ನಮ್ಮನ್ನು ಸ್ಟೇಜಿಗೆ ಕರೆಯಲೇ ಇಲ್ಲ: ಪಾಕಿಸ್ತಾನ!
ಕರಾಚಿ: ಚಾಂಪಿಯನ್ಸ್ ಟ್ರೋಫಿ ಬಹುಮಾನ ನೀಡುವಾಗ ಪಾಕಿಸ್ತಾನವನ್ನು ಕಡೆಗಣಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು ನೀಡಿದೆ. Champions Trophy: PCB Lodges Protest with ICC Over Prize Ceremony Snub
ಆತಿಥೇಯ ರಾಷ್ಟ್ರವಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಯಾವುದೇ ಪದಾಧಿಕಾರಿಗಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಲಿಲ್ಲ. ನಮ್ಮ ಸಿಒಒ ಮತ್ತು ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ಡೈರೆಕ್ಟರ್ ಸುಮೀರ್ ಅಹಮ್ಮದ್ ಸಯ್ಯದ್ ಅವರನ್ನು ವೇದಿಕೆಗೆ ಆಹ್ವಾನಿಸಿಲ್ಲ ಎಂದು ಪಿಸಿಬಿ ಆರೋಪಿಸಿ ಐಸಿಸಿಗೆ ಪತ್ರ ಬರೆದಿದೆ.
ಐಸಿಸಿಯ ಶಿಷ್ಟಾಚಾರದ ಪ್ರಕಾರ ಐಸಿಸಿ ಮುಖ್ಯಸ್ಥ ಹಾಗೂ ಆತಿಥೇಯ ರಾಷ್ಟ್ರದ ಪ್ರತಿನಿಧಿ ಪ್ರಶಸ್ತಿ ಪ್ರದಾನ ಮಾಡಬೇಕು. ಆದರೆ ಪ್ರಶಸ್ತಿ ಪ್ರದಾನದ ವೇಳೆ ನ್ಯೂಜಿಲೆಂಡ್ ಕ್ರಿಕೆಟ್‌ನ ನಿರ್ದೇಶಕ ರೋಜರ್ ಟೌಸ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹಾಜರಿದ್ದರು. ಐಸಿಸಿ ಆಧ್ಯಕ್ಷ ಜೇ ಶಾ ಪ್ರಶಸ್ತಿ ಪ್ರದಾನ ಮಾಡಿದರು.