Tuesday, January 28, 2025

ಕಾರು ಅಪಘಾತ: ಕ್ರಿಕೆಟಿಗ ಮುಷೀರ್‌ ಖಾನ್‌ 16 ವಾರ ಕ್ರಿಕೆಟ್‌ನಿಂದ ಔಟ್‌!

ಲಖನೌ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಂಬಯಿಯ ಯುವ ಆಟಗಾರ ಸರ್ಫರಾಜ್‌ ಖಾನ್‌ ಅವರ ಸಹೋದರ ಮುಷೀರ್‌ ಖಾನ್‌ ಅವರು ಇರಾನಿ ಮತ್ತು ರಣಜಿ ಟ್ರೋಫಿ ಸೇರಿದಂತೆ ಯಾವುದೇ ಪಂದ್ಯಕ್ಕೂ ಲಭ್ಯ ಇರುವುದಿಲ್ಲ. ಅವರಿಗೆ 16 ವಾರಗಳ ವಿಶ್ರಾಂತಿ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. Cricketer Musheer Khan suffers road accident in UP will miss the cricket for 16 weeks.

ಮುಷೀರ್‌ ಖಾನ್‌ ತಂದೆ ನೌಷಾದ್‌ ಖಾನ್‌ ಮತ್ತು ಇತರರೊಂದಿಗೆ ಅಜಮ್‌ಘರ್‌ನಿಂದ ಲಖನೌಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪೂರ್ವಾಂಚಲ್‌ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣಿಸುತ್ತಿರುವಾಗ ಕಾರು ರಸ್ತೆ ವಿಭಾಜಕಕ್ಕೆ ಬಡಿದು ಅಪಘಾತ ಸಂಭವಿಸಿದೆ.

ನೌಷಾದ್‌ ಹಾಗೂ ಇತರರಿಗೆ ಸಣ್ಣಪುಟ್ಟ ಗಾಯವಾಗಿದ್ದು ಹಿಂದೆ ಕೂತಿದ್ದ ಮುಷೀರ್‌ ಖಾನ್‌ ಕುತ್ತಿಗೆಗೆ ತೀವ್ರ ಗಾಯವಾಗಿದ್ದು ವೈದ್ಯರು 16 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ. ಮುಷೀರ್‌ ಭಾನುವಾರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಪ್ರಯಾಣಿಸಲಿದ್ದಾರೆ.

Related Articles