ಅಬುದಾಬಿ:
ಭಾರತ ಮೂಲದ ಅಜಾಜ್ ಪಟೇಲ್(5) ಅವರ ಸ್ಪಿನ್ ಮೋಡಿಯ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಪಾಕಿಸ್ತಾನ ವಿರುದ್ಧ ಕೇವಲ ನಾಲ್ಕು ರನ್‌ಗಳಿಂದ ರೋಚಕ ಜಯ ಸಾಧಿಸಿತು.
ನ್ಯೂಜಿಲೆಂಡ್ ನೀಡಿದ್ದ 176 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಅಜಾಜ್ ಪಟೇಲ್(5) ಅವರ ಸ್ಪಿನ್ ಮೋಡಿಗೆ ನಲುಗಿ ಸೋಲು ಒಪ್ಪಿಕೊಂಡಿತು. 58.4 ಓವರ್‌ಗಳಿಗೆ 171 ರನ್‌ಗಳಿಗೆ ತನ್ನೆೆಲ್ಲ ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಕೇವಲ ನಾಲ್ಕು ರನ್‌ಗಳಿಂದ ಪರಾಭವಗೊಂಡಿತು. ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ ಕೇವಲ 153 ರನ್ ಗಳಿಗೆ ಕುಸಿದಿತ್ತು. ಬಳಿಕ ಎರಡನೇ ಇನಿಂಗ್ಸ್ ನಲ್ಲಿ 249 ರನ್ ದಾಖಲಿಸಿತ್ತು.
ಆ ಮೂಲಕ ಪಾಕಿಸ್ತಾನ(ಪ್ರಥಮ ಇನಿಂಗ್ಸ್ -227) ತಂಡಕ್ಕೆೆ 176 ರನ್ ಗುರಿ ನೀಡಿತು. ಪಾಕಿಸ್ತಾನ ಪರ ಅಜರ್ ಅಲಿ(65), ಅಸಾದ್ ಶಫಿಕ್(45) ಹಾಗೂ ಇಮಾಮ್ ಉಲ್ ಹಕ್(27) ಬಿಟ್ಟು ಇನ್ನುಳಿದ ಆಟಗಾರರು ನ್ಯೂಜಿಲೆಂಡ್ ಬೌಲರ್‌ಗಳ ಎದುರು ತಲೆಬಾಗಿದರು. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ಮೊದಲ ಟೆಸ್ಟ್ ನಲ್ಲಿ ರೋಚಕ ಜಯ ಸಾಧಿಸಿತು. ಆ ಮೂಲಕ ಕಿವೀಸ್ 1-0 ಮುನ್ನಡೆ ಸಾಧಿಸಿತು.