Tuesday, December 3, 2024

ಪವರ್‌ಲಿಫ್ಟಿಂಗ್‌ನಲ್ಲಿ ದೇಶಕ್ಕೆ ಕೀರ್ತಿ ತಂದ ಗುರು ಶಿಷ್ಯರು!

ಮಂಗಳೂರು: ಚಾಂಪಿಯನ್‌ಷಿಪ್‌ನಲ್ಲಿ ಗುರು ಶಿಷ್ಯರು ಒಂದಾಗಿ ಪ್ರಶಸ್ತಿ ಗೆದ್ದಿರುವ ಸುದ್ದಿಯನ್ನು ನಾವು ಹಿಂದೆಯೂ ಕೇಳಿದ್ದೇವೆ. ಮಂಗಳೂರಿನ ಗುರು ಮತ್ತು ಶಿಷ್ಯರು ದಕ್ಷಿಣ ಆಫ್ರಿಕಾದ ಸನ್‌ಸಿಟಿಯಲ್ಲಿ ನಡೆದ ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದು ಮತ್ತೊಮ್ಮೆ ಆ ಅಪೂರ್ವ ಕ್ಷಣಗಳನ್ನು ನೆನಪಿಸುವಂತೆ ಮಾಡಿದ್ದಾರೆ. Coach and his student both won the Gold medals at Commonwealth Bench Press Championship at South Africa.

ಮಂಗಳೂರಿನ ಅಂತಾರಾಷ್ಟ್ರೀಯ ಪವರ್‌ ಲಿಫ್ಟರ್‌ ಪ್ರದೀಪ್‌ ಕುಮಾರ್‌ ಹಾಗೂ ಅವರ ಶಿಷ್ಯೆ ಶಾಲನ್‌ ಪಿಂಟೋ ಈ ಸಾಧನೆ ಮಾಡಿರುವ ಗುರು ಶಿಷ್ಯರು. ಕಾಮನ್‌ವೆಲ್ತ್‌ ಬೆಂಚ್‌ಪ್ರೆಸ್‌ ಚಾಂಪಿಯನ್‌ಷಿಪ್‌ 2024ರಲ್ಲಿ ಪ್ರದೀಪ್‌ ಕುಮಾರ್‌ ಚಿನ್ನದ ಪದಕ ಗೆದ್ದರೆ ಅವರಲ್ಲೇ ತರಬೇತಿ ಪಡೆದ ಶಾಲನ್‌ ಪಿಂಟೋ ಕೂಡ ಚಿನ್ನದ ಸಾಧನೆ ಮಾಡಿದ್ದಾರೆ.

83ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪ್ರದೀಪ್‌ ಕುಮಾರ್‌ 275ಕೆಜಿ ಭಾರವನ್ನು ಎತ್ತಿ ಚಿನ್ನ ಗೆದ್ದರು. ನ್ಯೂ ಸೌಥ್‌ ವೇಲ್ಸ್‌ನ ಟಾಮ್‌ ಮೋರ್ಗನ್‌ ಉತ್ತಮ ಪೈಪೋಟಿ ನೀಡಿದರೂ ಪ್ರದೀಪ್‌ ಕುಮಾರ್‌ ಅವರ ಸಾಮರ್ಥ್ಯವನ್ನು ಸರಿದೂಗಿಸುವಲ್ಲಿ ವಿಫಲರಾದರು.

ಪ್ರದೀಪ್‌ ಕುಮಾರ್‌ ಈ ಹಿಂದೆಯೂ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಭಾರತದ ಅತ್ಯಂತ ಪ್ರಸಿದ್ಧ ಪವರ್‌ಲಿಫ್ಟರ್‌ ಎನಿಸಿದ್ದಾರೆ. ಮಂಗಳೂರಿನ ಪ್ರಸಿದ್ಧ Kashrap Fitness ಕಶ್ರಪ್‌ ಫಿಟ್ನೆಸ್‌ನಲ್ಲಿ ತರಬೇತುದಾರರಾಗಿರುವ ಪ್ರದೀಪ್‌ ಕುಮಾರ್‌ ಅವರಲ್ಲಿ ತರಬೇತಿ ಪಡೆಯುತ್ತಿರುವ ಶಾಲನ್‌ ಪಿಂಟೋ 47 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ 65 ಕೆಜಿ ಭಾರವೆತ್ತಿ ಚಿನ್ನದ ಸಾಧನೆ ಮಾಡಿದರು. ಪಿಂಟೋ ಕೇವಲ ಚಿನ್ನ ಗೆದ್ದಿರುವುದು ಮಾತ್ರವಲ್ಲ ಚಾಂಪಿಯನ್‌ಷಿಪ್‌ನಲ್ಲಿ ಬೆಸ್ಟ್‌ ಲಿಫ್ಟರ್‌ ಗೌರವಕ್ಕೂ ಪಾತ್ರರಾದರು.

ಈ ಅವಕಾಶ ನೀಡಿರುವುದಕ್ಕಾಗಿ ಕರ್ನಾಟಕ ಪವರ್‌ಲಿಫ್ಟಿಂಗ್‌ ಕಾರ್ಪೋರೇಷನ್‌, ಬಾಲಾಂಜನೇಯ ಜಿಮ್ನಾಷಿಯಂ ಹಾಗೂ ಕಶ್ರಪ್‌ ಫಿಟ್ನೆಸ್‌ಗೂ ಧನ್ಯವಾದ ಹೇಳಿದ್ದಾರೆ.

Related Articles