Friday, November 22, 2024

ಅಲೆಕ್ಸ್‌ ಹೇಲ್ಸ್‌ಗೆ 3 ವಾರಗಳ ಬ್ಯಾನ್‌

ಲಂಡನ್‌: ಮನರಂಜನಾ ಔಷಧ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌ ಅವರನ್ನು21 ದಿನಗಳ ಕಾಲ ಕ್ರಿಕೆಟ್‌ಗೆ ನಿಷೇಧ ಹೇರಲಾಗಿದೆ.

ಕಳೆದ ಒಂದು ವಾರದ ಹಿಂದಷ್ಟೆ ಅಲೆಕ್ಸ ಹೇಲ್ಸ್‌ ಐಸಿಸಿ ವಿಶ್ವಕಪ್‌ 15 ಸಂಭಾವ್ಯ ಆಟಗಾರರ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಪಡೆದಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಏಳು ದಿನಗಳ ಬಳಿಕ ಶುರುವಾಗುವ ಕೌಂಟಿ ಟೂರ್ನಿಯಲ್ಲೂ ಹೇಲ್ಸ್‌ ನಾಟಿಂಗ್‌ಹ್ಯಾಮ್‌ಶೈರ್‌ ತಂಡದ ಪರ ಆಡುತಿಲ್ಲ ಎಂದು ಸ್ಥಳೀಯ ಮಾಧ್ಯಮಗಳಿಂದ ತಿಳಿದುಬಂದಿದೆ. ಶುಕ್ರವಾರ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಎರಡನೇ ಬಾರಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಅವರು ಮೂರು ವಾರಗಳ ಕಾಲ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ನಿಷೇಧಿಸಿದೆ.    ಈ ವಿಷಯದ ಬಗ್ಗೆ ಅಧಿಕೃತ ಹೇಳಿಕೆಗಳನ್ನು ಬಿಡುಗಡೆ ಮಾಡಲು ಇಸಿಬಿ ನಿರಾಕರಿಸಿದ್ದು, “ನಾವು ಗೌಪ್ಯತೆಯ ಕರ್ತವ್ಯವನ್ನು ಹೊಂದಿದ್ದೇವೆ. ಆದ್ದರಿಂದ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ” ಎಂದು ಇಸಿಬಿ ವಕ್ತಾರ ತಿಳಿಸಿದ್ದಾರೆ.      ಹೇಲ್ಸ್‌ ಶಿಕ್ಷೆಯ ಅವಧಿ ಅಂತ್ಯದ ದಿನಾಂಕ ಪ್ರಕಟವಾಗಿಲ್ಲ. ಆದರೆ, ಮೇ. 3 ರಿಂದ ಆರಂಭವಾಗುವ ಐರ್ಲೆಂಡ್‌ ವಿರುದ್ಧದ ಏಕದಿನ ಸರಣಿ ಮುಗಿಯುವ ಒಳಗಾಗಿ ಅವರು ತಂಡಕ್ಕೆ ಮರಳಬಹುದು. 30 ವರ್ಷದ ಹೇಲ್ಸ್‌ ಐಸಿಸಿ ವಿಶ್ವಕಪ್‌ 15 ಸಂಭಾವ್ಯ ಆಟಗಾರರ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಂತಿಮ ತಂಡವನ್ನು ಮೇ. 23ರ ಒಳಗೆ ಐಸಿಸಿಗೆ ಇಂಗ್ಲೆಂಡ್‌ ಸ್ಪಷ್ಟಪಡಿಸಬೇಕು.

Related Articles