ದೆಹಲಿ:
ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತಮ್ಮ ಮಾರಕ ಬೌಲಿಂಗ್ ಮಾಲಕ 19 ವಯೋಮಿತಿ ಕೂಚ್ ಬೆಹಾರ್ ಟ್ರೋಫಿಯ ದೆಹಲಿ ವಿರುದ್ಧ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ್ದಾರೆ.
ಪಿರೋಜ್ ಶಾ ಕೋಟ್ಲ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡದ ಪರ ಆಡಿದ ಅರ್ಜುನ್, 98ಕ್ಕೆ 5 ಅವರ ಮಾರಕ ದಾಳಿ ಹೊರತಾಗಿಯೂ ದೆಹಲಿ ತಂಡ ಮೊದಲ ಇನಿಂಗ್ಸ್ ನಲ್ಲಿ 394 ರನ್ ದಾಖಲಿಸಿತು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಆರಂಭಿಕ ಬ್ಯಾಟ್ಸಮನ್ ದಿವ್ಯಾಂಶು(211) ಅವರ ದ್ವಿಶತಕದ ನೆರವಿನಿಂದ ಪ್ರಥಮ ಇನಿಂಗ್ಸ್ ನಲ್ಲಿ 453 ರನ್ ದಾಖಲಿಸಿತ್ತು. ಇದೀಗ ದೆಹಲಿ ಎದುರು 59 ರನ್ ಗಳ ಮುನ್ನಡೆ ಕಾಯ್ದುಗೊಂಡಿದೆ.