ಜುಹಾಯಿ:
ಆಸ್ಟ್ರೇಲಿಯಾ ಟೆನಿಸ್ ತಾರೆ ಆಶ್ಲೆ ಬರ್ಟಿ ಅವರು ಡಬ್ಲ್ಯೂಟಿಎ ಎಲೈಟ್ ಟ್ರೋಫಿಯ ಮಹಿಳೆಯರ ಸಿಂಗಲ್ಸ್ ನ ಫೈನಲ್ ಹಣಾಹಣಿಯಲ್ಲಿ ಚೀನಾದ ವಾಂಗ್ ಚಿಯಾಂಗ್ ಅವರನ್ನು ಮಣಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಭಾನುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ನಲ್ಲಿ ಚೀನಾದ ವಾಂಗ್ ಕ್ವಿಯಾಂಗ್ ಅವರನ್ನು 6-3, 6-4 ನೇರಸೆಟ್‌ಗಳಿಂದ ಪರಾಭವಗೊಳಿಸುವಲ್ಲಿ ಆಶ್ಲೆ ಬರ್ಟಿ ಯಶಸ್ವಿಯಾದರು. ವಿಶ್ವಾಸದಿಂದಲೆ ಅಂಗಳಕ್ಕೆ ಇಳಿದ ಬರ್ಟಿ, ಪಂದ್ಯದ ಮೊದಲ ಸೆಟ್‌ನಲ್ಲಿ ಮೂರು ಅಂಕ ಮುನ್ನಡೆಯಾದರೆ, ಎರಡನೇ ಸೆಟ್‌ನಲ್ಲಿ ಎರಡು ಅಂಕ ಮುನ್ನಡೆಯೊಂದಿಗೆ ಗೆಲುವಿನ ನಗೆ ಬೀರಿದರು. ಬಳಿಕ, ಅಂತಿಮ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಚಾಂಪಿಯನ್‌ಪಟ್ಟ ಅಲಂಕರಿಸಿದರು. ಆಸೀಸ್ ಆಟಗಾರ್ತಿ ತಮ್ಮ ವೃತ್ತಿ ಜೀವನದಲ್ಲಿ ಮೂರು ಬಾರಿ ಡಬ್ಲ್ಯೂಟಿಎ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಆರು ಬಾರಿ ಗ್ರ್ಯಾಾಂಡ್ ಸ್ಲ್ಯಾಾಮ್‌ಗಳಲ್ಲಿ ಸ್ಪರ್ಧಿಸಿದ್ದು, ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ