Friday, November 22, 2024

CCL 2023: ಫೆಬ್ರವರಿ 18ರಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023

ಬೆಂಗಳೂರು : ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 (CCL 2023)  ಫೆಬ್ರವರಿ 18 ರಿಂದ ಆರಂಭಗೊಳ್ಳಲಿದೆ. ಈ ಬಾರಿ ಸಿಸಿಎಲ್ ಹೊಸ ಸ್ವರೂಪವನ್ನು ಪರಿಚಯಿಸುತ್ತಿದೆ. ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ T20 ಬದಲಾಗಿ T10 ಪಂದ್ಯಗಳನ್ನು ಆಡಿಸಲಾಗುತ್ತಿದೆ.

ಬಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ದಿಗ್ಗಜರು ಈ ಬಾರಿಯ ಸಿಸಿಎಲ್ ನಲ್ಲಿ ಬಾಗಿಯಾಗಲಿದ್ದಾರೆ. ಹೊಸ ಮಾದರಿಯ ಸಿಸಿಎಲ್ ಪಂದ್ಯಾವಳಿಯಲ್ಲಿ ತೆಲುಗು ವಾರಿಯರ್ಸ್, ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಮುಂಬೈ ಹೀರೋಸ್ ಮತ್ತು ಪಂಜಾಬ್ ಸೇರಿದಂತೆ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡಲಿವೆ.

ಇದೇ ಮೊದಲ ಬಾರಿಗೆ ಸಿಸಿಎಲ್ (CCL 2023 ) ಪಂದ್ಯಾವಳಿಯು ದೇಶದ ಪ್ರಮುಖ ಐದು ನಗರಗಳಲ್ಲಿ ನಡೆಯಲಿದೆ. ಫೆಬ್ರವರಿ 18 ಮತ್ತು 19ರಂದು ರಾಯ್‌ಪುರದಲ್ಲಿ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಮಾರ್ಚ್ 18 ರಂದು ಸೆಮಿಫೈನಲ್ ಮತ್ತು ಮಾರ್ಚ್ 19 ರಂದು ಹೈದರಾಬಾದ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಸಿಸಿಎಲ್ ಪಂದ್ಯಾವಳಿಯನ್ನು ಪ್ರಸಾರ ಪಾಲುದಾರ Zee ನೆಟ್‌ವರ್ಕ್ 7 ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಿದೆ. ವೀಕ್ಷಕರು ತಮಗೆ ಇಷ್ಟವಾದ ಭಾಷೆಯಲ್ಲಿ ಪಂದ್ಯಾವಳಿಯನ್ನು ವೀಕ್ಷಿಸಬಹುದಾಗಿದೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023ರ ಸ್ವರೂಪವನೇ ಬದಲಾಯಿಸಲಾಗಿದೆ. ಸಿಸಿಎಲ್ ಆವೃತ್ತಿಯನ್ನು ಹೊಸ ರೂಪದಲ್ಲಿ ಪರಿಚಿಯಿಸಲು ನಾವು ಸಂತೋಷ ಪಡುತ್ತೇವೆ. ಈ ಋತುವಿನಲ್ಲಿ ಸಿಸಿಎಲ್ ಪಂದ್ಯಾವಳಿಯು ಹೆಚ್ಚು ಮೋಜು ನೀಡುತ್ತದೆ. ಪ್ರತಿ ತಂಡಕ್ಕೆ 10 ಓವರ್‌ಗಳ 2 ಇನ್ನಿಂಗ್ಸ್ ಆಡಲಿದೆ ಎಂದು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ವಿಷ್ಣು ವರ್ಧನ್ ಇಂದೂರಿ ತಿಳಿಸಿದ್ದಾರೆ.

ಸಿಸಿಎಲ್ ಪಂದ್ಯಾವಳಿಯನ್ನು ಜಯಿಸಲು ಕ್ರಿಕೆಟ್ ತಾರೆಗಳು ಹೆಚ್ಚು ಶ್ರಮವಹಿಸುತ್ತಿದ್ದಾರೆ. ದಿಗ್ಗಜ ತಾರೆಯರು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಸಲ್ಮಾನ್ ಖಾನ್ ಅವರು ಸೊಹೈಲ್ ಖಾನ್ ಒಡೆತನದ ಮುಂಬೈ ಹೀರೋಸ್ ತಂಡದ ರಾಯಭಾರಿಯಾಗಿದ್ದಾರೆ. ಪಂಜಾಬ್ ಡಿ ಶೇರ್ ನಾಯಕ ಸೋನು ಸೂದ್ ಜೊತೆಗೆ ಕನ್ನಡ ಬುಲ್ಡೋಜರ್ಸ್‌ನ ಐಕಾನ್ ಪ್ಲೇಯರ್ ಆಗಿ ಕಿಚ್ಚ ಸುದೀಪ್, ಭೋಜ್‌ಪುರಿ ದಬಾಂಗ್ಸ್‌ನ ನಾಯಕ ಮನೋಜ್ ತಿವಾರಿ, ಆರ್ಯ ಚೆನ್ನೈ ರೈನೋಸ್, ಅಖಿಲ್ ಅಕ್ಕಿನೇನಿ ತೆಲುಗು ವಾರಿಯರ್ಸ್, ಬೆಂಗಾಲ್ ಟೈಗರ್ಸ್ ನಾಯಕ, ಜಿಶು ಸೆಂಗುಪ್ತ, ಕೇರಳ ಸ್ಟ್ರೈಕರ್ಸ್ ನಾಯಕ ಕುಂಚಾಕೊ ಬೋಬನ್ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಷ್ಣು ಇಂದೂರಿ ಮತ್ತು ಪಾರ್ಲೆ ಬಿಸ್ಕೆಟ್‌ನ ಮಯಾಂಕ್ ಶಾ ಅವರೊಂದಿಗೆ ಮಾಧ್ಯಮದ ಹಿರಿಯ ರಾಜ್ ನಾಯಕ್ ಸಿಸಿಎಲ್ 2023 ಟ್ರೋಫಿಯನ್ನು ಅನಾವರಣಗೊಳಿಸಿದರು. CCL 2023 ತನ್ನ ಹೊಸ ಸೀಸನ್‌ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ :  ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು : ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ : WPL Auction 2023 : ಬೆಂಗಳೂರಿಗೆ ಸ್ಮೃತಿ ಮಂದಾನ, ಮುಂಬೈಗೆ ಹರ್ಮನ್ ಪ್ರೀತ್ ಕೌರ್

Related Articles