Saturday, December 21, 2024

ಇನಿಂಗ್ಸ್ ಒಂದರಲ್ಲೇ 10 ವಿಕೆಟ್ ಸಾಧನೆ

ಅನಂತಪುರ:

ಮಣಿಪುರದ 18ರ ಪ್ರಾಯದ ತರುಣ ಪಂದ್ಯವೊಂದರ ಒಂದೇ ಇನಿಂಗ್ಸ್  ನಲ್ಲಿ ಎಲ್ಲ 10 ವಿಕೆಟ್ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಇಲ್ಲಿನ ಗ್ರಾಾಮೀಣಾಭಿವೃದ್ಧಿ  ಟ್ರಸ್ಟ್  ಕ್ರೀಡಾಂಗಣದಲ್ಲಿ ನಡೆದ ದೇಶೀಯ ಮಟ್ಟದ ನಾಲ್ಕು ದಿನಗಳ 19 ವಯೋಮಿತಿಯ ಕಚ್ ಬಿಹಾರಿ ಟ್ರೋಫಿಯ ಅರುಣಾಚಲ ಪ್ರದೇಶದ ವಿರುದ್ಧ ಎಡಗೈ ಮಧ್ಯಮ ವೇಗಿ ರೆಕ್ಸ್  ರಾಜ್‌ಕುಮರ್ ಸಿಂಗ್ ಈ ಅಭೂತ ಪೂರ್ವ ಸಾಧನೆಗೆ ಭಾಜನರಾದರು.
   ಇವರು ಬೌಲಿಂಗ್ ಮಾಡಿದ ಒಟ್ಟು 9.5 ಓವರ್‌ಗಳಲ್ಲಿ 6 ಮೇಡ್-ಇನ್ ಸಹಿತ ಕೇವಲ 11 ರನ್ ನೀಡಿ ಅರುಣಾಚಲ ಪ್ರದೇಶದ ಎಲ್ಲ 10 ವಿಕೆಟ್ ಗಳನ್ನು ಕಬಳಿಸಿ ಮೈಲಿಗಲ್ಲು ಸೃಷ್ಟಿಸಿದರು. ಐವರು ಬ್ಯಾ ಟ್ಸ್  ಮನ್‌ಗಳನ್ನು ಕ್ಲೀನ್ ಬೌಲ್ಡ್ ಮಾಡಿದರೆ, ಎರಡು ಎಲ್‌ಬಿಡಬ್ಲ್ಯು, ಎರಡು ವಿಕೆಟ್ ಕೀಪರ್ ಕ್ಯಾಚ್ ಹಾಗೂ ಒಂದು ಕ್ಯಾಚ್ ಮೂಲಕ ಒಟ್ಟು 10 ವಿಕೆಟ್‌ಗಳನ್ನು ಪಡೆದರು.
ರಾಜ್‌ಕುಮಾರ್ ಸಿಂಗ್ ಅವರ ಮಾರಕ ದಾಳಿಗೆ ನಲುಗಿದ ಅರುಣಾಚಲ ಪ್ರದೇಶ, ದ್ವಿತೀಯ ಇನಿಂಗ್ಸ್ ನಲ್ಲಿ ಕೇವಲ 36 ರನ್ ಗಳಿಗೆ ಸರ್ವ ಪತನವಾಯಿತು.
ಪ್ರಥಮ ಇನಿಂಗ್ಸ್  ನಲ್ಲಿ ಅರುಣಾಚಲ ಪ್ರದೇಶ  138 ರನ್ ದಾಖಲಿಸಿತ್ತು. ಇದಕ್ಕೆೆ ಪ್ರತ್ಯುತ್ತರವಾಗಿ ಮಣಿಪುರ ಮೊದಲ ಇನಿಂಗ್ಸ್  ನಲ್ಲಿ 122 ರನ್ ಗಳಿಸಿತ್ತು. ಆದರೆ, ದ್ವಿತೀಯ ಇನಿಂಗ್ಸ್  ನಲ್ಲಿ ಕೇವಲ 36 ರನ್ ಗಳಿಗೆ ಕುಸಿದಿತ್ತು. ಮಣಿಪುರ ತಂಡಕ್ಕೆೆ ಕೇವಲ 55 ರನ್ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಮಣಿಪುರ ತಂಡ 7.5 ಓವರ್‌ಗಳಿಗೆ ವಿಕೆಟ್ ನಷ್ಟವಿಲ್ಲದೆ ಜಯ ಸಾಧಿಸಿತು.
ರಾಜ್‌ಕುಮಾರ್ ಸಿಂಗ್ ಪ್ರಸಕ್ತ ಆವೃತ್ತಿಯ ರಣಜಿ ಟ್ರೋಫಿಯಲ್ಲಿ 15 ವಿಕೆಟ್ ಕಬಳಿಸಿದ್ದಾರೆ. 33ಕ್ಕೆೆ 5 ಅವರ ರಣಜಿ ಟ್ರೋಫಿಯ ಶ್ರೇಷ್ಠ ಸಾಧನೆಯಾಗಿದೆ.

Related Articles