Thursday, April 25, 2024

ಬೆಂಗಳೂರು ಎಫ್ ಸಿ ನನ್ನ ಕ್ರೀಡಾ ಬದುಕಿನ ಹೊಸ ಹೆಜ್ಜೆ: ಆಶಿಕ್

ಆಶಿಕ್ ಕುರುನಿಯನ್ ಎಫ್ ಸಿ ಪುಣೆ ಸಿಟಿ ತೊರೆದು ಬೆಂಗಳೂರು ಎಫ್ ಸಿ ಸೇರಿದ್ದು ಬಹಳಷ್ಟು ಅಚ್ಚರಿಯ ಸಂಗತಿ. ರಾಷ್ಟ್ರೀಯ ತಂಡದಲ್ಲಿ ಹೊಸ ತಾರೆಯಾಗಿ ಮೂಡಿಬಂದ, ಸಾಕಷ್ಟು ಪ್ರತಿಭೆಯ ಆಶಿಕ್ ಚಾಂಪಿಯನ್ ತಂಡದ ಪರ ಆಡುವ ಮೂಲಕ ತಮ್ಮ ಪ್ರತಿಭೆಯನ್ನು ಉತ್ತಮ ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ.  ಆಶಿಕ್ ಅವರ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ.

ನೀವು ಭಾರತದ ಫುಟ್ಬಾಲ್ ಅಭಿಮಾನಿಗಳ ನೆಚ್ಚಿನ ಹೊಸ ತಾರೆರಾಷ್ಟ್ರೀಯ ತಂಡದಲ್ಲಿದ್ದು ನಿಮಗೆ ಹೇಗನಿಸಿತು?

ರಾಷ್ಟ್ರೀಯ ತಂಡದಲ್ಲಿ ನನ್ನ ಬದುಕು ಅದ್ಬುತವೆನಿಸಿತ್ತು. ದೇಶಕ್ಕಾಗಿ ಆಡುವುದು ನನಗೆ ಹಾಗೂ ನನ್ನ ಕುಟುಂಭಕ್ಕೆ ಹೆಮ್ಮೆಯ ಸಂಗತಿ. ಪ್ರತಿಯೊಂದು ಪಂದ್ಯದ ನಂತರ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿರುವುದರಿಂದ ನಾನು ನನ್ನ ಸ್ಥಾನವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಆರಂಭಿಕ ಹನ್ನೊಂದು ಆಟಗಾರರಲ್ಲಿ ನಾನು ಸ್ಥಿರವಾಗಿರಬೇಕೆಂದು ಬಯಸುತ್ತಿದ್ದೆ.

ನೀವು ಬೆಂಗಳೂರು ಎಫ್ ಸಿ ತಂಡವನ್ನು ಸೇರಿರುವ ಬಗ್ಗೆಯೂ ಸಾಕಷ್ಟು ಮಾತುಕತೆ ನಡೆಯುತ್ತಿದೆ ….

ನಾನು ಬೆಂಗಳೂರು ಎಫ್ ಸಿ ತಂಡವನ್ನು ಸೇರಿಕೊಂಡಿದ್ದು ನನ್ನ ಬದುಕಿನ ತಿರುವು, ಏಕೆಂದರೆ ನಾನು ನಾಲ್ಕು ವರ್ಷಗಳಿಗಾಗಿ ಸಹಿ ಮಾಡಿದ್ದೇನೆ. ಈ ಕ್ಲಬ್ ನಲ್ಲಿ ಹೆಚ್ಚು ಕಾಲ ಇದ್ದರೆ ನನ್ನ ಕ್ರೀಡಾ ಬದುಕಿಗೆ ನೆರವಾಗಬಹುದು ಎಂದು ನಂಬಿರುವೆ. ನೀವು ಕ್ಲಬ್ ನ ಜತೆ ಹಾಗೂ ಆಟಗಾರರೊಂದಿಗೆ ಉತ್ತಮವಾದ ಅನುಬಂಧವನ್ನು ಹೊಂದಿರಬೇಕು. ಅತ್ಯಂತ ವೃತ್ತಿಪರತೆಯಿಂದ ಕೂಡಿರುವ ಬೆಂಗಳೂರು ಎಫ್ ಸಿ ಗಾಗಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿ ಇದೆ.

ನೀವು ಈಗ ರದ್ದಾಗಿರುವ ಎಫ್ ಸಿ ಪುಣೆ ಸಿಟಿಯಲ್ಲಿ  ಕೆಲವು ಕಾಲ ಕಳೆದಿದ್ದೀರಿಬದಲಾವಣೆಗೆ ಯಾಕೆ ಮನಸ್ಸು ಮಾಡಿದಿರಿ?

ನನ್ನ ಫುಟ್ಬಾಲ್ ಬದುಕಿನಲ್ಲಿ ಎಫ್ ಸಿ ಪುಣೆ ಸಿಟಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸಿದೆ. ಐದು ವರ್ಷಗಳ ಹಿಂದೆ ಚಿಕ್ಕ ಬಾಲಕನಿದ್ದಾಗ ಪುಣೆಗೆ ಆಗಮಿಸಿದೆ, ಎರಡು ವರ್ಷಗಳ ಕಾಲ ಪುಣೆ ಅಕಾಡೆಮಿಯಲ್ಲಿದ್ದೆ, ನಂತರ ಪುಣೆ ಸಿಟಿ  ತಂಡವನ್ನು ಸೇರಿಕೊಂಡೆ. ಇಂಡಿಯನ್ ಸೂಪರ್ ಲೀಗ್ ನಲ್ಲಿ ಪುಣೆ ಸಿಟಿ  ತಂಡದ ಪರ ಆಡಿದೆ, ಅಲ್ಲಿಂದ ರಾಷ್ಟ್ರೀಯ ತಂಡವನ್ನು ಸೇರಿಕೊಂಡೆ, ಆದ್ದರಿಂದ ಪುಣೆ ಸಿಟಿ  ತಂಡ ನನ್ನ ಕ್ರೀಡಾ ಬದುಕಿನ ಪ್ರಮುಖ ಭಾಗ.

ಬೆಂಗಳೂರು ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್  ಎಫ್ ಸಿ ನಡುವಿನ ಪ್ರತಿಸ್ಪರ್ಧಿತನ ನಿಮಗೆ ಹೇಗನಿಸುತ್ತದೆ?, ಕೊಚ್ಚಿಯಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಎದುರಿಸುವಾಗ ಹೇಗನಿಸಬಹುದು?

ನನಗೆ ಕೇರಳ ಮನೆ. ಅವರಿಗಾಗಿ ಆಡಲು ನನಗೆ ಕಾಲಾವಕಾಶ ಸಿಗಬಹುದೇ? ಯಾರಾದರೂ ಹಾಗೆ ಮಾಡಬಹುದೇನೋ, ನನಗೆ ಗೊತ್ತಿಲ್ಲ, ಮುಂದಿನ ನಾಲ್ಕು ವರ್ಷಗಳ ಕಾಲ ಆಡಲು ನಾನು ಇಲ್ಲಿ ಇದ್ದೇನೆ. ಆ ಬಗ್ಗೆ ಹೆಚ್ಚಿನ ಗಮನ ಹರಿಸುವೆ. ಇದು ಫುಟ್ಬಾಲ್ ಆಟದ ರೀತಿ, ಪರಿಸ್ಥಿತಿ ಹೀಗೆ ಬದಲಾಗಬಹುದು ಎಂಬುದು ಯಾರಿಗೂ ಗೊತ್ತಿಲ್ಲ, ಏನೂ ಆಗಬಹುದು. ಐಎಸ್ ಎಲ್ ನಲ್ಲಿ ಕೇರಳ ತಂಡವೊಂದು ಇರುವುದು ನನಗೆ ಹೆಮ್ಮೆಯ ಸಂಗತಿ. ಏಕೆಂದರೆ ಅದು ಮನೆಯಂಗಣದಲ್ಲಿ ಆಡುವ ಅವಕಾಶವನ್ನು ನೀಡಿದೆ. ಅವರಿಗೆ ಇರುವ ಬೆಂಬಲವನ್ನು ಗಮನಿಸಿದಾಗ ಅಲ್ಲೊಂದು ತಂಡ ಇರುವುದು ಪ್ರಮುಖ, ದೇಶದಲ್ಲಿ ಫುಟ್ಬಾಲ್  ಬೆಳೆಯುತ್ತದೆ, ಮತ್ತು ಆಟಗಾರರು ಆಡಲು ಹೆಚ್ಚು ಮನೋಬಲವನ್ನು ಹೊಂದುತ್ತಾರೆ. ಕೇರಳ ಬ್ಲಾಸ್ಟರ್ಸ್ ತಂಡದ ಅಭಿಮಾನಿಗಳ ಪಡೆ  ಮಂಜಪ್ಪಾಡ ಹಾಗೂ ಇಲ್ಲಿರುವ ನಮ್ಮ ಅಭಿಮಾನಿಗಳು ವೆಸ್ಟ್ ಬ್ಲಾಕ್ ಬ್ಲೂಸ್ ಫುಟ್ಬಾಲ್ ಬಗ್ಗೆ ಅಪಾರ ಪ್ರೀತಿ ಇರುವ ಎರಡು ಗುಂಪುಗಳು, ಪಂದ್ಯದ ವೇಳೆ ಈ ಅಭಿಮಾನಿಗಳು ತಮ್ಮ ತಂಡಕ್ಕೆ ನೀಡುವ ಪ್ರೋತ್ಸಾಹದಿಂದ ಸಾಕಷ್ಟು ಬದಲಾವಣೆ ಆಗಬಹುದು.

ದೇಶದಲ್ಲಿರುವ ಯುವ ಆಟಗಾರರ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿ ಬಂದಾಗ ಹೇಗನಿಸುತ್ತದೆ

 ರೀತಿಯಲ್ಲಿ ಯುವ ಆಟಗಾರರ ಬಗ್ಗೆ ಜನ ಉತ್ತಮ ರೀತಿಯಲ್ಲಿ ಮಾತನಾಡುತ್ತಿರುವುದರಿಂದ  ಸಾಕಷ್ಟು ಸ್ಫೂರ್ತಿ ಸಿಕ್ಕಂತಾಗುತ್ತದೆಯುವ ಆಟಗಾರರು ಚೆಂಡಿನಲ್ಲಿ ಉತ್ತಮ ರೀತಿಯ ಪ್ರದರ್ಶನ ತೋರುತ್ತಿದ್ದಾರೆತಂಡದಲ್ಲಿ ಸ್ಥಾನ ಪಡೆಯಲು ಉತ್ತಮ ರೀತಿಯ ಹೋರಾಟ ನೀಡುತ್ತಿದ್ದಾರೆಬೆಂಗಳೂರು ಎಫ್ ತಂಡದಲ್ಲಿ ನಾನಿದನ್ನು ಕಾಣುತ್ತಿದ್ದೇನೆನಮ್ಮ ಕಾಯ್ದಿರಿಸಿದ ಆಟಗಾರರುಉತ್ತಮ ಗುಣಮಟ್ಟವನ್ನು ಹೊಂದಿದ್ದಾರೆಭಾರತದಲ್ಲಿ ಅನೇಕ ಯುವ ಆಟಗಾರರು ಸಜ್ಜಾಗುತ್ತಿದ್ದಾರೆಹಿರಿಯ ಆಟಗಾರರು ನಮ್ಮ ಬಗ್ಗೆ ಉತ್ತಮವಾಗಿ ಮಾತನಾಡಿದಾಗಕೋಚ್ ಗಳು ಸಲಹೆ ನೀಡಿದಾಗ ಯಾವ ರೀತಿಯಲ್ಲಿ ಸ್ಫೂರ್ತಿ ಸಿಗಬಹುವುದು ಎಂಬುದನ್ನು ಒಬ್ಬ ಯುವ ಆಟಗಾರನಾಗಿ ಅರ್ಥೈಸಿಕೊಳ್ಳಬಲ್ಲೆ.    

Related Articles