Thursday, October 31, 2024

ಮೊಹಮ್ಮದ್ ಕೈಫ್ 38 ರ ಸಂಭ್ರಮ

ದೆಹಲಿ: 

ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ತನ್ನ 38ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಹುಟ್ಟುಹಬ್ಬಕ್ಕೆೆ ಕ್ರಿಕೆಟ್ ದಿಗ್ಗಜರು ಶುಭಾಶಯ ಕೋರಿದ್ದಾರೆ.

ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಇರ್ಫಾಣ್ ಪಠಾಣ್, ಯುವರಾಜ್ ಸಿಂಗ್, ಚೇತೇಶ್ವರ ಪೂಜಾರ, ಶಿಖರ್ ಧವನ್ ಸೇರಿದಂತೆ ಹಲವರು ಕೈಫ್ ಜನುಮ ದಿನಕ್ಕೆೆ ಟ್ವಿಟರ್‌ನಲ್ಲಿ ಶುಭಾಶಯ ಕೋರಿದ್ದಾರೆ. ಮೊಹಮ್ಮದ್ ಕೈಫ್ ನಾಯಕತ್ವದಲ್ಲಿ 2000 ಇಸವಿಯಲ್ಲಿ 19 ವಯೋಮಿತಿ ಭಾರತ ತಂಡ ವಿಶ್ವಕಪ್ ಗೆದ್ದಿತ್ತು. ಅಲ್ಲದೇ, 2002ರಲ್ಲಿ ನಾರ್ಥ್ ವೆಸ್ಟ್  ಸರಣಿಯ ಫೈನಲ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದ ಇವರು, 87 ರನ್ ಗಳಿಸುವ ಮೂಲಕ ಭಾರತ ಇಂಗ್ಲೆೆಂಡ್ ನೀಡಿದ್ದ 326 ರನ್ ಗುರಿ ಮುಟ್ಟಿತ್ತು. ಅದೇ ವರ್ಷದಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಜಿಂಬಾಬ್ವೆೆ ವಿರುದ್ಧ 111 ರನ್ ಗಳಿಸಿದ್ದರು. ಕೈಫ್ ಭಾರತ ಕಂಡ ಅತ್ಯುತ್ತಮ ಕ್ಷೇತ್ರ ರಕ್ಷಕರೂ ಆಗಿದ್ದರು.

Related Articles