ಉತ್ತರಾಖಂಡ್: 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 38th National Games Uttarakhand ಮೊದಲ ಎರಡು ದಿನ ಅಗ್ರ ಸ್ಥಾನದಲ್ಲಿದ್ದ ಕರ್ನಾಟಕ ಮೂರನೇ ದಿನದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಈಜು ಹೊರತಾಗಿ ಬೇರೆ ಯಾವುದೇ ಕ್ರೀಡೆಯಲ್ಲಿ ಕರ್ನಾಟಕ ಮೂರನೇ ದಿನದಲ್ಲಿ ಪದಕ ಗೆಲ್ಲುವಲ್ಲಿ ವಿಫಲವಾಯಿತು. Dhinidhi Desinghu won Gold Karnataka drop to third place in Medal Tally.
ಒಟ್ಟು 9 ಚಿನ್ನ, 4 ಬೆಳ್ಳಿ, 4 ಕಂಚಿನ ಪದಕ ಸೇರಿ ಒಟ್ಟು 17 ಪದಕಗಳನ್ನು ಕರ್ನಾಟಕ ಗೆದ್ದುಕೊಂಡಿದೆ. ಪುರುಷರ 400 ಮೀ. ಮೆಡ್ಲೆಯಲ್ಲಿ ಕರ್ನಾಟಕದ ಶೊಅನ್ ಗಂಗೂಲಿ 4 ನಿಮಿಷ 29.10 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ವನಿತೆಯರ 800 ಮೀ ಫ್ರೀಸ್ಟೈಲ್‌ನಲ್ಲಿ ಶ್ರೀ ಚರನಿ ತುಮು ಕಂಚಿನ ಪದಕ ಗೆದ್ದರು. ವನಿತೆಯರ 50 ಮೀ. ಬಟರ್ ಫ್ಲೈ ವಿಭಾಗದಲ್ಲಿ ರಾಜ್ಯದ ಧಿನಿಧಿ ದೇಸಿಂಘು 26.96 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಇದೇ ವಿಭಾಗದಲ್ಲಿ ಕರ್ನಾಟಕದವೇ ಆದ ನೀನಾ ವೆಂಕಟೇಶ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಪುರುಷರ 50 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಕರ್ನಾಟದ ಶ್ರೀಹರಿ ನಟರಾಜ್ 23.37 ಸೆಕೆಂಡುಗಳಲ್ಲಿ ಗುರಿತಲುಪಿ ಚಿನ್ನದಿಂದ ವಂಚಿತರಾಗಿ ಬೆಳ್ಳಿಗೆ ತೃಷ್ತಿಪಟ್ಟರು.