Thursday, December 26, 2024

ರಣಜಿ ಕ್ವಾರ್ಟರ್ ಫೈನಲ್ : ಕರ್ನಾಟಕ್ಕೆ ರಾಜಸ್ಥಾನ ಎದುರಾಳಿ

ಸ್ಪೋರ್ಟ್ಸ್ ಮೇಲ್ ವರದಿ

ಪ್ರಸಕ್ತ ರಣಜಿ ಋತುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನವನ್ನು ಎದುರಿಸಲಿದೆ. ಇದೇ ತಿಂಗಳ ೧೫ರಿಂದ ಪಂದ್ಯ ನಡೆಯಲಿದೆ.

ಗುರುವಾರ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಿದ್ದಂತೆ ವಿದರ್ಭ, ಸೌರಾಷ್ಟ್ರ, ಕರ್ನಾಟಕ, ಕೇರಳ, ಗುಜರಾತ್, ರಾಜಸ್ಥಾನ , ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ತಂಡಗಳು ಕ್ವಾರ್ಟರ್ ಫೈನಲ್ ತಲುಪಿವೆ.
ಕರ್ನಾಟಕ- ರಾಜಸ್ಥಾನ
ವಿದ‘ರ್ಭ -ಉತ್ತರಾಖಂಡ್
ಸೌರಾಷ್ಟ್ರ-ಉತ್ತರಪ್ರದೇಶ
ಕೇರಳ- ಗುಜರಾತ್.
ಕೇರಳ ತಂಡ ಸತತ ಎರಡನೇ ಬಾರಿಗೆ ರಣಜಿ ಟ್ರೋಫಿಯಲ್ಲಿ ಕ್ವಾರ್ಟರ್  ಫೈನಲ್ ತಲುಪಿದೆ. ಹಿಮಾಚಲ ಪ್ರದೇಶ ವಿರುದ್ಧದ  ಕೊನೆಯ ಲೀಗ್ ಪಂದ್ಯದಲ್ಲಿ ಜಯಕ್ಕಾಗಿ 295 ರನ್ ಗುರಿಯನ್ನು ಅಂತಿಮ ದಿನದಲ್ಲಿ ತಲುಪಬೇಕಾಗಿದ್ದ ಕೇರಳ, ಅದರಲ್ಲಿ ಯಶಸ್ಸ ಕಂಡು ಅಚ್ಚರಿ ಮೂಡಿಸಿತು.
ಬಂಗಾಳ ಹಾಗೂ ಪಂಜಾಬ್ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಇತ್ತಂಡಗಳು ಕ್ವಾರ್ಟರ್ ಫೈನಲ್ ತಲಪುವಲ್ಲಿ ವಿಲವಾದವು. ರಣಜಿ ಅಂಕಪಟ್ಟ ನಿಯಮದಂತೆ ಎ ಮತ್ತು ಬಿ ಗುಂಪಿನಿಂದ ಒಟ್ಟು ೫ ತಂಡಗಳು ಅರ್ಹತೆ ಪಡೆಯಬೇಕಾಗಿತ್ತು.  ಸಿ ಗುಂಪಿನಿಂದ ಎರಡು ಹಾಗೂ ಬಿ ಗುಂಪಿನಿಂದ ಒಂದು ತಂಡ ಕ್ವಾರ್ಟರ್ ಫೈನಲ್ ತಲುಬೇಕಾಗಿತ್ತು. ಆದರೆ ವಿದ‘ರ್ (29), ಸೌರಾಷ್ಟ್ರ (29), ಕರ್ನಾಟಕ (27), ಗುಜರಾತ್ (26) ಎ ಗುಂಪಿನಿಂದ ಅರ್ಹತೆ ಪಡೆದವು. ಬಿ ಗುಂಪಿನಿಂದ ಬರೋಡ ಹಾಗೂ ಕೇರಳ (ತಲಾ 26 ಅಂಕ)ಕ್ಕೆ ಅವಕಾಶ ಇದ್ದಿತ್ತು. ಎಲ್ಲರೂ ಬರೋಡ ಅರ್ಹತೆ ಪಡೆಯುತ್ತದೆ ಎಂದು ನಿರೀಕ್ಷಿಸಿದ್ದರು. ಕೊನೆಯ ದಿನದಲ್ಲಿ 295 ರನ್ ಗಳಿಸಿ, ನಾಲ್ಕನೇ ಜಯ ಗಳಿಸಿದ ಕೇರಳ ಅಚ್ಚರಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿತು.

Related Articles