ಪರ್ತ್, ಡಿಸೆಂಬರ್ 18
ನಥಾನ್ ಲೆಯಾನ್ ಹಾಗೂ ಮಿಚೆಲ್ ಸ್ಟಾರ್ಕ್ ದಾಳಿಗೆ ಸಿಲುಕಿದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 146 ರನ್ ಅಂತರದಲ್ಲಿ ಸೋಲು ಅನು‘ವಿಸುವ ಮೂಲಕ ನಾಲ್ಕು ಪಂದ್ಯಗಳ ಬಾರ್ಡರ್ -ಗವಾಸ್ಕರ್ ಟೆಸ್ಟ್ ಸರಣಿ 1-1ರಲ್ಲಿ ಸಮಬಲಗೊಂಡಿದೆ.
287 ರನ್ ಜಯದ ಗುರಿ ಹೊತ್ತ ಭಾರತ ಲೆಯಾನ್ (39ಕ್ಕೆ 3) ಹಾಗೂ ಸ್ಟಾರ್ಕ್ (46ಕ್ಕೆ 4) ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 140 ರನ್ ಗಳಿಸಿತು. ಸ್ಪಿನ್ ದಾಳಿಯ ಮೂಲಕ ಜಯದ ರೂವಾರಿ ಎನಿಸಿದ ಲೆಯಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಹಾಗೂ ಮುರಳಿ ವಿಜಯ್ ಬ್ಯಾಟಿಂಗ್‌ನಲ್ಲಿ ವಿಲವಾಗಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಸ್ಪಿನ್ ಬೌಲರ್‌ಗಳಿಗೆ ತಂಡದಲ್ಲಿ ಅವಕಾಶ ನೀಡದಿರುವುದು ಸೋಲಿಗೆ ಮತ್ತೊಂದು ಪ್ರಮುಖ ಕಾರಣವಾಗಿತ್ತು. ಅಜಿಂಕ್ಯ ರಹಾನೆ (30) ಹಾಗೂ ರಿಶಬ್ ಪಂತ್ (30) ಹೊರತುಪಡಿಸಿದರೆ ಭಾರತದ ಇತರ ಆಟಗಾರರು ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು.
ಮೊದಲ ಇನಿಂಗ್ಸ್‌ನಲ್ಲಿ 326 ರನ್ ಗಳಿಸಿದ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್‌ನಲ್ಲಿ 243 ರನ್‌ಗಳಿಗೆ ಸರ್ವ ಪತನ ಕಂಡಿತ್ತು. ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 283 ರನ್ ಗಳಿಸಿ, ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 140 ರನ್‌ಗೆ ತೃಪ್ತಿಪಟ್ಟಿತು.