Friday, November 22, 2024

ಟಾರ್ಪೆಡೋಸ್ ಟಿ10 ಬ್ಯಾಶ್: ಆಳ್ವಾಸ್‌ಗೆ ಶರಣಾದ ಡಿಎನ್‌ಐ

ಸ್ಪೋರ್ಟ್ಸ್ ಮೇಲ್ ವರದಿ 

ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್   (ರಿ.) ಇದರ ವತಯಿಂದ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ 10 ಓವರ್‌ಗಳ ಕ್ರಿಕೆಟ್ ಹಬ್ಬ ಟಾರ್ಪೆಡೋಸ್ ಟಿ10 ಬ್ಯಾಶ್‌ನ ಮೂರನೇ ದಿನದಲ್ಲಿ, ಮೂಡಬಿದಿರೆಯ ಆಳ್ವಾಸ್, ಬೆದ್ರಾ ಬುಲ್ಸ್ ಹಾಗೂ ಇಂಡಿಯನ್ ಪೋರ್ಟ್ ತಂಡಗಳು ಜಯ ಗಳಿಸಿ ಮುಂದಿನ ಹಂತ ತಲುಪಿವೆ.

ಸುರತ್ಕಲ್‌ನ ಎನ್‌ಐಟಿಕೆ ಕ್ರೀಡಾಂಗಣದಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ ಮೂಡಬಿದಿರೆಯ ಆಳ್ವಾಸ್ ತಂಡ ಡಿಎನ್‌ಐ ವಿರುದ್ಧ  43 ರನ್‌ಗಳ ಜಯ ಗಳಿಸಿ ಶುಭಾರಂಭ  ಕಂಡಿತು. ಆಳ್ವಾಸ್ ಪರ ಲಾಲ್ ಸಚಿನ್ (ಅಜೇಯ 82) ಹಾಗೂ ಶ್ರೀಶಾ ಅವರ ಉತ್ತಮ ಬೌಲಿಂಗ್ ದಾಳಿಯ (12ಕ್ಕೆ 2) ನೆರವು ಆಳ್ವಾಸ್ ತಂಡಕ್ಕೆ ಜಯ ತಂದುಕೊಟ್ಟಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಳ್ವಾಸ್ ತಂಡದ ಪರ ಲಾಲ್ ಸಚಿನ್ 33 ಎಸೆತಗಳಲ್ಲಿ 82 ರನ್ ಸಿಡಿಸುವ ಮೂಲಕ ತಂಡ 118 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಇದಕ್ಕೆ ಉತ್ತರವಾಗಿ  ಡಿಎನ್‌ಐ ಕೇವಲ 75 ರನ್ ಗಳಿಸಿ 43 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು. ನಿರೀಕ್ಷೆಯಂತೆ ಲಾಲ್ ಸಚಿನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ದಿದನ ಎರಡನೇ ಪಂದ್ಯದಲ್ಲಿ ಮಂಗಳೂರು ಡೈನಮೋಸ್ ತಂಡ ತೆಲಂಗಾಣ ಟೈಗರ್ಸ್ ವಿರುದ್ಧ 78 ರನ್‌ಗಳ ಬೃಹತ್ ಜಯ ಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಂಗಳೂರು ಡೈನಮೋಸ್ ತಂಡದ ಪರ ನಿಶಿತ್ ಎನ್. ರಾಜ್  34ಎಸೆತಗಳಲ್ಲಿ 65 ರನ್ ಸಿಡಿಸುವ ಮೂಲಕ ಡೈನಮೋಸ್ 118 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಇದಕ್ಕೆ ಉತ್ತರವಾಗಿ ತೆಲಂಗಾಣ ತಂಡ ಕೇವಲ 40 ರನ್‌ಗಳಿಗೆ ಸರ್ವ ಪತನ ಕಂಡಿತು. ನಿಶಿತ್‌ರಾಜ್ ಪಂದ್ಯಶ್ರೇಷ್ಠರೆನಿಸಿದರು.
ಮಂಗಳೂರು ಡೈನಮೋಸ್ ಹಾಗೂ ಎನ್‌ಐಟಿಕೆ ಸುರತ್ಕಲ್ ತಂಡಗಳ ನಡುವಿನ ಪಂದ್ಯದಲ್ಲಿ ಟೂರ್ನಿಯಲ್ಲೇ ಅತಿ ಹೆಚ್ಚು ರನ್ ದಾಖಲಾಯಿತು. ನಿಶಿತ್ ರಾಜ್ (52) ಹಾಗೂ ನಿಹಾಲ್ ಡಿಸೋಜಾ (64) ಅವರ ಸ್ಫೋಟಕ ಅ‘ರ್ಶತಕದ ನೆರವಿನಿಂದ ಡೈನಮೋಸ್ ತಂಡ ಕೇವಲ 1 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. ಎನ್‌ಐಟಿಕೆ ಕೇವಲ 40 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ೮೮ ರನ್‌ಗಳ ಬೃಹತ್ ಅಂತರದ ಸೋಲನುಭವಿಸಿತು.
ಪಣಂಬೂರಿನ ಎನ್‌ಎಂಪಿಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಡಿಯನ್ ಪೋರ್ಟ್ ತಂಡ ಎಂಸಿಎ್ ವಿರುದ್ಧ  7 ವಿಕೆಟ್‌ಗಳ ಜಯ ಗಳಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಇಂಡಿಯನ್ ಪೋರ್ಟ್ ತಂಡ ಎಂಸಿಎಫ್  ತಂಡವನ್ನು ಕೇವಲ 69 ರನ್‌ಗಳಿಗೆ ಕಟ್ಟಿಹಾಕಿತು.  ನಂತರ ಕೇವಲ 6.5 ಓವರ್‌ಗಳಲ್ಲಿ  3 ವಿಕೆಟ್ ಕಳೆದುಕೊಂಡು 70 ರನ್ ಗಳಿಸಿ ಜಯದ ಗುರಿ ತಲುಪಿತು.
ದಿನದ ಎರಡನೇ ಪಂದ್ಯದಲ್ಲಿ ಆಂಧ್ರದ ವಿರುದ್ಧ ಬೆದ್ರಾ ಡ್ಸ್ ತಂಡ ಸುಲಭ  ಜಯ ಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿಗ ಆಂಧ್ರ  ತಂಡ 10 ಓವರ್‌ಗಳಲ್ಲಿ ಕೇವಲ 69 ರನ್ ಗಳಿಸಿತು. ಬೆದ್ರಾ  ಫ್ರೆಂಡ್ಸ್  ಪಡೆ ಕೇವಲ 6.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು.  ದಿನದ ಇನ್ನೊಂದು ಪಂದ್ಯದಲ್ಲಿ ಬೆದ್ರಾ ಬುಲ್ಸ್ ತಂಡ ಕುಂದಾಪುರದ ಚಕ್ರವರ್ತಿ ವಿರುದ್ಧ  27 ರನ್ ಜಯ ಗಳಿಸಿ ಮುನಡೆಯಿತು. ಬೆದ್ರಾ ಬುಲ್ಸ್ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದರೆ, ಚಕ್ರವರ್ತಿ ತಂಡ  ಕೇವಲ 81 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇಂಡಿಯನ್ ಪೋರ್ಟ್ ಹಾಗೂ ಬಿಎಎಸ್‌ಎ್ ನಡುವಿನ ಪಂದ್ಯದಲ್ಲಿ ಇಂಡಿಯನ್ ಪೋರ್ಟ್  8 ವಿಕೆಟ್‌ಗಳ ಜಯ ಗಳಿಸಿ ಮುನ್ನಡೆಯಿತು.

Related Articles