ಕೋಲ್ಕೊತಾ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತು. ಆದರೆ ಇಂಗ್ಲೆಂಡ್ ತಂಡ ವಿಶ್ವಕಪ್ ಇತಿಹಾಸದಲ್ಲೇ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಕಳೆದುಕೊಂಡ ಎರಡನೇ ತಂಡವೆಂಬ ಕೆಟ್ಟ ದಾಖಲೆಗೆ ಸಾಕ್ಷಿಯಾಯಿತು. England second rank in most wicket lost in world cup cricket.
ಈ ಬಾರಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ 85 ವಿಕೆಟ್ ಕಳೆದುಕೊಂಡಿದೆ. ಇದು ದಾಖಲೆಯಲ್ಲಿ ಎರಡನೇ ಸ್ಥಾನ. ಅಫಘಾನಿಸ್ತಾನ ತಂಡ 2019ರ ವಿಶ್ವಕಪ್‌ನಲ್ಲಿ 87 ವಿಕೆಟ್ ಕಳೆದುಕೊಂಡಿದ್ದು ದಾಖಲೆಯಾಗಿದೆ. ಆಸ್ಟ್ರೇಲಿಯಾ ತಂಡ 2019ರಲ್ಲಿ 81 ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಮೂರನೇ ಸ್ಥಾನದಲ್ಲಿದೆ. ಭಾರತ 2003 ರಲ್ಲಿ 69 ವಿಕೆಟ್‌ಗಳಲ್ಲಿ ಕಳೆದುಕೊಂಡಿದ್ದು 13ನೇ ಸ್ಥಾನದಲ್ಲಿದೆ. ಭಾರತ 11 ಪಂದ್ಯಗಳನ್ನಾಡಿತ್ತು. ಆಫಘಾನಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ತಲಾ 9 ಪಂದ್ಯಗಳನ್ನಾಡಿವೆ.