ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತ

0
34
ಗಯಾನ:

ಮಿಥಾಲಿ ರಾಜ್(56) ಅರ್ಧ ಶತಕದ ನೆರವಿನಿಂದ ಭಾರತ ವನಿತೆಯರು ಐಸಿಸಿ ಮಹಿಳೆಯರ ವಿಶ್ವಕಪ್ ಟೂರ್ನಿಯ ಐದನೇ ಪಂದ್ಯದಲ್ಲಿ ಪಾಕಿಸ್ತಾನದೆದುರು ಏಳು ವಿಕೆಟ್ ಗಳ ಗೆಲುವು ಸಾಧಸಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್ ಗಳಿಗೆ ಏಳು ವಿಕೆಟ್ ಕಳೆದುಕೊಂಡು 133 ರನ್ ದಾಖಲಿಸಿತ್ತು. ಪಾಕಿಸ್ತಾನ ಪರ ಉತ್ತಮ ಬ್ಯಾಟಿಂಗ್ ಮಾಡಿದ ಮಧ್ಯಮ ಕ್ರಮಾಂಕದ ಬಿಶ್ಮಾ ಮಾರೂಫ್(53) ಹಾಗೂ ನಿದಾ ದರ್(52) ತಲಾ ಅರ್ಧ ಶತಕ ಗಳಿಸಿದರು  ಇವರನ್ನೂ ಬಿಟ್ಟರೆ ಉಳಿದವರು ಕ್ರೀಸ್ ನಲ್ಲಿ ನಿಲ್ಲಲೇ ಇಲ್ಲ.

ಪಾಕ್ ನೀಡಿದ್ದ 134 ರನ್ ಗುರಿ ಬೆನ್ನತ್ತಿದ ಭಾರತ, 19 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಗೆಲುವಿನ ದಡ ಸೇರಿತು. ಭಾರತ ಪರ ಉತ್ತಮ ಬ್ಯಾಟಿಂಗ್ ಮಾಡಿದ ಮಿಥಾಲಿ ರಾಜ್(56) 47 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಜತೆಗೆ,  ಸ್ಮೃತಿ  ಮಂಧಾನ 26 ರನ್ ಗಳಿಸಿದರು. ಅಂತಿಮವಾಗಿ ಭಾರತ ಇನ್ನೂ, ಒಂದು ಓವರ್ ಬಾಕಿಯಿರುವಂತೆ ಗೆದ್ದು ಬೀಗಿತು.