Thursday, November 21, 2024

ಫೆಡರೇಷನ್‌ ಕಪ್‌: ಪ್ರಿಯಾ ಮೋಹನ್‌, ರಮ್ಯಶ್ರೀಗೆ ಚಿನ್ನ

ಬೆಂಗಳೂರು: ಗುಜರಾತ್‌ನ ನಾಡಿಯಾಡ್‌ನಲ್ಲಿ ನಡೆಯುತ್ತಿರುವ 20ನೇ ಫೆಡರೇಷನ್‌ ಕಪ್‌ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪ್ರಿಯಾ ಮೋಹನ್‌ 200 ಮೀ. ಓಟದಲ್ಲಿ ಚಿನ್ನ ಗೆದ್ದು ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

23.98 ಸೆಕೆಂಡುಗಳಲ್ಲಿ ಗುರಿ ತಲುಪಿದ ಪ್ರಿಯಾ ಮೋಹನ್‌ ಅಗ್ರ ಸ್ಥಾನಿಯಾದರು. ನಿನ್ನೆ 400 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದು, ಆ ವಿಭಾಗದಲ್ಲೂ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುತ್ತಾರೆ.

ಜಾವೆಲಿನ್‌ನಲ್ಲಿ ರಮ್ಯಶ್ರೀಗೆ ಚಿನ್ನ:

ವನಿತೆಯರ ಜಾವೆಲಿನ್‌ನಲ್ಲಿ 44.42 ಮೀ. ದೂರಕ್ಕೆ ಎಸೆಯುವ ಮೂಲಕ ಕರ್ನಾಟಕದ ರಮ್ಯಶ್ರೀ ಜೈನ್‌ ರಾಜ್ಯಕ್ಕೆ ಮತ್ತೊಂದು ಚಿನ್ನದ ಉಡುಗೊರೆ ನೀಡಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ಗೆ 50 ಮೀ. ಗುರಿ ತಲುಪಬೇಕಾಗಿರುವುದರಿಂದ ರಮ್ಯಶ್ರೀ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಹರ್ಡಲ್ಸ್‌ನಲ್ಲಿ ಶ್ರೇಯಾಗೆ ಕಂಚು:

ವನಿತೆಯರ 400 ಮೀ. ಹರ್ಡಲ್ಸ್‌ನಲ್ಲಿ ರಾಜ್ಯದ ಶ್ರೇಯಾ ರಾಜೇಶ್‌ 1:03.9 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು.

Related Articles