Friday, March 29, 2024

ಮೊದಲ ಗೆಲುವಿನ ಸಮೀಪದತ್ತ ಕರ್ನಾಟಕ

ಮೈಸೂರು:

ಶ್ರೇಯಸ್ ಗೋಪಾಲ್( 63ಕ್ಕೆೆ 4) ಅವರ ಸ್ಪಿನ್ ಮೋಡಿ ಹಾಗೂ ನಾಯಕ ವಿನಯ್ ಕುಮಾರ್(3) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿ ನೆರವಿನಿಂದ ಕರ್ನಾಟಕ ತಂಡ, ರಣಜಿ ಟ್ರೋಫಿ ಎಲೈಟ್ ಗುಂಪು‘ಎ’ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮಹಾರಾಷ್ಟ್ರದ ವಿರುದ್ಧ ಪ್ರಸಕ್ತ ಆವೃತ್ತಿಯ ಮೊದಲ ಗೆಲುವಿನತ್ತ ಸಾಗಿದೆ.

ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ  ಮೂರು ವಿಕೆಟ್ ಕಳೆದುಕೊಂಡು 48 ರನ್‌ಗಳಿಂದ ಶುಕ್ರವಾರ ಮೂರನೇ ದಿನ ದ್ವಿಿತೀಯ ಇನಿಂಗ್ಸ್  ಮುಂದುವರಿಸಿದ ಮಹಾರಾಷ್ಟ್ರ 97 ಓವರ್‌ಗಳಿಗೆ 256 ರನ್ ಗಳಿಸಿ ಆಲೌಟ್ ಆಯಿತು. ಆರಂಭದಲ್ಲಿ ಮೂರು ವಿಕೆಟ್ ಬಹಹುಬೇಗ ಉರುಳಿದರೂ ಮಧ್ಯಮ ಕ್ರಮಾಂಕದಲ್ಲಿ  ಋತುರಾಜ್ ಗಾಯಕ್ವಾಡ್ ಹಾಗೂ ನೌಶಾದ್ ಶೈಖ್ ಅವರ ಅಮೋಘ ಅರ್ಧ ಶತಕಗಳು ತಂಡಕ್ಕೆೆ ಆಸರೆಯಾಯಿತು.
ಋತುರಾಜ್ ಗಾಯಕ್ವಾಡ್(89) ಹಾಗೂ ನೌಶಾದ್ ಶೈಖ್(73*) ಅವರ ಅರ್ಧ ಶತಕಗಳು ತಂಡದ ಮಾನ ಕಾಪಾಡಿತು. ಆದರೆ. ಪ್ರಥಮ ಇನಿಂಗ್‌ಸ್‌‌ನಲ್ಲಿ ಕೇವಲ 113 ರನ್ ಗಳಿಗೆ ಆಲ್‌ಔಟ್ ಆಗಿದ್ದರಿಂದ ಕರ್ನಾಟಕಕ್ಕೆೆ ಬೃಹತ್ ಮೊತ್ತದ ಗುರಿ ನೀಡಲು ಪ್ರವಾಸಿ ತಂಡಕ್ಕೆೆ ಸಾಧ್ಯವಾಗಲಿಲ್ಲ. ಇದರೊಂದಿಗೆ ಕರ್ನಾಟಕ್ಕೆೆ 184 ರನ್ ಗುರಿ ನೀಡಿತು.
ಮಿಂಚಿದ ಶ್ರೇಯಸ್ ಗೋಪಾಲ್:
ಪ್ರಥಮ ಇನಿಂಗ್‌ಸ್‌‌ನಲ್ಲಿ ಅತ್ಯಮೂಲ್ಯ 40 ರನ್ ಗಳಿಸಿ ತಂಡಕ್ಕೆೆ ನೆರವಾಗಿದ್ದ ಶ್ರೇಯಸ್ ಗೋಪಾಲ್ ಬೌಲಿಂಗ್‌ನಲ್ಲೂ ತಂಡಕ್ಕೆೆ ಆಸರೆಯಾದರು. ಮಹಾರಾಷ್ಟ್ರ ತಂಡದ ಪ್ರಮುಖ ಬ್ಯಾಾಟ್‌ಸ್‌‌ಮನ್‌ಗಳನ್ನು ಕ್ರೀಸ್‌ನಲ್ಲಿ ಡ್ಯಾಾನ್‌ಸ್‌ ಮಾಡಿಸಿದರು. 21 ಓವರ್ ಬೌಲಿಂಗ್ ಮಾಡಿದ ಗೋಪಾಲ್ 64 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಇವರಿಗೆ ಸಾಥ್ ನೀಡಿದ ವಿನಯ್ ಕುಮಾರ್ ಮೂರು ವಿಕೆಟ್ ಪಡೆದರು.
ಬಳಿಕ, ಗುರಿ ಬೆನ್ನತ್ತಿದ ಕರ್ನಾಟಕ ಮೂರನೇ ದಿನದಾಟ ಮುಕ್ತಾಾಯಕ್ಕೆೆ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿದೆ. ಇನ್ನೂ ಕರ್ನಾಟಕ ಗೆಲುವಿಗೆ 130 ರನ್‌ಗಳ ಅಗತ್ಯವಿದೆ. ಆರಂಭಿಕರಾಗಿ ಕಣಕ್ಕೆೆ ಇಳಿದ ದೇವ್‌ದತ್ ಪಡಿಕ್ಕಲ್ ಹಾಗೂ ಡಿ.ನಿಶ್ಚಲ್ ಜೋಡಿ ಬಹಳ ಎಚ್ಚರಿಕೆಯಿಂದ ಬ್ಯಾಾಟಿಂಗ್ ಮಾಡಿದರು. 58 ಎಸೆತಗಳನ್ನು ಎದುರಿಸಿದ ಅವರು, ಒಂದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ ಅಜೇಯ 33 ರನ್ ಗಳಿಸಿದರು. ಮತ್ತೊಂದು  ತುದಿಯಲ್ಲಿ ನಿಶ್ಚಲ್ 21 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

Related Articles