Thursday, March 28, 2024

ಚಾಲೆಂಜ್ ಕುಂದಾಪುರ ತಂಡಕ್ಕೆ ಬೈಂದೂರು ಟ್ರೋಫಿ

ಆರ್.ಕೆ.ಆಚಾರ್ಯ

ಬೈಂದೂರು ಸ್ಪೋರ್ಟ್ಸ್ ಕ್ಲಬ್(ರಿ)  ಇವರ ಆಶ್ರಯದಲ್ಲಿ ಜರುಗಿದ 3 ದಿನಗಳ ಕಾಲ ಹೊನಲು ಬೆಳಕಿನಡಿಯಲ್ಲಿ ಸಾಗಿದ ರಾಜ್ಯ ಮಟ್ಟದ 40 ಗಜಗಳ ಕ್ರಿಕೆಟ್ ಪಂದ್ಯಾಟ “ಬೈಂದೂರು ಟ್ರೋಫಿ” ಯನ್ನು ಚಾಲೆಂಜ್ ಕುಂದಾಪುರ ತಂಡ ಪಡೆದುಕೊಂಡಿತು.

ರಾಜ್ಯದ ವಿವಿಧೆಡೆಯಿಂದ 22 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ,ಲೀಗ್ ಹಂತದ ಹಣಾಹಣಿಗಳ ಬಳಿಕ ಅಜಯ್ ಕುಂಜಿಗುಡಿ,ಚಾಲೆಂಜ್ ಕುಂದಾಪುರ, ಪ್ರೈಮ್ ಗುಂಡ್ಮಿ ಹಾಗೂ ಕುಂದಾಪುರ ಫ್ರೆಂಡ್ಸ್ ಸೆಮಿಫೈನಲ್‌ ತಲುಪಿದ್ದವು.
ಸೆಮಿಫೈನಲ್ ಕಾದಾಟದಲ್ಲಿ ಚಾಲೆಂಜ್ ತಂಡ ಅಜಯ್ ಕುಂಜಿಗುಡಿಯನ್ನು ಹಾಗೂ ಕುಂದಾಪುರ ಫ್ರೆಂಡ್ಸ್
ಪ್ರೈಮ್ ಗುಂಡ್ಮಿ ತಂಡವನ್ನು ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟಿದ್ದರು.
ಫೈನಲ್ ನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕುಂದಾಪುರ ಫ್ರೆಂಡ್ಸ್ ತಂಡ 6 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 32 ರನ್ ಗಳ ಸ್ಪರ್ಧಾತ್ಮಕ ಗುರಿಯನ್ನು ನಿಗದಿಗೊಳಿಸಿದ್ದರು.
ಗುರಿಯನ್ನು ಬೆಂಬತ್ತಿದ ಚಾಲೆಂಜ್ ತಂಡ ಅಶ್ವಿನ್ ಕುಂಭಾಶಿ ಯವರ ಬಿರುಸಿನ 9 ಎಸೆತಗಳಲ್ಲಿ 17 ರನ್, ವೆಂಕಟೇಶ್ ಆಚಾರ್ಯ(ವೆಂಕಿ) ರ 13 ರನ್ ಗಳ ನೆರವಿನಿಂದ 4.1 ಓವರ್ ಗಳಲ್ಲಿ ವಿಜಯದ ಮೊತ್ತವನ್ನು ನಿರಾಯಾಸವಾಗಿ ಬೆನ್ನತ್ತಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು.
ವಿಜಯಿ ಚಾಲೆಂಜ್ ಕುಂದಾಪುರ ತಂಡ ಪ್ರಶಸ್ತಿ ರೂಪದಲ್ಲಿ 1,11,111 ರೂ ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡರೆ,ರನ್ನರ್ಸ್ “ಕುಂದಾಪುರ ಫ್ರೆಂಡ್ಸ್” ತಂಡ 66,666 ನಗದು ಸಹಿತ, ಆಕರ್ಷಕ ಟ್ರೋಫಿ ತಮ್ಮದಾಗಿಸಿಕೊಂಡರು. ಫೈನಲ್ ನ  ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ವೆಂಕಿ ಪಡೆದುಕೊಂಡರೆ,ಟೂರ್ನಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ನಿರ್ವಹಣೆ ತೋರಿದ ಕುಂದಾಪುರ ಫ್ರೆಂಡ್ಸ್ ನ ಫೈಝಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಮೂರು ದಿನಗಳ ನಡೆದ ವೈಭವೋಪೇತ ಪಂದ್ಯಾಟದಲ್ಲಿ ಹಿರಿಯ ,ಕಿರಿಯ ಕ್ರೀಡಾ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.ಮೊದಲಾಗಿ ಚಕ್ರವರ್ತಿಯ ಹಿರಿಯ ಕ್ರಿಕೆಟಿಗರಾದ ಮನೋಜ್ ನಾಯರ್ ಹಾಗೂ
 ಕೆ.ಪಿ ಸತೀಶ್ ಹಾಗೂ ಹಿರಿಯ ವೀಕ್ಷಕ ವಿವರಣೆಕಾರರಾದ ಶಿವನಾರಾಯಣ್ ಐತಾಳ್,ವಿನಯ್ ಉದ್ಯಾವರ್,ಪ್ರಶಾಂತ್ ಅಂಬಲಪಾಡಿ,ರಾಘವೇಂದ್ರ ಮಟಪಾಡಿ ಜೊತೆಯಾಗಿ ಯುವ ಅಂಕಣಕಾರ ಕೋಟ ರಾಮಕೃಷ್ಣ ಆಚಾರ್ ರವರನ್ನು ಗುರುತಿಸಿ ಸನ್ಮಾನಿಸಲಾಯಿತು…

Related Articles