Thursday, November 21, 2024

ಅಸಲಿ ಟ್ರೋಫಿ ಕಳ್ಳರಿಗೆ, ನಕಲಿ ಟ್ರೋಫಿ ಚಾಂಪಿಯನ್ನರಿಗೆ!

ಬೆಂಗಳೂರು: ಬುಡಾಫೆಸ್ಟ್‌ನಲ್ಲಿ ನಡೆದ 45ನೇ ಚೆಸ್‌ ಒಲಂಪಿಯಾಡ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಪಟ್ಟ ಗೆದ್ದು ಸಂಭ್ರಮಿಸಿತು. ಆದರೆ ನಮ್ಮ ಚಾಂಪಿಯನ್ನರಿಗೆ ಸಿಕ್ಕಿದ್ದು ಅಸಲಿ ಟ್ರೋಫಿಯಲ್ಲ ಬದಲಾಗಿ ನಕಲಿ ಟ್ರೋಫಿ. Chess Olympiad thieves got original trophy champions got replica.

2022ರಲ್ಲಿ ಭಾರತ ಚಾಂಪಿಯನ್‌ ಪಟ್ಟ ಗೆದ್ದಾಗ ವಿಶ್ವದ ಶ್ರೇಷ್ಠ ಚೆಸ್‌ ತಾರೆ ಜಾರ್ಜಿಯಾದ ನೋನಾ ಗಾಪ್ರಿಂಡಾಶ್ವಿಲಿ ಅವರ ಹೆಸರಿನಲ್ಲಿ ಸ್ಥಾಪಿತವಾದ ಅತ್ಯಂತ ಬೆಲೆ ಬಾಳುವ ಟ್ರೋಫಿಯನ್ನು ಗೆದ್ದಿತ್ತು. ಎರಡು ವರ್ಷಕ್ಕೊಮ್ಮೆ ನಡೆಯುವ ಚೆಸ್‌ ಒಲಿಂಪಿಯಾಡ್‌ನಲ್ಲಿ ಗೆದ್ದವರಿಗೆ ಈ ಟ್ರೋಫಿಯನ್ನು ನೀಡಲಾಗುತ್ತಿತ್ತು. ಆದರೆ ಭಾರತದಲ್ಲಿದ್ದ ಟ್ರೋಫಿ ನಾಪತ್ತೆಯಾಗಿದ್ದು ಭಾರತಕ್ಕೆ ಮುಜುಗರವೆನಿಸಿದೆ. ಅಸಲಿ ಟ್ರೋಫಿಯನ್ನು ಪತ್ತೆ ಹಚ್ಚಲಾಗದ ಕಾರಣ ಮಾದರಿ ಟ್ರೋಫಿಯನ್ನು ಸಂಘಟಕರು ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು. ಭಾರತದ ಚೆಸ್‌ ಚಾಂಪಿಯನ್ನರು ಆ ನಕಲಿ ಟ್ರೋಫಿಯನ್ನೇ ಹಿಡಿದು ಸಂಭ್ರಮಿಸಿದರು.

ಭಾರತದ ಪುರುಷರ ತಂಡ ಸ್ಲೊವೇನಿಯಾ ವಿರುದ್ಧ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ 3.5-0.5 ಅಂತರದಲ್ಲಿ ಜಯ ಗಳಿಸಿತು. ಗುಕೇಶದದ ಡಿ, ಪ್ರಜ್ಞಾನಂದ ಆರ್‌,. ಅರ್ಜುನ್‌ ಎರೈಗಸಿ, ವಿದಿತಿ ಗುಜರಾತಿ, ಪೆಂಟಾಲ ಹರಿಕೃಷ್ಣ, ಶ್ರೀನಾಥ್‌ ನಾರಾಯಣನ್‌ (ನಾಯಕ) ಭಾರತಕ್ಕೆ ಐತಿಹಾಸಿಕ ಜಯ ತಂದಿತ್ತರು.

ವನಿತೆಯರ ವಿಭಾಗದಲ್ಲಿ ಭಾರತ ತಂಡ ಅಜೈರ್‌ಬೈಜಾನ್‌ ವಿರುದ್ಧ 3.5-0.5 ಅಂತರದಲ್ಲಿ ಜಯ ಗಳಿಸಿತು. ಭಾರತದ ಹರಿಕಾ ದ್ರೋಣವಲ್ಲಿ, ವೈಶಾಲಿ ರಮೇಶ್‌ ಬಾಬು, ದಿವ್ಯಾ ದೇಶಮುಖ್‌,ವಂತಿಕಾ ಅಗರ್ವಾಲ್‌, ತಾನಿಯಾ ಸಚ್‌ದೇವ್‌ ಮತ್ತು ಅಭಿಜಿತ್‌ ಕುಂಟೆ (ನಾಯಕಿ) ಜಯದ ರೂವಾರಿ ಎನಿಸಿದರು.

Related Articles