Friday, April 19, 2024

ರಾಹುಲ್, ಹಾರ್ದಿಕ್ ಪಾಂಡ್ಯ ಗ್ರೇಡ್ ಕುಸಿತ

ಸ್ಪೋರ್ಟ್ಸ್ ಮೇಲ್ ವರದಿ

ಸುಪ್ರಿಂ ಕೋರ್ಟ್ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯು ಪ್ರಕಟಿಸಿದ ನೂತನ ವಾರ್ಷಿಕ ಗುತ್ತಿಗೆಯಲ್ಲಿ ಕಾಫಿ ವಿದ್ ಕರಣ್ ಕಾರ್ಯಕ್ರಮದ ಮೂಲಕ ವಿವಾದದ ಕೇಂದ್ರವಾಗಿದ್ದ ಕರ್ನಾಟಕ ಕೆ.ಎಲ್. ರಾಹುಲ್ ಹಾಗೂ ಬರೋಡದ ಹಾರ್ದಿಕ ಪಾಂಡ್ಯ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಗ್ರೇಡ್ ಸಿಗಲಿಲ್ಲ. ಬದಲಾಗಿ ಬಿ ದರ್ಜೆಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ರಾಹುಲ್ ಹಾಗೂ ಹಾರ್ದಿಕ ಪಾಂಡ್ಯ ಉತ್ತಮವಾಗಿ ಆಡುತ್ತಿದ್ದರೂ ಅಂಗಣದ ಹೊರಗೆ ನಡೆದ ವಿವಾದ ಅವರ ಶ್ರೇಣಿಯನ್ನು ಕುಸಿಯುವಂತೆ ಮಾಡಿತು. ಈ ಬಾರಿ ಎ ಪ್ಲಸ್, ಎ, ಬಿ ಹಾಗೂ ಸಿ ಗ್ರೇಡ್‌ಗಳನ್ನು ನೀಡಲಾಗಿದೆ.  ಎ ಪ್ಲಸ್ ಆಟಗಾರರಿಗೆ 7 ಕೋಟಿ ರೂ. ಎ ಗ್ರೇಡ್ ಆಟಗಾರರಿಗೆ 5 ಕೋಟಿ ಹಾಗೂ ಬಿ ಗ್ರೇಡ್ ಆಟಗಾರರಿಗೆ 3 ಕೋಟಿ ಮತ್ತು ಸಿ ಗ್ರೇಡ್ ಆಟಗಾರರಿಗೆ 1 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಈ ಗುತ್ತಿಗೆಯು ಅಕ್ಟೋಬರ್ 2018 ರಿಂದ ಸೆಪ್ಟಂಬರ್ 2019ರ ವರೆಗೆ ಜಾರಿಯಲ್ಲಿರುತ್ತದೆ.  ಮಹಿಳಾ ವಿಭಾಗದಲ್ಲಿ  ಎ ಗ್ರೇಡ್ ಆಟಗಾರರಿಗೆ 50 ಲಕ್ಷ ರೂ, ಬಿ ಗ್ರೇಡ್‌ಗೆ 30 ಲಕ್ಷ ರೂ. ಹಾಗೂ ಸಿ ಗ್ರೇಡ್‌ಗೆ 10 ಲಕ್ಷ ರೂ. ನೀಡಲಾಗುತ್ತದೆ.
ಎ ಪ್ಲಸ್ ಗ್ರೇಡ್ ಆಟಗಾರರು
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ
ಎ ಗ್ರೇಡ್ ಆಟಗಾರರು
ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೆಜಾ, ಭುವನೇಶ್ವರ್ ಕುಮಾರ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಎಂ,ಎಸ್, ಧೋನಿ, ಶಿಖರ್ ಧವನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್, ರಿಶಬ್ ಪಂಥ್,
ಬಿ ಗ್ರೇಡ್ ಆಟಗಾರರು
ಕೆ.ಎಲ್. ರಾಹುಲ್, ಉಮೇಶ್ ಯಾದವ್, ಯಜುವೇಂದ್ರ ಚಹಾಲ್,  ಹಾರ್ದಿಕ್ ಪಾಂಡ್ಯ.
ಸಿ ಗ್ರೇಡ್ ಆಟಗಾರರು
ಕೇದಾರ್ ಜಾದವ್, ದಿನೇಶ್ ಕಾರ್ತಿಕ್,  ಅಂಬಾಟಿ ರಾಯುಡು, ಮನೀಶ್ ಪಾಂಡೆ, ಹನುಮ ವಿಹಾರಿ, ಖಲೀಲ್ ಅಹಮ್ಮದ್, ವೃದ್ಧಿಮಾನ್ ಸಹಾ.
ಮಹಿಳಾ ವಿಭಾಗ
ಎ ಗ್ರೇಡ್ 
ಮಿಥಾಲಿ ರಾಜ್, ಸ್ಮತಿ ಮಂದಾನ, ಹರ್ಮನ್‌ಪ್ರೀತ್ ಕೌರ್, ಪೂನಂ ಯಾದವ್
ಬಿ ಗ್ರೇಡ್
ಏಕ್ತಾ ಬಿಸ್ಟ್, ಜುಲಾನ್ ಗೋಸ್ವಾಮಿ, ಶಿಖಾ ಪಾಂಡೆ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್.
ಸಿ ಗ್ರೇಡ್
ರಾಧಾ  ಯಾದವ್, ಡಿ ಹೇಮಲತಾ, ಅನುಜಾ ಪಾಟೀಲ್, ವೇದಾಕೃಷ್ಣ ಮೂರ್ತಿ, ಮಾನಸಿ ಜೋಶಿ, ಪೂನಮ್ ರಾವುತ್, ಮೋನಾ ಮೆಶ್ರಾಮ್ , ಅರುಂಧತಿ ರೆಡ್ಡಿ. ರಾಜೇಶ್ವರಿ ಗಾಯಕ್ವಾಡ್, ತಾನಿಯಾ ಭಾಟಿಯಾ, ಪೂಜಾ ವಸ್ತಾರ್ಕರ್.

Related Articles