Friday, August 23, 2019

ಕರ್ನಾಟಕದ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದೆ!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕನ್ನಡ ನಾಡು, ನುಡಿ ಎಂದು ಹೋರಾಡುವವರು ಈ ಬಗ್ಗೆಯೂ ಕಾಳಜಿ ವಹಿಸಿ........ ರಾಜ್ಯದಲ್ಲಿರುವ ಕ್ರೀಡಾಪಟುಗಳಿಗೆ ಸ್ಪೋರ್ಟ್ಸ್ ಕೋಟಾದಡಿ ಹೆಚ್ಚು ಉದ್ಯೋಗ ಸಿಗುತ್ತಿಲ್ಲ. ಇಲ್ಲಿರುವ ಕೇಂದ್ರ ಸರಕಾರದ  ರೇಲ್ವೆ, ಆದಾಯ ತೆರೆಗೆ, ಬ್ಯಾಂಕ್, ಕಸ್ಟಮ್ಸ್ ಮೊದಲಾದ ಇಲಾಖೆಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳು ವಂಚಿತರಾಗುತ್ತಿದ್ದಾರೆ. ಈ ಅವ್ಯವಸ್ಥೆಗೆ ಸಂಬಂಧಪಟ್ಟ  ಕ್ರೀಡಾ ಫೆಡರೇಷನ್‌ಗಳು, ತರಬೇತುದಾರರು ಹಾಗೂ ಸರಕಾರ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ...

ಯುವರಾಜ್‌ಗೆ ವಿದಾಯದ ಪಂದ್ಯ ಆಡುವ ಅವಕಾಶ ನೀಡಬೇಕಿತ್ತು

ಸೋಮಶೇಖರ್ ಪಡುಕರೆ ಪ್ರತಿಯೊಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ಅಂಗಣಕ್ಕೆ ಕಾಲಿಟ್ಟ ಮೊದಲ ದಿನ ಹಾಗೂ ಅಂಗಣದಿಂದ ನಿರ್ಗಮಿಸಿದ ದಿನ ಅತ್ಯಂತ ಸ್ಮರಣೀಯ. ಇದು ಕ್ರಿಕೆಟ್‌ಗೆ ಮಾತ್ರ ಸೀಮಿತವಾದುದಲ್ಲ. ಮೊದಲ ದಿನದ ಸಂಭ್ರಮದಂತೆ ವಿದಾಯದ ದಿನದ ‘ಭಾವುಕತೆ ನೋವು ಕೂಡಾ  ನೆನಪಿನಂಗಳದಲ್ಲಿ ಹಸಿರಾಗಿ ಉಳಿಯುವಂತದ್ದು. ಅನೇಕ ಕ್ರಿಕೆಟ್ ದಿಗ್ಗಜರು ಅತ್ಯಂತ ಸರಳವಾಗಿ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ತಾವು ಕ್ರಿಕೆಟ್...

ಚೌಲ್ಟ್ರಿಯಲ್ಲಿ ಜಿಮ್ನಾಸ್ಟಿಕ್ ಅಭ್ಯಾಸ ಮಾಡಿ ವಿಶ್ವಕಪ್‌ನಲ್ಲಿ ಮಿಂಚಿದ ಉಜ್ವಲ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಳೆದ ತಿಂಗಳು ಕತಾರ್‌ನಲ್ಲಿ ನಡೆದ ವಿಶ್ವಕಪ್ ಜಿಮ್ನಾಸ್ಟಿಕ್‌ನಲ್ಲಿ ಪಾಲ್ಗೊಂಡ ದಕ್ಷಿಣ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕನ್ನಡಿಗ ಬೆಂಗಳೂರಿನ ಸುರಾನ ಕಾಲೇಜಿನ ವಿದ್ಯಾರ್ಥಿ ಉಜ್ವಲ್ ಚಂದ್ರಶೇಖರ್ ನಾಯ್ಡು ಅವರ ಕ್ರೀಡಾ ಬದುಕಿನ ಹಾದಿ ನಾವಂದುಕೊಂಡಷ್ಟು ಸುಲಲಿತವಾಗಿಲ್ಲ. ಏಕೆಂದರೆ ಇದು ಕರ್ನಾಟಕ. ಇಲ್ಲಿ ಕ್ರೀಡೆಗೆ ಯಾವ ರೀತಿಯ ಪ್ರೋತ್ಸಾಹ...

ತಮ್ಮನಿಗೆ 1.45 ಕೋಟಿ, ಅಣ್ಣನಿಗೆ ಬರೇ 10 ಲಕ್ಷ ! ಪ್ರೊ ಕಬಡ್ಡಿಯಲ್ಲಿ ಅಪೂರ್ವ ಸಹೋದರರು

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ 2009ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆ ಅಂತ್ಯಗೊಂಡಿದ್ದು, ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಈ ಬಾರಿಯ ವಿಶೇಷವೆಂದರೆ ಇಬ್ಬರು ಸಹೋದರರು ಒಂದೇ ತಂಡದಲ್ಲಿ ಆಡುತ್ತಿದ್ದಾರೆ. ತಮ್ಮ ಬೃಹತ್ ಮೊತ್ತಕ್ಕೆ ಹರಾಜಾದರೆ ಅಣ್ಣ ಅತಿ ಕಡಿಮೆ ಮೊತ್ತಕ್ಕೆ ಅದೇ ತಂಡವನ್ನು ಸೇರಿಕೊಂಡಿದ್ದಾರೆ. ಪ್ರೊ ಕಬಡ್ಡಿ ಲೀಗ್‌ನ...

ಅಂಗಣದ ಹೊರಗಡೆಯೇ ಓಡಿ ವಿಶ್ವ ಗೇಮ್ಸ್‌ಗೆ ಆಯ್ಕೆಯಾದ ನವಮಿ ಗೌಡ!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್  ಆಕೆಗೆ ಕಂಠೀರವ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಓಡುವ ಅವಕಾಶ ಸಿಗಲಿಲ್ಲ. ಏಕೆಂದರೆ ಅವರಿಗೆ ತರಬೇತಿ ನೀಡುತ್ತಿದ್ದ ಕೋಚ್‌ಗೆ ಅಲ್ಲಿ ಪ್ರವೇಶಕ್ಕೆ ಆಸ್ಪದ ನೀಡುತ್ತಿಲ್ಲ. ಆದರೂ ತನಗೆ ತರಬೇತಿ ನೀಡುತ್ತಿರುವ ತರಬೇತುದಾರರನ್ನೇ ನಂಬಿಕೊಂಡು, ಕ್ರೀಡಾಂಗಣದ ಹೊರ ಭಾಗದಲ್ಲೇ ಓಡಿ, ಇಟಲಿಯಲ್ಲಿ ನಡೆಯಲಿರುವ ವಿಶ್ವ ಯುನಿವರ್ಸಿಟಿ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ ಮಂಗಳೂರು ವಿಶ್ವವಿದ್ಯಾನಿಲಯದ ವೇಗದ ಓಟಗಾರ್ತಿ...

ನಿಮ್ಮ ಪ್ರಚಾರಕ್ಕೆ ಹಣ ಇದೆ, ಕ್ರೀಡಾಪಟುಗಳ ಬಾಕಿ ಸಂದಾಯಕ್ಕೆ ಇಲ್ವ?

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಳೆದ ಕೆಲವು ದಿನಗಳಿಂದ ನಾಡಿನ ಪತ್ರಿಕೆಗಳು, ವೆಬ್‌ಸೈಟ್‌ಗಳನ್ನು ಕ್ಲಿಕ್ ಮಾಡಿದಾಗ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಸಾಧನೆಯನ್ನು ಹೊಗಳುವ ಜಾಹೀರಾತು ರಾರಾಜಿಸುತ್ತಿದೆ. ಮಾಧ್ಯಮಗಳು ಕೂಡ ಸರಕಾರದ ವೈಫಲ್ಯಗಳ ಬಗ್ಗೆ ಬರೆಯುವದನ್ನು ಬಿಟ್ಟು, ಬರುವ ಜಾಹೀರಾತಿಗಾಗಿ ಜಾಗ ಮೀಸಲಿಡುತ್ತಿವೆ. ಇದಕ್ಕೆಲ್ಲ ಜನರ ತೆರಿಗೆಯ ಹಣ ಇದೆ, ಆದರೆ 2015ರಿಂದ ರಾಜ್ಯದ ಕ್ರೀಡಾಪಟುಗಳ...

ಈ ಯಶಸ್ಸಿಗೆ ತಂದೆಯ ಪ್ರೋತ್ಸಾಹವೇ ಕಾರಣ : ಗಣೇಶ್ ಸತೀಶ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕರ್ನಾಟಕದ ಖ್ಯಾತ ವೈದ್ಯ ಡಾ. ಸತೀಶ್ ಅವರ ಪುತ್ರ ಗಣೇಶ್ ಸತೀಶ್ ವಿದರ್ಭ ಕ್ರಿಕೆಟ್ ತಂಡ ರಣಜಿ ಹಾಗೂ ಇರಾನಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕನ್ನಡಿಗನಾಗಿ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗಲಿಲ್ಲವೆಂಬ ನೋವು ಇದ್ದರೂ ಕ್ರಿಕೆಟ್‌ಗಾಗಿ ತನ್ನ ಬದುಕನ್ನೇ ಮುಡುಪಾಗಿಟ್ಟ ಆಟಗಾರನಿಗೆ ಯಶಸ್ಸು ಎಲ್ಲಿ ಸಿಕ್ಕರೂ ಒಂದೇ. ವಿದರ್ಭ ತಂಡ...

ಹಸಿವು ಪಾಠ ಕಲಿಸಿತು… ಹಾಕಿ ಬದುಕು ನೀಡಿತು…

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಒಡಿಶಾದಲ್ಲಿ ನಡೆದ ವಿಶ್ವಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿದ ಮಿಡ್‌ಫೀಲ್ಡರ್ ಸುಮಿತ್ ಕುಮಾರ್ ಅವರೊಂದಿಗೆ ಮಾತನಾಡಬೇಕೆಂಬುದು ಬಹಳ ದಿನಗಳ ಆಸೆಯಾಗಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಕಳೆದ ವಾರ ಮಾತಿಗೆ ಸಿಕ್ಕ ಸುಮಿತ್ ಬದುಕು ಹಾಕಿ ಚೆಂಡಿನಂತೆ ಕಠಿಣವಾಗಿತ್ತು. ಕುಸ್ತಿ ಆಡಲು ಹೊಟ್ಟೆಗೇ ಗತಿ ಇಲ್ಲವೆಂದು ಹಾಕಿ ಸ್ಟಿಕ್ ಹಿಡಿದ ಹುಡುಗ ಈಗ ದೇಶದ...

ಕೆಎಲ್ ರಾಹುಲ್‌ನನ್ನು ರಾಹುಲ್ ದ್ರಾವಿಡ್‌ಗೆ ಹೋಲಿಸಬಾರದಿತ್ತು..!

ಸೋಮಶೇಖರ್ ಪಡುಕರೆ ರಾಷ್ಟ್ರಕವಿ ಕುವೆಂಪುರವರ ಒಂದು ಗೀತೆ, ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು...ಓದುತ್ತಾ ಅದರಲ್ಲೊಂದು ಸಾಲು ಬರುತ್ತದೆ, ಏರಿದವನು ಚಿಕ್ಕವನಿರಬೇಕಲೇ ಎಂಬ ಮಾತನು ಸಾರುವನು. ಇದು ಸೂರ್ಯನ ಮೂಲಕ ನಾವು ಹೇಗೆ ಬದುಕಬೇಕೆಂಬುದನ್ನು ಕುವೆಂಪುರವರು ಹೇಳಿದ್ದು ನಿತ್ಯ ಸತ್ಯವಾದುದು. ಭಾರತ ಕ್ರಿಕೆಟ್ ತಂಡದ ಈಗಿನ ವಿವಾದಾತ್ಮಕ ಆಟಗಾರ ಕೆ.ಎಲ್. ರಾಹುಲ್ ಬಗ್ಗೆ ಯೋಚಿಸಿದಾಗ ಕುವೆಂಪು  ಅವರ...

ಶತಕದೊಂದಿಗೆ ಮಿಂಚಿದ ಕೋಟದ ಪ್ರಣಾಮ್ ಆಚಾರ್ಯ

ಸೋಮಶೇಖರ್ ಪಡುಕರೆ ಬೆಂಗಳೂರು  ಬೆಳೆವ ಸಿರಿ ಮೊಳಕೆಯಲ್ಲೇ ಎಂಬಂತೆ ಕೋಟದ ಪ್ರಣಾಮ್ ಎಸ್. ಆಚಾರ್ಯ ರಾಜ್ಯದ ಕ್ರಿಕೆಟ್‌ಗೆ ದಿಟ್ಟ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವಮಂಗಳೂರು ವಲಯ  14 ಮತ್ತು 16 ವರ್ಷ ವಯೋಮಿತಿಯ ಕ್ರಿಕೆಟ್‌ನಲ್ಲಿ ಮಿಂಚಿರುವ ಪ್ರಣಾಮ್ ಆಚಾರ್ಯ ಹಿರಿಯ ಕ್ರಿಕೆಟಿಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಇತ್ತೀಚಿಗೆ ಕೆಎಸ್‌ಸಿಎ ಆಯೋಜಿತ ಮಂಗಳೂರು...

MOST COMMENTED

ನಾಳೆಯಿಂದ ಮಹಿಳಾ ಹಾಕಿ ಶಿಬಿರ

ದೆಹಲಿ:  ನಾಳೆಯಿಂದ ಬೆಂಗಳೂರು ಕ್ರೀಡಾ ಪ್ರಾಧಿಕಾರದಲ್ಲಿ ಆರಂಭವಾಗುವ ಮಹಿಳಾ ಹಾಕಿ ರಾಷ್ಟ್ರೀಯ ಶಿಬಿರಕ್ಕೆ 33 ಸಂಭಾವ್ಯ ಆಟಗಾರ್ತಿಯರನ್ನು ಹಾಕಿ ಭಾರತ ಆಯ್ಕೆ ಮಾಡಿ ಘೋಷಣೆ ಮಾಡಿದೆ. 33 ಆಟಗಾರ್ತಿಯರನ್ನು ಆಯ್ಕೆ ಮಾಡಿರುವ ಗುಂಪಿನಲ್ಲಿ ದೇಶೀಯ ಟೂರ್ನಿಗಳನ್ನು...

HOT NEWS