ಬೆಂಗಳೂರು:
ಎರಡು ಬಾರಿ ಬಿಡಿಎಫ್ಎ ಸೂಪರ್ ಡಿವಿಜನ್ ಚಾಂಪಿಯನ್ ಪಟ್ಟ ಗೆದ್ದಿರುವ ಎಫ್ ಸಿ ಬೆಂಗಳೂರು ಯುನೈಟೆಡ್ (ಎಫ್ಸಿಬಿಯು) ಪ್ರಸಕ್ತ ನಡೆಯುತ್ತಿರುವ ಋತುವಿಗಾಗಿ ಮನೆಯಂಗಣ ಮತ್ತು ಹೊರಗಡೆ ಬಳಸುವ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ ಮತ್ತು ಬಣ್ಣ ಕರ್ನಾಟಕದ ಸಾಂಸ್ಕೃತಿಕ ಪರಂಪರೆಗೆ ಸ್ಫೂರ್ತಿಯಾಗಿದೆ. ಅಲ್ಲದೆ ರಾಜ್ಯದ ಶ್ರೀಮಂತ ಕ್ರೀಡಾ ಇತಿಹಾಸದ ಪ್ರತೀಕವಾಗಿದೆ. ಅಲ್ಲದೆ 2021 ರಿಂದ ತಮ್ಮ ಅಂತಾರಾಷ್ಟ್ರೀಯ ಪಾಲುದಾರರಾಗಿರುವ ಸೆವಿಲ್ಲಾ ಎಫ್ ಸಿಗೆ ಗೌರವ ಸೂಚಿಸಿದೆ. ಸಾಂಪ್ರದಾಯಿಕ ಕೆಂಪು ಮತ್ತು ಬಳಿ ಬಣ್ಣ ಮತ್ತು “ಎಂದಿಗೂ ಶರಣಾಗಬೇಡ” ಎಂಬ ಧ್ಯೇಯ ವಾಕ್ಯ ಸೆಲಿಲ್ಲಾದ ಘನತೆಯನ್ನು ಸೂಚಿಸುತ್ತದೆ.
ಮನೆಯಂಗಣದ ಜರ್ಸಿ ಕೆಂಪು ವರ್ಣದಿಂದ ರಂಜಿತ:
ಈ ಬಣ್ಣವು ತಂಡದ ಉತ್ಸಾಹ, ಸಾಮರ್ಥ್ಯ,ಶಕ್ತಿ ಮತ್ತು ಹುರುಪನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಕರ್ನಾಟಕ ಮತ್ತು ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣಕ್ಕೂ ಸಂಬಂಧಿಸಿದೆ. ಹೊರಗಡೆ ಬಳಸುವ ಬಿಳಿ ಮತ್ತು ಮನೆಯಂಗಣದ ಕಿಟ್ ನಂತೆ ಇದ್ದು, ಭಾರತದ ವಿವಿಧ ಪ್ರದೇಶಗಳಲ್ಲಿ ಜನಪ್ರಿಯಗೊಂಡಿರುವ ಕಸೂತಿ ಕಲೆಯನ್ನು ಒಳಗೊಂಡಿದೆ. ಎರಡೂ ಶರ್ಟ್ ಗಳಲ್ಲಿ ಸೆವಿಲ್ಲಾ ಎಫ್ ಸಿಯ ಹೆಮ್ಮೆಯ ಧ್ಯೇಯ ವಾಕ್ಯ “ಎಂದಿಗೂ ಶರಣಾಗಬೇಡ” ಮತ್ತು ವಿಶ್ವ ಮೈತ್ರಿ ಲಾಂಚನವಿದೆ. ಈ ಎರಡು ಕ್ಲಬ್ ಗಳ ನಡುವೆ ಐದು ವರ್ಷಗಳ ಒಪ್ಪಂದವಿದ್ದು, ಈ ಮೂಲಕ ತಾಂತ್ರಿಕ ಅನ್ವೇಷಣೆ, ಅಭಿವೃದ್ಧಿ ಮತ್ತು ಕ್ರೀಡಾ ಯೋಜನೆಗಳು, ಜೊತೆಯಲ್ಲಿ ಜಗತ್ತಿನ ಪ್ರಮುಖ ಫುಟ್ಬಾಲ್ ಮಾರುಕಟ್ಟೆಯಲ್ಲಿ ಸೆವಿಲ್ಲಾ ಫುಟ್ಬಾಲ್ ಕ್ಲಬ್ ನ ಸ್ಥಾನವನ್ನು ಅಭಿವೃದ್ಧಿಪಡಿಸುವುದಾಗಿದೆ.
ವಿಶ್ವ ಫುಟ್ಬಾಲ್ ಶೃಂಗ ಪ್ರಶಸ್ತಿಯಲ್ಲಿ ಎರಡೂ ಕ್ಲಬ್ ಗಳ ಒಪ್ಪಂದವನ್ನು ಗುರುತಿಸಲಾಗಿದೆ. 2021 ರ ಸೆಪ್ಂಬರ್ ನಲ್ಲಿ ಉತ್ತಮ ಅಂತಾರಾಷ್ಡೀಕರಣ ಯೋಜನೆಗಾಗಿ ಎರಡೂ ಕ್ಲಬ್ ಗಳು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
“ಎಂದಿಗೂ ಶರಣಾಗಬೇಡ” ಎಂಬ ಸೆವಿಲ್ಲಾ ಎಫ್ ಸಿಯ ಘೋಷ ವಾಕ್ಯವನ್ನು ಎಫ್ ಸಿ ಬೆಂಗಳೂರು ಯುನೈಟೆಡ್ ಕೂಡ ತನ್ನಲ್ಲಿ ಅಳವಡಿಸಿಕೊಂಡಿದೆ. ಅಂಗಣದ ಒಳಗೆ ಮತ್ತು ಹೊರಗೆ ಗುರಿಯನ್ನು ತಲಪುವ ಹಾದಿಯಲ್ಲಿ ಅಡತಡೆಗಳನ್ನುದಾಟಿ ಬರುವುದು ಹಾಗೂ ಯಶಸ್ಸಿನ ಹಾದಿಯಲ್ಲಿ ತನ್ನದೇ ಆದ ಮಾರ್ಗಗಳನ್ನು ಎಫ್ ಸಿ ಬೆಂಗಳೂರು ಯುನೈಟೆಡ್ ಅನುಸರಿಸುತ್ತಿದೆ. ಎಫ್ ಸಿಬಿಯು ಕಿಟ್ಸ್ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ ಅಧ್ಯಕ್ಷ ಜೋಸ್ ಕ್ಯಾಸ್ಟ್ರೋ, “ಭಾರತದಲ್ಲಿರುವ ನಮ್ಮ ಪಾಲುದಾರರು ಈ ಋತುವಿನಲ್ಲಿ ನಮ್ಮನ್ನು ಪ್ರತಿನಿಧಿಸುತ್ತಿರುವ ಕೆಂಪು ಮತ್ತು ಬಿಳಿ ಬಣ್ಣವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಸೆವಿಲ್ಲಾ ಎಫ್ ಸಿ ಹೆಮ್ಮೆ ಪಡುತ್ತಿದೆ. ” ಎಂದಿಗೂ ಶರಣಾಗಬೇಡ” ಎಂಬ ನಮ್ಮ ಧ್ಯೇಯ ವಾಕ್ಯ ಅವರಿಗೆ ಹಸ್ತಾಂತರವಾಗಿರುವುದು ದೇಶದಲ್ಲಿ ನಮ್ಮ ಪ್ರಸದತುತತೆಯನ್ನು ಪ್ರತಿಬಿಂಬಿಸುತ್ತಿದೆ. ಫುಟ್ಬಾಲ್ ಜಗತ್ತಿನಲ್ಲಿ ನಮ್ಮ ಹೆಸರು ಮತ್ತಷ್ಟು ಜನಪ್ರಿಯಗೊಳಿಸಲು ಇದು ನೆರವಾಗುತ್ತಿದೆ ಎಂಬ ನಂಬಿಕೆ ಇದೆ” ಎಂದರು.
ಎಪ್ ಸಿ ಬೆಂಗಳೂರು ತಂಡದ ಮಾಲೀಕ ಗೌರವ್ ಮನ್ಚಂದ್ ಮಾತನಾಡಿ, “ನಮ್ಮ ಹೊಸ ಕಿಟ್ ನಲ್ಲಿ ಫುಟ್ಬಾಲ್ ಮತ್ತು ಕರ್ನಾಟಕದ ಸಾರ ಒಳಗೊಂಡಿದೆ. ವಿನ್ಯಾಸವು ಕರ್ನಾಟಕದ ಫುಟ್ಬಾಲ್ ಮತ್ತು ಸಾಂಪ್ರದಾಯಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ. ಜೊತೆಯಲ್ಲಿ ಕೆಂಪು ಮತ್ತು ಬಿಳಿ ವರ್ಣ ಮತ್ತು ಸೆವಿಲ್ಲಾ ಎಫ್ ಸಿಯ ಧ್ಯೇಯ ವಾಕ್ಯ ಸ್ಫೂರ್ತಿದಾಯಕವಾದುದು” ಎಂದರು.