Sunday, November 24, 2024

128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್

ಮುಂಬಯಿ: ತನು, ಮನ ಮತ್ತು ಧನ ಎಲ್ಲ ರೀತಿಯಲ್ಲೂ ಜಗತ್ತನ್ನು ಆಕರ್ಷಿಸುವ ಶಕ್ತಿ ಇರುವ ಕ್ರಿಕೆಟ್‌ ಆಟ 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಮರಳಿದೆ. Cricket returns to Olympics after 128 years.

1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕೇವಲ ಎರಡು ತಂಡಗಳು ಪಾಲ್ಗೊಂಡಿದ್ದವು. ಆಗ ಪಾಲ್ಗೊಂಡಿದ್ದು ಬ್ರಿಟನ್‌ ಹಾಗೂ ಫ್ರಾನ್ಸ್‌, ಈಗ ಜಗತ್ತಿನ ಪ್ರಮುಖ ಕ್ರೀಡೆಯಾಗಿ ಬೆಳೆಯುತ್ತಿರುವ ಕ್ರಿಕೆಟ್‌ ಮೂಲಕ ಹೆಚ್ಚಿನ ಹಣ ಗಳಿಸಬಹುದು ಎಂಬುದನ್ನು ಗಮನಿಸಿದ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಪುರುಷ ಹಾಗೂ ಮಹಿಳಾ ತಂಡಗಳಿಗೆ ಟಿ20 ಕ್ರಿಕೆಟ್‌ ಆಡುವ ಅವಕಾಶವನ್ನು ಕಲ್ಪಿಸಿದೆ. ಮಾತ್ರವಲ್ಲ ಸುಮಾರು 900 ಕೋಟಿ ರೂ,ಗಳ ಆದಾಯವನ್ನು ನಿರೀಕ್ಷಿಸಿದೆ. 2028ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಮತ್ತೆ ಅಂಗಣಕ್ಕಿಳಿಯಲಿದೆ.

ಕ್ರಿಕೆಟ್‌ನಿಂದಾಗಿ ಇತರ ಕ್ರೀಡೆಗಳು ಕಡೆಗಣಿಸಲ್ಪಟ್ಟಿದೆ ಎಂಬ ಕೂಗು ಕೇಳಿ ಬರುತ್ತಿವೆ. ಆದರೆ ಕ್ರಿಕೆಟ್‌ನಿಂದ ಬರುವ ಆದಾಯವನ್ನು ಗಮನಿಸಿದಾಗ ಎಲ್ಲರೂ ಮೌನವಾಗುತ್ತಾರೆ. ಐಒಸಿ ಕೈಗೊಂಡ ತೀರ್ಮಾನವನ್ನು ಗಮನಿಸಿದಾಗ ಕ್ರಿಕೆಟ್‌ ಒಲಿಂಪಿಕ್ಸ್‌ಗೆ ಸೇರ್ಪಡೆಗೊಂಡಿತೋ ಇಲ್ಲ ಅಂತಾರಾಷ್ಟ್ರೀಯ ಒಲಿಂಪಿಕ್ಸೇ ಕ್ರಿಕೆಟ್‌ಗೆ ಸೇರಿತೋ ಎಂದು ಅನಿಸುವುದು ಸಹಜ.

ವಿಶ್ವಕಪ್‌, ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಪ್ರೀಮಿಯರ್‌ ಲೀಗ್‌ ಇವುಗಳ ಜೊತೆಯಲ್ಲಿ ಇನ್ನು ಮುಂದೆ ಐಒಸಿ ನೇತ್ರತ್ವದಲ್ಲಿ ಡೈಮಂಡ್‌ ಲೀಗ್‌ ಕ್ರಿಕೆಟ್‌ ಟೂರ್ನಿ, ಇಂಡೋರ್‌ ಕ್ರಿಕೆಟ್‌ ಟೂರ್ನಿ, ಯೂರೋಪಿಯನ್‌ ಲೀಗ್‌ ಮೊದಲಾದ ಲೀಗ್‌ಗಳನ್ನು ನಡೆಸುವುದುಕ್ಕೆ ಐಒಸಿ ಮನಸ್ಸು ಮಾಡದಿರದು.

Related Articles