Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ದಾವೂದ್‌ ಇಬ್ರಾಹಿಂಗೇ Get Out ಎಂದ ಕಪಿಲ್‌ ದೇವ್‌!

ಭೂಗತ ದೊರೆ ಎಂದೇ ಕುಖ್ಯಾತಿ ಪಡೆದಿರುವ ದಾವೂದ್‌ ಇಬ್ರಾಹಿಂ ಭಾರತ ತಂಡದ ಡ್ರೆಸ್ಸಿಂಗ್‌ ರೂಮ್‌ಗೆ ಬಂದರೆ ಹೇಗಾಗಬಹುದು? ಆದರೆ ಅವನನ್ನು ಹೊರ ನಡೆ ಎಂದು ಹೇಳುವ ಧೈರ್ಯ ಆಗಿನ ಕಾಲಕ್ಕೆ ಯಾರಿಗಾದರೂ ಇದ್ದಿತ್ತಾ? ಇದ್ದಿತ್ತು ಅದು ಕಪಿಲ್‌ ದೇವ್‌ ಅವರಿಗೆ ಮಾತ್ರ. When Kapil Dev told Dawood Ibrahim “who is this man get out”

ದಾವೂದ್‌ ಇಬ್ರಾಹಿಂ ಬೆಟ್ಟಿಂಗ್‌ ಮಾಫಿಯಾದ ದೊರೆ. ಶಾರ್ಜಾದಲ್ಲಿ ಪಂದ್ಯ ನಡೆದರೆ ಅಲ್ಲಿಯ ಪ್ರತಿಯೊಂದು ಪಂದ್ಯಕ್ಕೂ ಹಾಜರ್‌. ದಿಲೀಪ್‌ ವೆಂಗ್‌ಸರ್ಕಾರ್‌ ಬಹಳ ಸಮಯದ ಹಿಂದೆ ಪ್ರತಿಕಾಗೋಷ್ಠಿಯಲ್ಲಿ ಕಪಿಲ್‌ ದೇವ್‌ ಅವರ ನೈಜ ಸಾಮರ್ಥ್ಯ ಹಾಗೂ ನೈಜ ಕ್ರಿಕೆಟಿನ ಬಗ್ಗೆ ಮಾತನಾಡುತ್ತ ಶಾರ್ಜಾ ಡ್ರೆಸ್ಸಿಂಗ್‌ ರೂಮ್‌ನಲ್ಲಿ ನಡೆದ ಘಟನೆಯೊಂದನ್ನು ವಿವರಿಸಿದ್ದರು.

1986ರ ಸಮಯ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಶಾರ್ಜಾದಲ್ಲಿ ಪಂದ್ಯ. ಡ್ರೆಸ್ಸಿಂಗ್‌ ರೂಮ್‌ಗೆ ದಾವೂದ್‌ ಇಬ್ರಾಹಿಂ ಪ್ರವೇಶ. ಈಗಿನ ಹಾಗೆ “ಇಲ್ಲಿಗೆ ಯಾಕೆ ಬಂದೆ,ಗೆಟ್‌ ಔಟ್‌” ಎಂದು ಹೇಳುವ ಧೈರ್ಯ ಆಗ ಯಾರಿಗೂ ಇದ್ದಂತೆ ಕಾಣಲಿಲ್ಲ. ಡ್ರೆಸ್ಸಿಂಗ್‌ ರೂಮ್‌ಗೆ ಬಂದ ದಾವೂದ್‌, “ಈ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದರೆ ಭಾರತ ತಂಡದ ಎಲ್ಲ ಆಟಗಾರರಿಗೂ Toyota Corolla ಕಾರಿನ ಉಡುಗೊರೆ,” ಎಂದು ಘೋಷಿಸಿದ. ಎಲ್ಲರೂ ಮುಖ ಮುಖ ನೋಡಿಕೊಂಡು ಸುಮ್ಮನಿದ್ದರು. “ಹೇಳಿ ಕೇಳಿ ಅಂಡರ್‌ ವರ್ಲ್ಡ್‌ ಡಾನ್‌ ಬೇರೆ. ಆದರೆ ಕಪಿಲ್‌ ದೇವ್‌ ಅತ್ಯಂತ ಧೈರ್ಯವಂತ ಮತ್ತು ನೇರ ನಡೆನುಡಿಯ ಶಿಸ್ತಿನ ಆಟಗಾರ. ಪತ್ರಿಕಾ ಗೋಷ್ಠಿ ಮುಗಿಸಿ, ನೇರವಾಗಿ ದಾವುದ್‌ ಕುಳಿತಲ್ಲಿಗೆ ಬಂದು, ಸಿಟ್ಟಿನಿಂದ “ಯಾವನಿವ, ಗೆಟ್‌ ಓಟ್‌,” ಎಂದು ಹೇಳಿದ ಕೂಡಲೇ ದಾವೂದ್‌ ದೂಸ್ರಾ ಮಾತಾಡದೆ ಹೊರಟು ಹೋದನಂತೆ. ಒಬ್ಬ ಸಮರ್ಥ ನಾಯಕನೆಂದರೆ ಅದು ಕಪಿಲ್‌ ದೇವ್. ಅಂಗಣದ ಹೊರಗೂ.. ಅಂಗಣದ ಒಳಗೂ. ಬಿಸಿಸಿಐ ವಿರುದ್ಧವೇ ಬಂಡಾಯ ಎದ್ದ ಕಪಿಲ್‌ ಆ ನಂತರ ಹಣ ಬಲದ ಮುಂದೆ ಮೌನವಾದರು.


administrator