Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಪ್ಯಾಡಲ್ ಫೆಸ್ಟಿವಲ್ ಆಂಟೋನಿಯೋ, ಎಸ್ಪೆರಾಂಜಾಗೆ ಪ್ರಶಸ್ತಿ

ಮಂಗಳೂರು: ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025 ರ ಅಂತಾರಾಷ್ಟ್ರೀಯ SUP ಚಾಂಪಿಯನ್‌ ಆದ  ಅಂತಾರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಸ್ಪರ್ಧೆ ಇಂದು ಸಸಿಹಿತ್ಲು ಬೀಚ್‌ನಲ್ಲಿ  ಮುಕ್ತಾಯಗೊಂಡಿತು.  ಡೆನ್ಮಾರ್ಕ್‌ನ ಕ್ರಿಸ್ಟಿಯನ್ ಆಂಡರ್ಸನ್ ಮತ್ತು ಸ್ಪೇನ್‌ನ ಎಸ್ಪೆರಾಂಜಾ ಬರೇರಾಸ್ APP ಪ್ರೋ ಸ್ಪ್ರಿಂಟ್ ಫೈನಲ್ಸ್‌ನಲ್ಲಿ ವಿಜಯಶಾಲಿಗಳಾಗಿ ಹೊರಹೊಮ್ಮಿದರು. ಪುರುಷ ವಿಭಾಗದಲ್ಲಿ ಆಂಟೋನಿಯೋ ಮೊರಿಲ್ಲೊ ಮತ್ತು ಮಹಿಳಾ ವಿಭಾಗದಲ್ಲಿ ಎಸ್ಪೆರಾಂಜಾ ಬರೇರಾಸ್ ಚಾಂಪಿಯನ್ ಶಿಪ್ ಆಗಿ ಹೊರಹೊಮ್ಮಿದರು. U-18 ವಿಭಾಗದಲ್ಲಿ ಸ್ಥಳೀಯ ಪ್ರತಿಭೆ ಆಕಾಶ್ ಪುಜಾರ್ ಒಟ್ಟಾರೆ ಚಾಂಪಿಯನ್ ಆಗಿ ಮಿಂಚಿದರೆ, ಶೇಖರ್ ಪಚ್ಚೈ  4ನೇ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದರು. Christian Andersen and Esperanza Barreras dominate Pro Sprints as India Paddle Festival 2025 concludes in Spectacular fashion

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ಐಕಾನ್, ಕ್ರೀಡಾ ಉತ್ಸಾಹಿ ಮತ್ತು ಮಂಗಳೂರಿನವರೇ ಆದ ಸುನೀಲ್ ಶೆಟ್ಟಿ ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಶೆಟ್ಟಿ  ‘ಈ ಚಿಕ್ಕ ಸ್ಥಳವು, ತೀರಾ ಸಣ್ಣದಾಗಿದ್ದರೂ, ಸುಂದರ ಹಾಗೂ ಅತ್ಯಂತ ಪವಿತ್ರ ಸ್ಥಳವಾಗಿದ್ದು, ಇಂತಹ ದೊಡ್ಡ ಮಟ್ಟದ ಈವೆಂಟ್ ನಡೆಸುವ ಸಾಮರ್ಥ್ಯವನ್ನ ಹೊಂದಿದೆ. ನಮ್ಮ ಮೇಲಿನ ನಿಮ್ಮ ನಂಬಿಕೆ ನಮಗೆ ಬಹಳ ಪ್ರಮುಖವಾಗಿದೆ ಎಂದಿದ್ದಾರೆ.

ಸರ್ಫಿಂಗ್ ಸ್ವಾಮೀಜಿಯವರು ಇದನ್ನು ಕೇವಲ ಒಂದು ಸ್ಥಳವೆಂದು ಅಲ್ಲ, ಇದು ಅದ್ಭುತ ಭೂಮಿಯೆಂದು ನಂಬಿದ್ದರು. ಅವರು ಈಗ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ದೃಷ್ಟಿಕೋನ ಮತ್ತು ಪರಂಪರೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.

APP ಪ್ರೋ ಸ್ಪ್ರಿಂಟ್ಸ್ ಪುರುಷರ ಫೈನಲ್‌ನಲ್ಲಿ, ಕ್ರಿಸ್ಟಿಯನ್ ಆಂಡರ್ಸನ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಸ್ಪೇನ್‌ನ ಆಂಟೋನಿಯೋ ಮೊರಿಲ್ಲೊ (ಎರಡನೇ ಸ್ಥಾನ) ಮತ್ತು ಹಂಗೇರಿ‌ನ ಡೇನಿಯಲ್ ಹಸುಲಿಯೋ (ಮೂರನೇ ಸ್ಥಾನ)  ಪ್ರಥಮ ಸ್ಥಾನವನ್ನು ಪಡೆದರು. APP ಪ್ರೋ ಸ್ಪ್ರಿಂಟ್ಸ್ ಮಹಿಳಾ ಫೈನಲ್ ನಲ್ಲಿ, ಎಸ್ಪೆರಾಂಜಾ ಬರೇರಾಸ್ ಪ್ರಥಮ ಸ್ಥಾನ ಪಡೆದರೆ, ಕೊರಿಯಾದ ಸುಜಿಯೊಂಗ್ ಲಿಮ್ (ಎರಡನೇ ಸ್ಥಾನ) ಮತ್ತು ದಕ್ಷಿಣ ಆಫ್ರಿಕಾದ ಚಿಯಾರಾ ವೋರ್ಸ್ಟರ್ (ಮೂರನೇ ಸ್ಥಾನ) ಪಡೆದಿದ್ದಾರೆ. APP ಸ್ಪ್ರಿಂಟ್ಸ್ ಗ್ರಾಮ್ಸ್ (U-15) ಫೈನಲ್ ನಲ್ಲಿ ಪ್ರವೀಣ್ ಪುಜಾರ್ ಪ್ರಥಮ ಸ್ಥಾನವನ್ನು ಪಡೆದು ಮೆರೆದರೆ, ಅನೀಶ್ ಕುಮಾರ್ ಎರಡನೇ ಸ್ಥಾನಕ್ಕೆ ಮತ್ತು ಮುಹಮ್ಮದ್ ಇರ್ಫಾನ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. 

U-18 ಬಾಲಕರ ವಿಭಾಗದಲ್ಲಿ, ತೈಲಾಂಡಿನ ಮಾರ್ಟಿನ್ ಜೆ ಪಟುಂಸುವಾನ್ ಅದ್ಭುತ ವೇಗದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಚಿನ್ನ ಗೆದ್ದರು. ಭಾರತದ ಆಕಾಶ್ ಪುಜಾರ್ ಮತ್ತು ರಾಜು ಪುಜಾರ್ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಭಾರತದಲ್ಲಿ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ (SUP)ನ ಪ್ರಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದಕ್ಕೆ ಈ ಫೆಸ್ಟಿವಲ್ ಸಾಕ್ಷಿಯಾಗಿದೆ. ಈ ಫೆಸ್ಟಿವಲ್ 4 ಕಿಮೀ ಸಮುದಾಯ ರೇಸ್ ಅನ್ನು ಕೂಡ ಆಯೋಜಿಸಿತು.

ಈ ರೇಸ್‌ನಲ್ಲಿ ಸಮಂತ್ ಪ್ರಥಮ ಸ್ಥಾನ ಪಡೆದರೆ, ಗೋಕುಲ್ ಸಮೀಪದ ಪೈಪೋಟಿಯೊಂದಿಗೆ ಎರಡನೇ ಸ್ಥಾನ ಪಡೆದರು, ಮತ್ತು ಮಾಧುಕರ್ ಮೂರನೇ ಸ್ಥಾನದಲ್ಲಿ ಮುನ್ನಡೆ ಸಾಧಿಸಿದರು.

ಚಾಂಪಿಯನ್ ಶಿಪ್ ಪಟ್ಟ ಗಿಟ್ಟಿಸಿಕೊಂಡ ಆಂಟೋನಿಯೋ ಮೊರಿಲ್ಲೊ ಮತ್ತು ಎಸ್ಪೆರಾಂಜಾ ಬರೇರಾಸ್

ಸ್ಪೇನ್‌ನ ಆಂಟೋನಿಯೋ ಮೊರಿಲ್ಲೊ ಒಟ್ಟಾರೆ ಪುರುಷರ ಚಾಂಪಿಯನ್ ಆಗಿ ಹೊರಹೊಮ್ಮಿದರು, 18,000 ಅಂಕಗಳೊಂದಿಗೆ ಗೆಲುವು ಸಾಧಿಸಿದರು. ಡೆನ್ಮಾರ್ಕ್‌ನ ಕ್ರಿಸ್ಟಿಯನ್ ಆಂಡರ್ಸನ್ (16,500 ಅಂಕ) ಎರಡನೇ ಸ್ಥಾನಕ್ಕೆ ಮತ್ತು ಹಂಗೇರಿಯ ಡೇನಿಯಲ್ ಹಸುಲಿಯೋ (14,500 ಅಂಕ) ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಭಾರತದ ಶೇಖರ್ ಪಚ್ಚೈ ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 10,750 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿದರು. ಈ ಸಾಧನೆಯು ಭಾರತೀಯ SUP ಕ್ರೀಡಾಪಟುಗಳಿಗಾಗಿ ಪ್ರಮುಖ ಮೈಲಿಗಲ್ಲಾಗಿದ್ದು, ದೇಶದ ಪ್ಯಾಡ್ಲಿಂಗ್ ಕ್ರೀಡೆಯ ಬೆಳವಣಿಗೆಯಲ್ಲಿ ಮಹತ್ವದ ಘಟ್ಟವಾಗಿದೆ.

ಮಹಿಳಾ ವಿಭಾಗದಲ್ಲಿ, ಎಸ್ಪೆರಾಂಜಾ ಬರೇರಾಸ್ APP ಡಿಸ್ಟನ್ಸ್ ರೇಸ್ ಮತ್ತು ಸ್ಪ್ರಿಂಟ್ ರೇಸ್ ಎರಡನ್ನೂ ಗೆದ್ದು, ಪರಿಪೂರ್ಣ 20,000 ಅಂಕಗಳನ್ನು ಗಳಿಸಿದರು.

ದಕ್ಷಿಣ ಆಫ್ರಿಕಾದ ಚಿಯಾರಾ ವೋರ್ಸ್ಟರ್ ಮತ್ತು ಕೊರಿಯಾದ ಸುಜಿಯೊಂಗ್ ಲಿಮ್  14,500 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಕಿರಿಯರ ವಿಭಾಗದಲ್ಲಿ, ಸ್ಥಳೀಯ ಪ್ರತಿಭೆ ಆಕಾಶ್ ಪುಜಾರ್ 16,000 ಅಂಕಗಳನ್ನು ಪಡೆದು U-18 ಒಟ್ಟಾರೆ ಚಾಂಪಿಯನ್ ಆಗಿ ಮಿಂಚಿದರು. ಇಂಡೋನೇಷಿಯಾದ ಕೀಫ್ ಅನಾರ್ಗ್ಯ ಪ್ರಣೋಟೋ ಎರಡನೇ ಸ್ಥಾನ ಗಳಿಸಿದರೆ, ತೈಲಾಂಡಿನ ಮಾರ್ಟಿನ್ ಜೆ ಪಟುಂಸುವಾನ್ ಮೂರನೇ ಸ್ಥಾನವನ್ನು ಪಡೆದು ಗಮನಸೆಳೆಯುವ ಪ್ರದರ್ಶನ ನೀಡಿದರು. ಭಾರತದ ಏಕೈಕ ಅಂತಾರಾಷ್ಟ್ರೀಯ SUP ಚಾಂಪಿಯನ್‌ಷಿಪ್ ಆಗಿರುವ ಇಂಡಿಯಾ ಪ್ಯಾಡಲ್ ಫೆಸ್ಟಿವಲ್, ಇದೀಗ ಎರಡನೇ ಯಶಸ್ವೀ ಆವೃತ್ತಿಯನ್ನು ಪೂರ್ಣಗೊಳಿಸಿದ್ದು, ಪ್ಯಾಡಲ್‌ಬೋರ್ಡಿಂಗ್‌ಗಾಗಿ ಪ್ರಮುಖ ತಾಣವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.

ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಮಂತ್ರಾ ಸರ್ಫ್ ಕ್ಲಬ್ ಆಯೋಜಿಸಿದ ಈ ಇವೆಂಟ್, WrkWrk ಸಹಯೋಗದಲ್ಲಿ, ಇನ್‌ಕ್ರೆಡಿಬಲ್ ಇಂಡಿಯಾ ಮತ್ತು ಕರ್ನಾಟಕ ಟೂರಿಸಂ ಪ್ರಾಯೋಜಕತ್ವದಲ್ಲಿ ನಡೆಸಲ್ಪಟಿತ್ತು. ಈ ಫೆಸ್ಟಿವಲ್ ಭಾರತೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಅತ್ಯುತ್ತಮ ಮಟ್ಟದಲ್ಲಿ ಸ್ಪರ್ಧಿಸಲು ಅಪೂರ್ವ ವೇದಿಕೆಯನ್ನು ಒದಗಿಸಿದೆ.

ಅಸೋಸಿಯೇಷನ್ ಆಫ್ ಪ್ಯಾಡಲ್‌ಸರ್ಫ್ ಪ್ರೊಫೆಷನಲ್ಸ್ (APP) ವರ್ಲ್ಡ್ ಟೂರ್ ಕಳೆದ ವರ್ಷ ಭಾರತದಲ್ಲಿ ತನ್ನ ಪಾದಾರ್ಪಣೆ ಮಾಡಿದ್ದು, ದೇಶದ ಏಕೈಕ ಅಂತಾರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಚಾಂಪಿಯನ್‌ಷಿಪ್ ಆಗಿದೆ. ಈ ಕ್ರೀಡೆ ದೇಶಾದ್ಯಂತ ವೇಗವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಈ ಫೆಸ್ಟಿವಲ್ ಇದರ ಪ್ರಭಾವವನ್ನು ಹೆಚ್ಚಿಸುತ್ತದೆ.


administrator