರು ಆಯ್ಕೆಯಾಗಿದ್ದಾರೆ ಮೇ 26 ರಿಂದ ಜೂನ್‌ 5ರವರೆಗೆ ಪ್ರಥಮ ದರ್ಜೆ ಕ್ಲಬ್‌ ಆದ ಸಿಡಿ ಲೆಗನೆಸ್ ಕ್ಲಬ್‌ನಲ್ಲಿ ಈ ನಾಲ್ವರು ಆಟಗಾರರು ತರಬೇತಿ ಪಡೆಯಲಿದ್ದಾರೆ. 2018/19ನೇ ಸಾಲಿನಲ್ಲಿ ಬೆಂಗಳೂರಿನಿಂದ ಇಶಾನ್‌ ಮುರಳಿ ಮತ್ತು ವಿದ್ವತ್‌...

ಚಾಂಪಿಯನ್ಸ್‌ ಲೀಗ್‌: ಬಾರ್ಸಿಲೋನಾಗೆ ಆಘಾತ, ಫೈನಲ್‌ಗೆ ಲಿವರ್ಪೂಲ್‌

ಲಂಡನ್‌: ಸ್ಟಾರ್‌ ಆಟಗಾರರಾದ ಮೊಹಮ್ಮದ್‌ ಸಲ್ಹಾ ಹಾಗೂ ರಾಬರ್ಟ್‌ ಫರ್ಮಿನೊ ಅವರ ಅನುಪಸ್ಥಿತಿಯಲ್ಲಿ ಲಿವರ್ಪೂಲ್‌ ತಂಡ, ಬಾರ್ಸಿಲೋನಾ ತಂಡದ ವಿರುದ್ಧ ಚಾಂಪಿಯನ್ಸ್‌ ಲೀಗ್‌ ಸೆಮಿಫೈನಲ್‌ ಎರಡನೇ ಲೆಗ್‌ ಪಂದ್ಯದಲ್ಲಿ 4-0 ಅಂತರದಲ್ಲಿ ಜಯ ದಾಖಲಿಸಿತು.   ಇದರೊಂದಿಗೆ 4-3 ಸರಾಸರಿ ಗೋಲುಗಳ ನೆರವಿನಿಂದ ಲಿವರ್ಪೂಲ್‌ ಫೈನಲ್‌ಗೆ ಪ್ರವೇಶ ಮಾಡಿತು. ಸೋಲಿನೊಂದಿಗೆ ಪ್ರಶಸ್ತಿ ಗೆಲ್ಲುವ ಲಿಯೊನೆಲ್‌ ಮೆಸ್ಸಿ ಬಳಗಕ್ಕೆ...

ಮೆಸ್ಸಿಗೆ 600ರ ಸಂಭ್ರಮ

ಬಾರ್ಸಿಲೋನಾ: ವಿಶ್ವ ಸ್ಟಾರ್‌ ಫುಟ್ಬಾಲ್‌ ತಾರೆ ಲಿಯೊನೆಲ್‌ ಮೆಸ್ಸಿ ಹಾಗೂ ಲೂಯಿಸ್ ಸೌರೆಜ್ ಅವರ ಅದ್ಭುತ ಕಾಲ್ಚಳಕದ ನೆರವಿನಿಂದ ಬಾರ್ಸಿಲೋನಾ ತಂಡ ಚಾಂಪಿಯನ್ಸ್ ಲೀಗ್‌ ಸೆಮಿಫೈನಲ್‌ ಮೊದಲ ಲೆಗ್ ಪಂದ್ಯದಲ್ಲಿ ಲಿವರ್‌ಪೂಲ್‌ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತು. ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ ತಂಡದ ಜಯದ ಜತೆ ಮತ್ತೊಂದು ವಿಶೇಷತೆ ನಡೆಯಿತು. ಅರ್ಜೆಂಟೀನಾದ ಅಗ್ರ...

ಫುಟ್ಬಾಲ್‌: ಭಾರತ-ಸ್ಲೊವೆನಿಯಾ ಪಂದ್ಯ ಡ್ರಾ

ರೋಮ್‌:  ಇಟಲಿಯ ಪಾಲ್ಮನೊವಾದಲ್ಲಿ ನಡೆದ ಎಂಯು-15 ಫುಟ್ಬಾಲ್‌ ಟೂರ್ನಿಯಲ್ಲಿ 15 ವಯೋಮಿತಿ ಭಾರತ ಬಾಲಕರ ತಂಡ ಹಾಗೂ ಸ್ಲೊವೆನಿಯಾ ತಂಡಗಳ ನಡುವೆ  ನಡೆದ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಸಮಾಪ್ತಿಯಾಯಿತು. ಆರಂಭದಲ್ಲೇ ಉತ್ತಮ ಪ್ರದರ್ಶನ ತೋರಿದ ಭಾರತ ಬಹುಬೇಗ ಮುನ್ನಡೆ ಸಾಧಿಸಿತು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಸಿದ್ಧಾರ್ಥ್‌ ಭಾರತಕ್ಕೆ ಗೋಲಿನ ಖಾತೆ ತೆರೆದರು. ನಂತರ,  ಎನೆಜ್ ಮಾರ್ಸೆಟಿಕ್...

ಸಂತೋಷ್ ಟ್ರೋಫಿ ಫುಟ್ಬಾಲ್ : ಕರ್ನಾಟಕ ತಂಡಕ್ಕೆ ಜಯ

ಸ್ಪೋರ್ಟ್ಸ್ ಮೇಲ್ ವರದಿ ಸಿಕ್ಕಿಂ ತಂಡವನ್ನು 2-0 ಗೋಲಿನಿಂದ ಸೋಲಿಸುವ ಮೂಲಕ ಕರ್ನಾಟಕ ತಂಡ 76ನೇ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಜಯ ದಾಖಲಿಸಿದೆ. ಪಂಜಾಬ್‌ನ ಲುಧಿಯಾನದ ಗುರುನಾನಕ್ ಕ್ರೀಡಾಂಗಣದಲ್ಲಿ ನಡೆದ ಲೀಗ್‌ನ ಕೊನೆಯ ಸುತ್ತಿನ  ಪಂದ್ಯದಲ್ಲಿ ಕರ್ನಾಟಕ ಪ್ರಥಮಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿತ್ತು. ಆದರೆ 66ನೇ ನಿಮಿಷದಲ್ಲಿ ನಾಯಕ ವಿಘ್ನೇಶ್ ವಿಗು ಗಳಿಸಿದ...
- Advertisement -

LATEST NEWS

MUST READ