ಆಲ್ಫ್ರೆಡ್ ಗ್ರೆಗೊರಿ ಡಿʼಸೋಜಾ ಸ್ಮಾರಕ ಬ್ಯಾಡ್ಮಿಂಟನ್ ಟೂರ್ನಿ
ಕುಂದಾಪುರ: ಕುಂದಾಪುರದ ಜನಪ್ರಿಯ ಬ್ಯಾಡ್ಮಿಂಟನ್ ಅಕಾಡೆಮಿ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನ ಸ್ಫೂರ್ತಿ ಆಲ್ಫ್ರೆಡ್ ಗ್ರೆಗೋರಿ ಡಿʼಸೋಜಾ ಅವರ ಸ್ಮರಣಾರ್ಥವಾಗಿ ಏಪ್ರಿಲ್ 26 ಮತ್ತು 27, 2025 ರಂದು ಎರಡು ದಿನಗಳ ಕಾಲ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಲಾಗಿದೆ. Costa Badminton Center Kundapura Organizing Alfred Gregory D’Souza memorial Badminton Tourney on April 26 and 27 2025.
ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ 13 ಮತ್ತು 15 ವರ್ಷ ವಯೋಮಿತಿಯ ಬಾಲಕರ ಸಿಂಗಲ್ಸ್ ಹಾಗೂ ಡಬಲ್ಸ್, ಮಹಿಳಾ ಡಬಲ್ಸ್, ಪುರುಷರ ಡಬಲ್ಸ್ ಹಾಗೂ ಪುರುಷರ ಜಂಬಲ್ಡ್ ಡಬಲ್ಸ್ 85+ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ನಗದು ಬಹುಮಾನ, ಟ್ರೋಫಿ ಹಾಗೂ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನ ಕೊಡುಗೆಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ವಿಜೇತರಾದವರಿಗೆ ನೀಡಲಾಗುವುದು.
ಟೂರ್ನಿಗೆ MAVIS 350 ಶಟ್ಲ್ ಬಳಸಲಾಗುವುದು. ಹೆಸರನ್ನು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 13ನೇ ಏಪ್ರಿಲ್ 2025.
ಟೂರ್ನಿಯು ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್, ವಿನಾಯಕ ಕೋಡಿ ರಸ್ತೆ, ಹಳಅಳಿವೆ ಗ್ರಾಮ, ಕೋಟೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿ, ಹಂಗಳೂರು ಪೋಸ್ಟ್, ಕುಂದಾಪುರ ತಾಲೂಕು, 576217 ಇಲ್ಲಿ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ಕರೆ ಮಾಡಿ: +91- 7204288366, 8147438366 ದೂರವಾಣಿಯನ್ನು ಸಂಪರ್ಕಸಿಸಬಹುದು.