Friday, October 18, 2024

ಅತಿಥಿಗೆ 5 ಲಕ್ಷ, ಕಂಠೀರವ ಗೆದ್ದವರಿಗೆ 15 ಸಾವಿರ!

ಮೈಸೂರು: ಇದು ನಮ್ಮ ಕ್ರೀಡಾ ವ್ಯವಸ್ಥೆ. ದಸರಾ ಕ್ರೀಡಾಕೂಟ ಉದ್ಘಾಟನೆಗೆ ಬಂದ ಅತಿಥಿಗೆ 5 ಲಕ್ಷ ರೂ. ನಗದು ಬಹುಮಾನ, ಸನ್ಮಾನ…ಕೊಡಲಿ ಖುಷಿಯ ವಿಚಾರ. ಆದರೆ ರಾಜ್ಯದ ಪ್ರತಿಷ್ಠಿತ ನಾಡಹಬ್ಬದ ಕುಸ್ತಿಯಲ್ಲಿ ಕಂಠೀರವ ಗೌರವಕ್ಕೆ ಪಾತ್ರರಾದವರಿಗೆ ಕೊಡುವ ನಗದು ಬಹುಮಾನ ಬರೇ 15 ಸಾವಿರ ರೂ.! Dasara guest got rupees 5 lakh for Dasara Kanteerava winner got rupees 15,000

ಬಾಗಲಕೋಟೆಯ ಶಿವ ಪೂಜಾರಿ ಈ ಬಾರಿಯ ದಸರಾ ಕಂಠೀರವ ಪ್ರಶಸ್ತಿ ಗೆದ್ದಿದ್ದಾರೆ.
ಮೈಸೂರಿನ ಮಹಾಜಾರ ಕಾಲದಿಂದಲೂ ನಡೆದುಕೊಂಡು ಬಂದಿರುವ ದಸರಾ ಕುಸ್ತಿಗೆ ಐತಿಹಾಸಿಕ ಹಿನ್ನೆಲೆ ಇದೆ. ಆ ಪ್ರಶಸ್ತಿಯೇ ಗೌರವಯುತವಾದುದು. ಅದಕ್ಕೆ ಬೆಲೆ ಕಟ್ಟಲಾಗದು. ಆದರೂ ಕಷ್ಟಪಟ್ಟು ವರ್ಷಗಳಿಂದ ಅಭ್ಯಾಸ ನಡೆಸುತ್ತಿರುವ ಕುಸ್ತಿಪಟುಗಳಿಗೆ ಖರ್ಚು ಕೂಡ ಇರುತ್ತದೆ. ಕುಸ್ತಿಪಟುಗಳ ಆಹಾರಕ್ಕೆ, ಅವರ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ಹಣ ವ್ಯಯ ಮಾಡಿರುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಗೆಲ್ಲುವ ಕುಸ್ತಿಪಟುಗಳಿಗೆ ಗೌರವಯುತ ಮೊತ್ತ ನೀಡುವ ಬಗ್ಗೆ ಸರಕಾರ ಅಥವಾ ಸಂಘಟಕರು ಮುತುವರ್ಜಿ ವಹಿಸಬೇಕು.
ಅತಿಥಿಗಳಿಗೆ ಗೌರವ ನೀಡಿರುವುದು ಸೂಕ್ತ, ಏಕೆಂದರೆ ಅದು ಬೇರೆ ರಾಜ್ಯಗಳಲ್ಲೂ ಸುದ್ದಿಯಾಗುತ್ತದೆ, ಅವರಿಗೆ ವಿಮಾನಯಾನ ಸೌಲಭ್ಯ, ಹೊಟೇಲ್ ವ್ಯವಸ್ಥೆ ಎಲ್ಲವೂ ಉನ್ನತ ಮಟ್ಟದಲ್ಲಿ ನೀಡಿರುವುದು ಸರಿಯಾಗಿದೆ ಆದರೆ ನಮ್ಮವರು?
ಒಂದು ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯ ಗೆದ್ದರೆ 1-2 ಲಕ್ಷ ಬಹುಮಾನ ನೀಡುವ ಕಾಲದಲ್ಲಿ ದಸರಾದಲ್ಲಿ ಗೆದ್ದ ಕುಸ್ತಿ ಪಟಿಗಳಿಗೆ ಅತಿ ಕಡಿಮೆ ಬಹುಮಾನ ನೀಡಿರುವುದು ದೂಕ್ತವಲ್ಲ.

Related Articles