Thursday, April 18, 2024

ಪ್ರಶಸ್ತಿ ಮೊತ್ತವನ್ನು ಮಡಿದ ಸೈನಿಕರ ಕುಟುಂಬಕ್ಕೆ ನೀಡಿದ ವೆಂಕಟರಮಣ ಪಿತ್ರೋಡಿ

ಕೋಟ ರಾಮಕೃಷ್ಣ ಆಚಾರ್ಯ

17.2.2019 ರವಿವಾರದಂದು ಉದ್ಯಾವರ ಗ್ರಾಮ ಪಂಚಾಯತ್ ಅಂಗಳದಲ್ಲಿ ಜರುಗಿದ 40 ವರ್ಷಕ್ಕಿಂತ ಮೇಲ್ಪಟ್ಟ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟ ಸೌತ್ ಸ್ಟಾರ್ ಟ್ರೋಫಿಯನ್ನು ವೆಂಕಟರಮಣ ಸ್ಪೋರ್ಟ್ಸ್ &ಕಲ್ಚರಲ್ ಕ್ಲಬ್(ರಿ)ಪಡೆಯಿತು

.
ಈ ಪಂದ್ಯಾಕೂಟದಲ್ಲಿ 90 ರ ದಶಕದ ಶ್ರೇಷ್ಠ ತಂಡಗಳಾದ ಪಡುಬಿದ್ರಿ ಫ್ರೆಂಡ್ಸ್, ವೆಂಕಟರಮಣ ಪಿತ್ರೋಡಿ, ನೇತಾಜಿ ಸ್ಪೋರ್ಟ್ಸ್ ಕ್ಲಬ್,ಕೋಸ್ಟಲ್ ಮಲ್ಪೆ,ಸೌತ್ ಸ್ಟಾರ್ ಅಂಬಲಪಾಡಿ,ಕುತ್ಪಾಡಿ ಫ್ರೆಂಡ್ಸ್ ಹಾಗೂ ಮಿಷನ್ ಕಂಪೌಂಡ್ ಉಡುಪಿ ಸಹಿತ 7 ತಂಡಗಳು ಭಾಗವಹಿಸಿದ್ದವು.
 ಮೊದಲು ಬ್ಯಾಟಿಂಗ್ ಮಾಡಿ ಸತೀಶ್.ಜಿ ಮಲ್ಪೆ ಯವರ ಅಬ್ಬರದ ಆಟ,ಪ್ರವೀಣ್ ಪಿತ್ರೋಡಿಯವರ ಆರಂಭಿಕ ಭಾಗೀದಾರಿಕೆಯ ಫಲವಾಗಿ 8 ಓವರ್ ಗಳಲ್ಲಿ 103 ರನ್ ಗಳ ಬ್ರಹತ್ ಮೊತ್ತವನ್ನು ಪೇರಿಸಿತ್ತು.ಎದುರಾಳಿ ತಂಡ ಸೌತ್ ಸ್ಟಾರ್ ಅಂಬಲಪಾಡಿ 50 ರ ಗಡಿಯಷ್ಟೇ ದಾಟಿ ಸೋಲೊಪ್ಪಿಕೊಂಡಿತು. ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ಸತೀಶ್‌.ಜಿ,ಉತ್ತಮ ದಾಂಡಿಗನಾಗಿ ಸೌತ್ ಸ್ಟಾರ್ ನ ಸತೀಶ್, ಹಾಗೂ ಬೆಸ್ಟ್ ಬೌಲರ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ವೆಂಕಟರಮಣ ಪಿತ್ರೋಡಿಯ ರಾಜೇಶ್ ಬೊಳ್ಜೆ ಪಡೆದುಕೊಂಡರು. ವಿಜೇತ ವೆಂಕಟರಮಣ ತಂಡ ಪ್ರಶಸ್ತಿ ರೂಪದಲ್ಲಿ ಬಂದ ನಗದನ್ನು  ಇತ್ತೀಚೆಗೆ ಕಾಶ್ಮೀರದ ಪುಲ್ವಾಮದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಾರತದ  ಹೆಮ್ಮೆಯ ಸೈನಿಕರಾದ ಮಂಡ್ಯದ ಗುರು ಅವರ ಪರಿವಾರಕ್ಕೆ ಬ್ಯಾಂಕ್ ಮುಖಾಂತರ ತಲುಪಿಸಿರುವುದು ಎಲ್ಲರ ಶ್ಲಾಘನೆಗೆ ಮಾತ್ರವಾಗಿದೆ.
ಕಳೆದ ಮೂರು ದಶಕಗಳಿಂದ ಕರ್ನಾಟಕ ರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ನ ಇತಿಹಾಸದ ಪುಟಗಳಲ್ಲಿ ಬರೋಬ್ಬರಿ 14 ಬಾರಿ ಅತಿ ಶಿಸ್ತಿನ ತಂಡ ಪ್ರಶಸ್ತಿ ಪಡೆದು,  ಸಾಮಾಜಿಕ,ಧಾರ್ಮಿಕ,ಕ್ರೀಡೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಅತಿ ಶಿಸ್ತು ಮಾದರಿಯ ಅಧ್ಯಾಯ ಬರೆದಿರುವ ತಂಡ ವೆಂಕಟರಮಣ ಪಿತ್ರೋಡಿ.ವಿ.ಎಸ್‌.ಸಿ ಬ್ಲಡ್ ಫಾರ್ ಲೈಫ್ ಗ್ರೂಪ್ ನ ಮುಖಾಂತರ ಈವರೆಗೆ 1,350 ಯೂನಿಟ್ ಬ್ಲಡ್ ಸಂಗ್ರಹಿಸಿ ನೀಡಿದ್ದು, ಕಳೆದ ತಿಂಗಳಿನಲ್ಲಿ 12 ನೇ ವರ್ಷದ ಯಶಸ್ವಿ ಪಿ.ಪಿ.ಎಲ್
ಕಾರ್ಯಕ್ರಮ ಸಂಘಟಿಸಿ  ವಿದ್ಯಾರ್ಥಿ ವೇತನ ವಿತರಣೆ, 5 ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಪ್ರವೇಶ ಪತ್ರ ವಿತರಣೆ,ವಿ.ಎಸ್.ಸಿ “ಪ್ರೌಡ್ ಮದರ್ಸ್ ಸನ್ಮಾನ ಕಾರ್ಯಕ್ರಮ,ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ನ ರಕ್ತದಾನಿ ಸದಸ್ಯರಿಗೆ ಜೀವರಕ್ಷಕ ಗೌರವ ಪ್ರಶಸ್ತಿ,ಬಾಲ್ ಔಟ್ ಸ್ಪರ್ಧೆ,ಯುವ ಕ್ರಿಕೆಟಿಗರ ಅನ್ವೇಷಣೆ ಪಿ.ಪಿ.ಎಲ್, Stop Drinking Start Living,Plant trees Save Envoirnmnt ಹೀಗೆ ಹಲವಾರು ವಿಶಿಷ್ಟ ಯೋಜನೆಗಳಿಗೆ ಮುನ್ನಡಿ ಬರೆದಿತ್ತು.ಈ ನಿಟ್ಟಿನಲ್ಲಿ ನಾಯಕ ಪ್ರವೀಣ್ ಪಿತ್ರೋಡಿ ಯವರ ನೇತೃತ್ವದಲ್ಲಿ ಯಶಸ್ವಿಯಾಗಿ ತಂಡ ಅಪಾರ ಕ್ರೀಡಾಭಿಮಾನಿಗಳ ಮನ ಗೆದ್ದಿರುತ್ತದೆ.

Related Articles