Friday, October 18, 2024

ಕ್ಲಾಸೆನ್‌, ಜೆನ್ಸೆನ್‌, ಡುಸೇನ್‌: ಇಂಗ್ಲೆಂಡ್‌ ಸೋಲಿಗೆ ಬೇಕು ಇನ್ನೇನ್?

ಮುಂಬಯಿ: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ ತಂಡ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ 229 ರನ್‌ಗಳ ಹೀನಾಯ ಸೋಲುಣಿಸಿದೆ.  England’s 229-run loss against South Africa is now its biggest ever defeat in One-Day Internationals (ODI) as well as in its World Cup history.

ಹೆನ್ರಿಕ್‌ ಕ್ಲಾಸೆನ್‌ (109), ರೀಜಾ ಹೆನ್ಡ್ರಿಕ್ಸ್‌ (85), ರಾಸ್ಸೆ ಡುಸೇನ್‌ (60) ಮತ್ತು ಮಾರ್ಕೋ ಜನ್ಸೆನ್‌ (75) ಅವರ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ 7 ವಿಕೆಟ್‌ ನಷ್ಟಕ್ಕೆ 399 ರನ್‌ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್‌ ಕೇವಲ 22 ಒವರ್ ಗಳಲ್ಲಿ 170 ರನ್‌ ಗಳಿಸಿ ಸರ್ವ ಪತನ ಕಂಡಿತು. ಜೊತೆಯಲ್ಲಿ ವಿಶ್ವಕಪ್‌ ಇತಿಹಾಸದಲ್ಲೇ ಮತ್ತೊಂದು ಹೀನಾಯ ಸೋಲು ದಾಖಲಿಸಿತು.

ಲುಂಗಿ ಎನ್‌ಗಿಡಿ (26ಕ್ಕೆ 2), ಮಾರ್ಕೋ ಜನ್ಸೆನ್‌ (35ಕ್ಕೆ 2), ಗೆರಾಲ್ಡ್‌ ಕೊಯ್‌ಟ್ಜಿ (35ಕ್ಕೆ 3), ಕಗಿಸೊ ರಬಡಾ (35ಕ್ಕೆ 1) ಕೇಶವ ಮಹಾರಾಜ್‌ (27ಕ್ಕೆ 1) ಹೀಗೆ ದಕ್ಷಿಣ ಆಫ್ರಿಕಾದ ಬೌಲಿಂಗ್‌ ಪಡೆಯ ಪ್ರತಿಯೊಬ್ಬ ಬೌಲರ್ಸ್‌ ವಿಕೆಟ್‌ ಪಡೆಯುವ ಮೂಲಕ ಇಂಗ್ಲೆಂಡ್‌ ಸೋತು ಅಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು. ಇದುವರೆಗೂ ಕೊನೆಯ ಸ್ಥಾನದಲ್ಲಿದ್ದ ಶ್ರೀಲಂಕಾ ತಂಡ ನೆದರ್ಲೆಂಡ್ಸ್‌ ವಿರುದ್ಧ 5 ವಿಕೆಟ್‌ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಎರಡು ಸ್ಥಾನ ಮೇಲಕ್ಕೇರಿತು.

ಅಫಘಾನಿಸ್ತಾನದ ವಿರುದ್ಧ 69 ರನ್‌ಗಳಿಂದ ಸೋತ ಇಂಗ್ಲೆಂಡ್‌ ತಂಡ ಆ ಸೋಲಿನಿಂದ ಚೇತರಿಸಿಕೊಂಡಂತೆ ಕಾಣಲಿಲ್ಲ. ಬೃಹತ್‌ ಮೊತ್ತವನ್ನು ಬೆಂಬೆತ್ತುವ ಒತ್ತಡಕ್ಕೆ ಸಿಲುಕಿ ತಾನೊಂದು ಹಾಲಿ ಚಾಂಪಿಯನ್‌ ಎಂಬ ರೀತಿಯಲ್ಲಿ ಬ್ಯಾಟಿಂಗ್‌ ಪ್ರದರ್ಶಿಸದೆ ಹೀನಾಯ ಸೋಲೊಪ್ಪಿಕೊಂಡಿತು.

ಮೊದಲ ಎರಡು ಪಂದ್ಯಗಳಲ್ಲಿ ಅದ್ಭುತ ಜಯ ದಾಖಲಿಸಿದ್ದ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್‌ ವಿರುದ್ಧ ಸೋಲು ಕಂಗೆಟ್ಟಿತು. ಆದರೆ ಸೋಲಿನಿಂದ ಪಾಠ ಕಲಿತು ಮತ್ತೆ ನೈಜ ಪ್ರದರ್ಶನ ತೋರಿ ವಿಶ್ವಕಪ್‌ನಲ್ಲೇ ಅದ್ಭುತ ಜಯ ದಾಖಲಿಸಿತು.

Related Articles