Tuesday, April 16, 2024

ಟಿ10 ಬ್ಯಾಶ್‌ಗೆ ಮಂಗಳೂರು ಸಜ್ಜು

ಮಂಗಳೂರು ಫೆಬ್ರವರಿ 20

ಕ್ರಿಕೆಟ್ ಅಂಗಣದಲ್ಲಿ ಮನರಂಜನೆ ಹಾಗೂ ಕ್ರಿಕೆಟ್ ಎರಡರನ್ನೂ ಸಂಭ್ರಮಿಸುವ ಅವಕಾಶ ಸಿಗುವುದು ಅದು ಚುಟುಕು ಕ್ರಿಕೆಟ್‌ನಲ್ಲಿ. ಇದಕ್ಕಾಗಿಯೇ ಹುಟ್ಟಿಕೊಂಡ ಟಿ20 ಕ್ರಿಕೆಟ್ ಮತ್ತೆ ಸರಳಗೊಂಡು ಟಿ10 ಕ್ರಿಕೆಟ್ ಆಗಿ ರೂಪುಗೊಂಡಿದೆ.

ಕರ್ನಾಟಕದ ಪ್ರತಿಷ್ಠಿತ ಸ್ಪೋರ್ಟ್ಸ್ ಕ್ಲಪ್‌ಗಳಲ್ಲಿ ಒಂಂದಾಗಿರುವ  ಟಾರ್ಪೆಡೋಸ್ ಸ್ಪೋಟ್ಸ್ ಕ್ಲಬ್(ರಿ.) ಇದರ ವತಿಯಿಂದ ಇದೇ ತಿಂಗಳ 28ರಿಂದ ಮಾರ್ಚ್ 4ರವರೆಗೆ  ಟಾರ್ಪೆಡೋಸ್ ಟಿ10 ಬ್ಯಾಶ್  ಎಲೈಟ್ ಹಾಗೂ ಕಾರ್ಪೋರೇಟ್ ವಿಭಾಗದಲ್ಲಿ ನಡೆಯಲಿದೆ ಎಂದು ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುಧವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಶೆಟ್ಟಿ ಅವರು ಟೂರ್ನಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಟೋರ್ಪೆಡೋಸ್ ನ ಹಿರಿಯ ಸದಸ್ಯರಾದ ಪ್ರತಿಭಾ ಕುಳಾಯಿ, ಟೂರ್ನಿಯ ಸಮನ್ವಯಕಾರ ಕಿಶೋರ್ ಸುವರ್ಣ, ಕ್ರಿಕೆಟ್ ಕೋಚ್ ರಹೀಮ್ ಹಾಗೂ ಇತರ ಗಣ್ಯರು ಹಾಜರಿದ್ದರು.
ಐದು ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಹಬ್ಬವು ಮಂಗಳೂರಿನ  ಎನ್‌ಎಂಪಿಟಿ, ಫಾದರ್ ಮುಲ್ಲರ್  ಗ್ರೌಂಡ್, ಎನ್‌ಐಟಿಕೆ ಅಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಪಂದ್ಯಗಳನ್ನು ಆಸ್ಟ್ರೋ ಟರ್ಫ್  ಪಿಚ್ ಹಾಗೂ ಮ್ಯಾಟ್ ಪಿಚ್‌ಗಳಲ್ಲಿ  ನಡೆಸಲಾಗುವುದು.  ಬೆಂಗಳೂರು, ಮಂಗಳೂರು, ಮುಂಬೈ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ತಂಡಗಳು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿದ್ದು, ಇನ್ನೂ ಅನೇಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಕರ್ನಾಟಕದ ಕಾರ್ಪೊರೇಟ್ ವಲಯದ ಹೆಚ್ಚಿನ ತಂಡಗಳು ಕಾರ್ಪೊರೇಟ್ ಟಿ೧೦ಗೆ ತಮ್ಮ ಹೆಸರನ್ನು ನೋಂದಾಯಿಸಿವೆ.
ಟೂರ್ನಮೆಂಟ್ ಮಾದರಿ
ಎಲೈಟ್ ಓಪನ್ ಹಾಗೂ ಕಾರ್ಪೊರೇಟ್ ವಿಭಾಗದ ಪಂದ್ಯಗಳು ಆಸ್ಟ್ರೋ ರ್ಟ್ ಹಾಗೂ ಮ್ಯಾಟಿಂಗ್ ಗ್ರೌಂಡ್‌ನಲ್ಲಿ  ನಡೆಯಲಿವೆ. ಬಿಳಿ ಲೆದರ್ ಬಾಲ್ ಪಂದ್ಯಕ್ಕೆ ಬಳಸಲಾಗುವುದು. ಉಪಹಾರ, ಊಟದ ಸೌಲಭ್ಯವಿರುತ್ತದೆ. ಹೊರಾಜ್ಯಗಳಿಂದ ಬಂದ ತಂಡಗಳಿಗೆ  ಕ್ರೀಡಾಂಗಣ ತಲುಪಲು ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.  ಭಾಗವಹಿಸಿರುವುದಕ್ಕೆ ಪ್ರತಿಯೊಂದು ತಂಡಕ್ಕೂ ಪ್ರಮಾಣ ಪತ್ರ ನೀಡಲಾಗುವುದು.  ಪ್ರತಿಯೊಂದು ಪಂದ್ಯಕ್ಕೂ ಪಂದ್ಯಶ್ರೇಷ್ಠ ಬಹುಮಾನವಿರುತ್ತದೆ.  ಅಲ್ಲದೆ ಸರಣಿಶ್ರೇಷ್ಠ, ಉತ್ತಮ ಬ್ಯಾಟ್ಸ್‌ಮನ್, ಉತ್ತಮ ಬೌಲರ್ ಪ್ರಶಸ್ತಿಗಳನ್ನೂ ನೀಡಲಾಗುವುದು ಜತೆಯಲ್ಲಿ ಆಕರ್ಷಕ ಬಹಮಾನವಿರುತ್ತದೆ. ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯಲಿರುವ  ಈ ಟೂರ್ನಿಯಲ್ಲಿ  ಬಣ್ಣದ ಜೆರ್ಸಿ ಬಳಸಲಾಗುತ್ತದೆ. ವಿಜೇತ ತಂಡ 1,00,000 ರೂ. ನಗದು ಬಹುಮಾನ ಹಾಗೂ ರನ್ನರ್ ಅಪ್‌ಗೆ 50,000 ರೂ. ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು.
ಎಲೈಟ್ ವಿಭಾಗದ ನಿಯಮಗಳೇ ಕಾರ್ಪೊರೇಟ್ ವಿಭಾಗಕ್ಕೆ ಅನ್ವಯಿಸಿರುತ್ತದೆ. ಆದರೆ ವಿಜೇತ ತಂಡ 50,000 ರೂ. ನಗದು ಬಹುಮಾನ ಹಾಗೂ ರನ್ನರ್ ಅಪ್ ತಂಡ 25,000 ರೂ. ನಗದು ಬಹುಮಾನ ಗಳಿಸಲಿದೆ. ಅಲ್ಲದೆ ವೈಯಕ್ತಿಕ ಬಹುಮಾನಗಳಾದ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್‌ಮನ್  ಹಾಗೂ ಸರಣಿಶ್ರೇಷ್ಠ  ಪ್ರಶಸ್ತಿಗಳನ್ನು ನೀಡಲಾಗುವುದು. ಪ್ರತಿಯೊಂದು ಪಂದ್ಯಕ್ಕೂ ಪಂದ್ಯಶ್ರೇಷ್ಠ ಬಹುಮಾನವಿರುತ್ತದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:  9483077325 Santosh, 7892797488 Nithin, 9036420858 Raheem. eamil:t10.torpedoseclub@gmail.com

Related Articles