ಸ್ಪೋರ್ಟ್ಸ್ ಮೇಲ್ ವರದಿ
ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಶನ್ ಆಥಿತ್ಯದಲ್ಲಿ ಭಾರತ್ ಸ್ಪೋರ್ಟ್ಸ್ ಯೂನಿಯನ್ ಹಾಗೂ ಕ್ರೆಡೆನ್ಷಿಯಾ ಆಶ್ರಯದಲ್ಲಿ ನಡೆಯಲಿರುವ ಕೋರ್ಟ್ ವಾರ್ ಅಂತರ ಕಾಲೇಜು ಬಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ಗೆ ಚಾಲನೆ ದೊರೆಯಿತು.
ಅಕ್ಟೋಬರ್ 2ರ ವರೆಗೆ ನಡೆಯುವ ಈ ಟೂರ್ನಿಯಲ್ಲಿ ಮಹಿಳಾ ಹಾಗೂ ಪುರುಷ ತಂಡಗಳು ಸೇರಿ ಒಟ್ಟು 32 ತಂಡಗಳು ಪಾಲ್ಗೊಳ್ಳಲಿವೆ. ಜೈನ ವಿಶ್ವವಿದ್ಯಾಲಯ, ಕ್ರೈಸ್ಟ್ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜ್, ಎಮ್ ಎಸ್ ಆರ್ ಐ ಟಿ, ಆರ್ ವಿ ಸಿ ಸೇರಿದಂತೆ ರಾಜ್ಯದ ಪ್ರಮುಖ ಕಾಲೇಜುಗಳು ಕೋರ್ಟ್ ವಾರ್ ಬಾಸ್ಕೆಟ್ ಬಾಲ್ ಚಾಂಪಿಯನ್ಷಿಪ್ ನಲ್ಲಿ ಪಾಲ್ಗೊಳ್ಳಲಿವೆ. ಸ್ನಾತಕೋತ್ತರ ಪದವಿ, ಪದವಿ ಹಾಗೂ ಪಿ ಯು ಸಿ ಹಂತದ ಆಟಗಾರರು ಪ್ರತಿಷ್ಠಿತ ಟ್ರೋಫಿಗಾಗಿ ಸೆಣಸಲಿದ್ದಾರೆ.
ಐ ಪಿ ಎಲ್ ಮಾದರಿ
ಎಲ್ಇಡಿ ಸ್ಕ್ರೀನ್, ಶೂಟಿಂಗ್ ಸ್ಪರ್ಧೆ, ಸಂಗೀತ, ವಿಶೇಷ ಬಹುಮಾನಗಳನ್ನು ಪ್ರೇಕ್ಷಕರಿಗೆ ನೀಡಲಾಗುವುದು. ಐ ಪಿ ಎಲ್ ರೀತಿಯಲ್ಲಿ ಟೂರ್ನಿಗೆ ಮೆರಗು ನೀಡಲಾಗುವುದು. ಪಾಲ್ಗೊಳ್ಳುವ ತಂಡಗಳ ನಾಯಕರ ಉಪಸ್ಥಿತಿಯಲ್ಲಿ ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಯಿತು. ಭಾರತ ಬ್ಯಾಸ್ಕೆಟ್ಬಾಲ್ ತಂಡದ ಮಾಜಿ ನಾಯಕ ಸಂಜಯ್ ರಾಜ್, ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಹಾಗೂ ಕೋಚ್ ಎಸ್. ವೆಂಕಟೇಶ್ ಹಾಗೂ ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ ನಾರಾಯಣ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.