ಕೊಲ್ಕತಾ:
ಭುಜದ ನೋವಿನಿಂದ ಭಾರತ ತಂಡದಿಂದ ದೂರವಿರುವ ವೃದ್ದಿಮಾನ್ ಸಹಾ ಕಳೆದ 5-10 ವರ್ಷಗಳಲ್ಲಿ ದೇಶದ ಶ್ರೇಷ್ಠ ವಿಕೆಟ್ ಕೀಪರ್ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 2014ರಲ್ಲಿ ಟೆಸ್ಟ್ ಗೆ ವಿದಾಯ ಹೇಳಿದ ನಂತರ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಿದ ವೃದ್ದಿಮಾನ್ ಸಹಾ ಇದೀಗ ನಂ.1 ವಿಕೆಟ್ ಕೀಪರ್ ಆಗಿದ್ದಾರೆ. ಸದ್ಯ ಭುಜದ ನೋವಿನಿಂದ ಅವರು ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ. ಆದಷ್ಟು ಬೇಗ ತಂಡಕ್ಕೆ ಹಿಂತಿರುಗಲಿ. ಯುವ ವಿಕೇಟ್ ಕೀಪರ್ ರಿಷಭ್ ಪಂತ್ ಕೂಡ ಆಡಿದ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನಿಡಿದ್ದಾರೆ. ಸಹಾ ಆಡಿದ 32 ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕಗಳೊಂದಿಗೆ 1164 ರನ್ ಗಳಿಸಿದ್ದಾರೆ. ಕೊನೆಯ ಪಂದ್ಯ ಕೇಪ್ ಟೌನ್ ನಲ್ಲಿ ಆಡಿದ್ದರು ಎಂದರು.