Friday, November 22, 2024

ಮುಂಬೈ ಇಂಡಿಯನ್ಸ್‌ಗೆ ರಾಜಸ್ಥಾನ್‌ ರಾಯಲ್ಸ್ ಸವಾಲು

ಜೈಪುರ: ಸೋಲಿನ ಸುಳಿಗೆ ಸಿಲುಕಿ ಈಗ ಜಯದ ಅನಿವಾರ್ಯತೆಯಲ್ಲಿರುವ  ರಾಜಸ್ಥಾನ್‌ ರಾಯಲ್ಸ್‌ ತಂಡ, ಶನಿವಾರ  ಮುಂಬೈ ಇಂಡಿಯನ್ಸ್‌ ವಿರುದ್ಧ ತವರು ನೆಲವಾದ ಸವಾಯ್‌ ಮಾನ್ ಸಿಂಗ್  ಕ್ರೀಡಾಂಗಣದಲ್ಲಿ ಸೆಣಸಲಿದೆ.

ರಾಜಸ್ಥಾನ್‌ ರಾಯಲ್ಸ್‌ ಇದುವರೆಗೂ ಆಡಿರುವ ಒಟ್ಟು 8 ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಜಯ ಸಾಧಿಸಿದ್ದು, ಇನ್ನುಳಿದ ಆರು ಕಾದಾಟಗಳಲ್ಲಿ ಸೋಲು ಅನುಭವಿಸಿದೆ. ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಆದರೆ, ಮುಂಬೈ ಇಂಡಿಯನ್ಸ್‌ ಆಡಿರುವ 9 ಪಂದ್ಯಗಳಲ್ಲಿ ಆರರಲ್ಲಿ ಜಯಿಸಿ, ಮೂರು ಪಂದ್ಯಗಳಲ್ಲಿ ಸೋಲು ಅನನುಭವಿಸಿದೆ. 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಮುಂಬೈ ಇಂಡಿಯನ್ಸ್ ಪ್ಲೇಆಫ್‌ ಹಾದಿ ಸುಲಭವಾದರೆ, ರಾಜಸ್ಥಾನ್‌ ರಾಯಲ್ಸ್‌ ಇನ್ನುಳಿದ ಎಲ್ಲ ಪಂದ್ಯಗಳಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಹಾಗಾಗಿ, ನಾಳಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಗೆಲುವಿನ ಲಯಕ್ಕೆ ಮರಳುವ ಅಗತ್ಯವಿದೆ.

ಉಭಯ ತಂಡಗಳು ಒಟ್ಟು 22 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 11ರಲ್ಲಿ ಜಯ ಸಾಧಿಸಿದೆ. ರಾಜಸ್ಥಾನ್‌ ರಾಯಲ್ಸ್‌ 10 ರಲ್ಲಿ ಜಯ ದಾಖಲಿಸಿದ್ದು, ಇನ್ನೊಂದು ಪಂದ್ಯ ರದ್ದಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ ಈಗಾಗಲೇ ಈ ಎರಡೂ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ 4 ವಿಕೆಟ್‌ಗಳಿಂದ ಜಯ ದಾಖಲಿಸಿತ್ತು.

ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 40 ರನ್‌ಗಳಿಂದ ಜಯ ಸಾಧಿಸಿದೆ. ಮುಂಬೈ ಇಂಡಿಯನ್ಸ್‌ ತಂಡದ ಆರಂಭಿಕ ಜೋಡಿ ರೋಹಿತ್‌ ಶರ್ಮಾ ಹಾಗೂ ಕ್ವಿಂಟನ್‌ ಡಿ ಕಾಕ್‌ ಉತ್ತಮ ಲಯದಲ್ಲಿದ್ದಾರೆ. ಜತೆಗೆ, ಡೆಲ್ಲಿ ವಿರುದ್ಧ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಮಧ್ಯಮ ಕ್ರಮಾಂಕದ ಸ್ಟಾರ್‌ ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ ಹಾಗೂ ಕಿರೋನ್ ಪೊಲಾರ್ಡ್‌ ಅವರ ಬಲ ತಂಡಕ್ಕಿದೆ.

ಬೌಲಿಂಗ್‌ ವಿಭಾಗದಲ್ಲಿ ಜಸ್ಪ್ರೀತ್‌ ಬೂಮ್ರಾ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಆರ್‌ಆರ್‌ ವಿರುದ್ಧ 9 ಪಂದ್ಯಗಳಲ್ಲಿ ಜಸ್ಪ್ರೀತ್‌ ಬೂಮ್ರಾ 10 ವಿಕೆಟ್‌ ಕಬಳಿಸಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌ ತಂಡ, ಕಳೆದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ವಿರುದ್ಧ 12 ರನ್‌ಗಳಿಂದ ಸೋಲು ಅನುಭವಿಸಿತ್ತು. ರಾಜಸ್ಥಾನ್‌ ರಾಯಲ್ಸ್‌ ಬ್ಯಾಟಿಂಗ್‌ ವಿಭಾಗದ ಪ್ರಮುಖ ಅಸ್ತ್ರ ಜೋಸ್‌ ಬಟ್ಲರ್‌. ಇವರು ಆಡಿರುವ 8 ಪಂದ್ಯಗಳಿಂದ 311 ರನ್‌ ದಾಖಲಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ರಾಹುಲ್‌ ತ್ರಿಪಾಠಿ, ಸಂಜು ಸ್ಯಾಮ್ಸನ್‌, ಅಜಿಂಕ್ಯಾ ರಹಾನೆ ಸ್ಥಿರತೆ ಕಾಡಾಡಿಕೊಳ್ಳುವ ಅಗತ್ಯವಿದೆ.

ಬೌಲಿಂಗ್‌ ವಿಭಾಗದಲ್ಲಿ ಜೋಫ್ ಅರ್ಚರ್‌ ಉತ್ತಮ ಲಯದಲ್ಲಿದ್ದಾರೆ. ಇವರು ಕಳೆದ ಪಂದ್ಯದಲ್ಲಿ 4 ಓವರ್‌ಗಳಿಗೆ ಕೇವಲ 15 ರನ್‌ ನೀಡಿ 3 ವಿಕೆಟ್‌ ಪಡೆದಿದ್ದರು. ಇನ್ನುಳಿದ ಬೌಲರ್‌ಗಳು ದುಬಾರಿಯಾಗಿದ್ದರು. ಜೋಫ್ರ ಜತೆ ಇನ್ನುಳಿದವರು ಉತ್ತಮ ಪ್ರದರ್ಶನ ತೋರುವುದು ಅಗತ್ಯ.

Related Articles