Friday, November 22, 2024

ಆಸೀಸ್ ನೆಲದಲ್ಲಿ ಇತಿಹಾಸ ಬರೆದ ಭಾರತ

ಏಜೆನ್ಸೀಸ್ ಸಿಡ್ನಿ

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯ ಮಳೆಯ ಅಡಚಣೆಯಿಂದಾಗಿ ಡ್ರಾದಲ್ಲಿ ಕೊನೆಗೊಳ್ಳುವುದರೊಂದಿಗೆ ಭಾರತ ತಂಡ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿದೆ. 71 ವರ್ಷಗಳ ನಂತರ ಈ ಸಾಧನೆ ಮಾಡಿದ ವಿರಾಟ್ ಕೊಹ್ಲಿ ಪಡೆ ಆಸೀಸ್‌ನೆಲದಲ್ಲಿ ಇತಿಹಾಸ ನಿರ್ಮಿಸಿತು.

 7 ವಿಕೆಟ್ ನಷ್ಟಕ್ಕೆ 622 ರನ್ ಗಳಿಸಿ ಡಿಕ್ಲೇರ್ ಘೋಷಿಸಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ 322 ರನ್‌ಗಳ ಬೃಹತ್‌ಮುನ್ನಡೆ ಕಂಡಿತ್ತು. ಮೂರನೇ ದಿನದಲ್ಲಿ ಕೇವಲ 25.2 ಓವರ್ ಎಸೆಯಲು ಸಾಧ್ಯವಾಯಿತು. ನಾಲ್ಕನೇ ದಿನದಲ್ಲಿ ಆಟಗಾರರು ಅಂಗಣಕ್ಕಿಳಿಯಲೇ ಇಲ್ಲ. ಸರಣಿ ಜಯದ ರೂವಾರಿ ಚೇತೇಶ್ವರ ಪೂಜಾರ ನಿರೀಕ್ಷೆಯಂತೆ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಆಸ್ಟ್ರೇಲಿಯಾದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಐದನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈ ಸಾಧನೆ ಮಾಡಿದ್ದವು. ಇದುವರೆಗೂ 13 ನಾಯಕರು ಭಾರತ ತಂಡಕ್ಕೆ ಟೆಸ್ಟ್ ಗೆಲ್ಲಿಸಿಕೊಡುವ ಯತ್ನ ಮಾಡಿದ್ದರು, ಆದರೆ ವಿರಾಟ್ ಕೊಹ್ಲಿ ಯಶಸ್ಸು ಕಂಡರು.
ಜಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ, ಕರ್ನಾಟಕದ ಆಟಗಾರ ಮಯಾಂಕ್ ಅಗರ್ವಾಲ್ ಅವರ ಗುಣಗಾನ ಮಾಡಿದ್ದು ವಿಶೇಷವಾಗಿತ್ತು.

Related Articles