Thursday, November 14, 2024

ಎಲ್ಲೂರು ಕಂಬಳಕ್ಕೆ ಎಲ್ಲರಿಗೂ ಸ್ವಾಗತ

ಕುಂದಾಪುರ: ಕರಾವಳಿಯ ಜಾನಪದ ಕ್ರೀಡೆ ವರುಷದ ಕಂಬಳಕ್ಕೆ ಹರುಷದ ಮುನ್ನುಡಿ ಎಂಬಂತೆ ಬೈಂದೂರು ತಾಲೂಕು ಕಂಬಳ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲೂರು ಕಂಬಳ ನವೆಂಬರ್‌ 27 ರ ಬುಧವಾರದಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. Coastal Karnataka Folk sports Kambala will kick start by Yelluru Kambala on 27th November 2024

ಎಲ್ಲೂರು ಮನೆಯವರ ಕಂಬಳ ಗದ್ದೆಯಲ್ಲಿ ನಡೆಯುವ ಈ ಕಂಬಳ ಹಿರಿಯ ಧಾರ್ಮಿಕ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ಹಿರಿತನದಲ್ಲಿ ನಡೆಯಲಿದೆ. “ಕೃಷಿ ಖುಷಿಯ ನಾಗಾಲೋಟ” ಎಂಬ ಘೋಷ ವಾಕ್ಯದೊಂದಿಗೆ ನಡೆಯುವ ಈ ಕಂಬಳದಲ್ಲಿ 50ಕ್ಕೂ ಹೆಚ್ಚು ಜೋಡಿ ಕೋಣಗಳು ಪಾಲ್ಗೊಳ್ಳಲಿವೆ. ಪಾರಂಪರಿಕ ಡೋಲು, ಕೇರಳದ ಚಂಡೆ ವಾದನ ಕಂಬಳಕ್ಕೆ ಮತ್ತಷ್ಟು ಮೆರಗು ನೀಡಲಿದೆ.ಇದೇ ಸಂದರ್ಭದಲ್ಲಿ ಕೋಣಗಳ ಯಜಮಾನರನ್ನು , ಓಟಗಾರರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.

ಸ್ಪರ್ಧೆ: ಹಗ್ಗ ಅತಿ ಕಿರಿಯ, ಹಗ್ಗ ಕಿರಿಯ, ಹಗ್ಗ ಹಿರಿಯ, ಕನೆ ಹಲಗೆ, ಸ್ಪರ್ಧೆಗಳು ನಡೆಯಲಿದ್ದು, ಮಿಂಚಿನ ಓಟಗಾರ ಪುರಸ್ಕಾರವನ್ನೂ ನೀಡಲಾಗುವುದು.

ಪ್ರತಿಯೊಂದು ವಿಭಾಗದ ವಿಜೇತರಿಗೆ ಆಕರ್ಷಕ ಟ್ರೋಫಿ ಜೊತೆಗೆ ನಗದು ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Related Articles