Friday, November 22, 2024

ನ್ಯೂಜಿಲೆಂಡ್(ಎ) ಗೆ ವಿಲ್ ಯಾಂಗ್ ಶತಕದ ಆಸರೆ

ಹ್ಯಾಮಿಲ್ಟನ್:

ನಾಯಕ ವಿಲ್ ಯಂಗ್(117*) ಅವರ ಭರ್ಜರಿ ಶತಕದಾಟದ ನೆರವಿನಿಂದ ನ್ಯೂಜಿಲೆಂಡ್ ‘ಎ’ತಂಡ ಭಾರತ ‘ಎ’ ಎದುರಿನ ಎರಡನೇ ಟೆಸ್ಟ್  ನ ಮೊದಲ  ದಿನ 90 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆೆ 221 ಮೊತ್ತ ದಾಖಲಿಸಿದೆ.

ಇಲ್ಲಿನ ಸೆಡೋನ್ ಪಾರ್ಕ್ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಉತ್ತಮ ಆಟವಾಡುವಲ್ಲಿ ಯಶಸ್ವಿಯಾಯಿತು. ಆರಂಭಿಕರಾಗಿ ಕ್ರೀಸ್‌ಗೆ ಆಗಮಿಸಿದ ಹಮಿಶ್ ರುದರ್‌ಫೋರ್ಡ್(9) ಕಳಪೆ ಆಟದೊಂದಿಗೆ ಶೀಘ್ರ ಪೆವಿಲಿಯನ್ ಸೇರಿದರೆ, ವಿಲ್ ಯಂಗ್ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆೆ ಹೆಚ್ಚಿನ ಮೊತ್ತ ನೀಡಿದರು. ಅವರು 265 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 117 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.
ಹಮಿಶ್ ನಂತರ ಕ್ರೀಸ್‌ಗೆ ಬಂದ ಟಿಮ್ ಸೆಫ್ರೆೆಟ್(16), ಗ್ಲೇನ್ ಫಿಲಿಪ್ಸ್ 7), ರಚಿನ್ ರವೀಂದರ್(16), ಕ್ಯಾಮ್ ಫ್ಲೆೆಟ್ಚರ್(0) ಮತ್ತು ಡೌಗ್ ಬ್ರಾಸ್‌ವೇಲ್(9) ಅವರು ಭಾರತದ ಬೌಲಿಂಗ್ ದಾಳಿಗೆ ಸಿಲುಕಿ ಶೀಘ್ರ ಔಟಾಗಿ ಪೆವಿಲಿಯನ್ ದಾರಿ ಹಿಡಿದರು.  ಥೀಯೊ ವಾನ್ ವೊಕ್ರಮ್ 92 ಎಸೆತಗಳಲ್ಲಿ ಒಂದು ಸಿಕ್ಸ್  ಮತ್ತು ಐದು ಬೌಂಡರಿಗಳನ್ನು ಬಾರಿಸುವ ಮೂಲಕ 32 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಈ ಮೂಲಕ ಕಿವೀಸ್ ದಿನಾಂತ್ಯಕ್ಕೆೆ 221 ಮೊತ್ತ ದಾಖಲಿಸಿ ವಿಕೆಟ್ ಕಾಯ್ದುಕೊಂಡಿದೆ.
ಭಾರತದ ಪರ ಬೌಲಿಂಗ್ ಮಾಡಿದ ರಜನೀಶ್ ಗುರ್ಬಾನಿ 36 ಓವರ್‌ಗಳಲ್ಲಿ ಆರು ಮೆಡಿನ್‌ಗಳೊಂದಿಗೆ 21 ರನ್ ನೀಡುವ ಮೂಲಕ ಎರಡು ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್ ಎದುರಾಳಿ ದಾಂಡಿಗರ ಬೆವರಿಳಿಸುವ ಮೂಲಕ ಎರಡು ವಿಕೆಟ್ ಪಡೆದು ಪಾರಮ್ಯ ಮೆರೆದರು. ನವದೀಪ್ ಸೈನಿ ಒಂದು ವಿಕೆಟ್ ಪಡೆದಿದ್ದಾರೆ.

Related Articles