Saturday, December 21, 2024

ಗೆದ್ದು ತಂದ ಟ್ರೋಫಿಯನ್ನು ಕದ್ದು ತಿಂದರೇ?

ಹೊಸದಿಲ್ಲಿ: ಜಾರ್ಜಿಯಾದ ಮಹಿಳಾ ವಿಶ್ವ ಚೆಸ್‌ ಚಾಂಪಿಯನ್‌ ನೊನಾ ಗಾಪ್ರಿಂದಾಶ್ವಿಲಿ ಅವರ ಹೆಸರಿನಲ್ಲಿ ಚೆಸ್‌ ಒಲಂಪಿಯಾಡ್‌ಗಾಗಿಯೇ ನೀಡುವ ನೊನಾ ಗಾಪ್ರಿಂದಾಶ್ವಿಲಿ ಟ್ರೋಫಿ ಭಾರತೀಯ ಚೆಸ್‌ ಫೆಡರೇಷನ್‌ನಲ್ಲಿ ಕಳವಾಗಿದೆ. ಚಿನ್ನ ಮತ್ತು ಬೆಳ್ಳಿ ಸೇರಿ 3 ಕೆಜಿ ತೂಕದ ಈ ಟ್ರೋಫಿ ಬೆಲೆಕಟ್ಟಲಾಗದು. Chess Olympiad Nona Gaprindashvili Trophy missing in India.

2022ರಲ್ಲಿ ಚೆನ್ನೈನಲ್ಲಿ ನಡೆದ ಚೆಸ್‌ ಒಲಂಪಿಯಾಡ್‌ನಲ್ಲಿ ಭಾರತ ಜಯ ಗಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಇದು ಪರ್ಯಾಯ ಫಲಕವಾದ ಕಾರಣ ಎರಡು ವರ್ಷಕ್ಕೊಮ್ಮೆ ಗೆದ್ದ ರಾಷ್ಟ್ರಕ್ಕೆ ಹಸ್ತಾಂತರಿಸಲಾಗುತ್ತದೆ. ಈ ಬಾರಿ ಭಾರತ ಗೆಲ್ಲುವ ಹಂತ ತಲುಪಿರುವ ಹಿನ್ನೆಲೆಯಲ್ಲಿ ಭಾರತೀಯ ಚೆಸ್‌ ಫೆಡರೇಷನ್‌ಗೆ ಆ ಟ್ರೋಫಿಯನ್ನು ಹಸ್ತಾಂತರಿಸಬೇಕಾಗಿತ್ತು. ಕೆಲವು ವಾರಗಳ ಹಿಂದೆ ಅಂತಾರಾಷ್ಟ್ರೀಯ ಚೆಸ್‌ ಫೆಡರೇಷನ್‌ ಟ್ರೋಫಿಯನ್ನು ಹಿಂದಿರುಗಿಸುವಂತೆ ಭಾರತೀಯ ಚೆಸ್‌ ಫೆಡರೇಷನ್‌ಗೆ ಇಮೇಲ್‌ ಮೂಲಕ ಮನವಿ ಮಾಡಿತ್ತು. ನಾಳೆ ಬುಡಾಫೆಸ್ಟ್‌ನಲ್ಲಿ ಮುಕ್ತಾಯಗೊಳ್ಳಲಿರುವ ಚೆಸ್‌ ಒಲಿಂಪಿಯಾಡ್‌ನಲ್ಲಿ ಅದನ್ನು ಗೆದ್ದ ತಂಡಕ್ಕೆ ಹಸ್ತಾಂತರಿಸಬೇಕಾಗಿತ್ತು. ಮಾರ್ಚ್‌ 10 ರಂದು ಹೊಸದಾಗಿ ಅಧಿಕಾರ ವಹಿಸಿಕೊಂಡ ಭಾರತೀಯ ಚೆಸ್‌ ಫೆಡರೇಷನ್‌ನ ನೂತನ ಆಡಳಿತ ಮಂಡಳಿಗೆ ಟ್ರೋಫಿ ಕಳೆದುಹೋಗಿರುವ ಅಂಶ ಗೊತ್ತಾಗಿದೆ. ಈಗ ಪೊಲೀಸರಿಗೆ ದೂರು ನೀಡಿದ್ದಾರೆ. ಇದು ಭಾರತೀಯ ಕ್ರೀಡಾ ಕ್ಷೇತ್ರದಲ್ಲೇ ಅತ್ಯಂತ ಮುಜುಗರದ ಸಂಗತಿ. ಚೆನ್ನೈ ಮತ್ತು ಹೊಸದಿಲ್ಲಿಯಲ್ಲಿ ಈ ಬಗ್ಗೆ ಹುಡುಕಾಟ ನಡೆದಿದೆ.

ಲೊಬೊರ್ಟಾಸ್‌ ಕ್ಲಾಸಿಕ್‌ ಜುವೆಲ್ಲರಿ ಹೌಸ್‌ ಈ ಟ್ರೋಫಿಯನ್ನು ವಿನ್ಯಾಸಗೊಳಿಸಿ ತಯಾರಿಸಿದೆ. 2008ರಲ್ಲಿ ಡ್ರೆಸ್‌ಡೆನ್‌ನಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ ಟ್ರೋಫಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ನಿರ್ಮಿಸಲಾಗಿತ್ತು. ಮೂರು ಕೆಜಿ ಚಿನ್ನ ಮತ್ತು ಬೆಳ್ಳಿಯಿಂದ ಕೂಡಿರುವ ಈ ಟ್ರೋಫಿಯನ್ನು ಲೊಬೊರ್ಟಾಸ್‌ ಕ್ಲಾಸಿಕ್‌ ಜುವೆಲ್ಲರಿ ಹೌಸ್‌ ತನ್ನದೇ ವೆಚ್ಚದಲ್ಲಿ ನಿರ್ಮಿಸಿ ಅಂತಾರಾಷ್ಟ್ರೀಯ ಚೆಸ್‌ ಅಸೋಸಿಯೇಷನ್‌ಗೆ ಕೊಡುಗೆಯಾಗಿ ನೀಡಿತ್ತು.

Related Articles