Saturday, April 20, 2024

ಭಾರತದ ಅಬ್ಬರಕ್ಕೆ ಥಾಯ್ಲೆಂಡ್ ಥಂಡಾ

ಅಬು ಧಾಬಿ, ಜನವರಿ 6

ಸುನಿಲ್ ಛೆಟ್ರಿ  (27, 46ನೇ ನಿಮಿಷ ), ಅನಿರುಧ್ ಥಾಪಾ (68ನೇ ನಿಮಿಷ ) ಹಾಗೂ ಜೆಜೆ ಲಾಲ್ಫೆಖ್ಲುವಾ (80ನೇ ನಿಮಿಷ ) ಅವರ ಅದ್ಭುತ ಗೋಲುಗಳ ನೆರವಿನಿಂದ ಭಾರತ ಫುಟ್ಬಾಲ್ ತಂಡ ಅಬು ಧಾಬಿಯಲ್ಲಿ ನಡೆಯುತ್ತಿರುವ ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್ ಷಿಪ್ನಲ್ಲಿ ಥಾಯ್ಲೆಂಡ್ ವಿರುದ್ಧ 4-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಇತಿಹಾಸ ನಿರ್ಮಿಸಿದೆ.

ಏಷ್ಯಾ ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ 4-1 ಅಂತರದ ಬೃಹತ್ ಜಯ ಗಳಿಸಿದೆ. ಥಾಯ್ಲೆಂಡ್ ಪರ ನಾಯಕ ತೀರಾಸಿಲ್ ದಾಂಗ್ಡಾ  33ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.
ಸಮಬಲದ ಹೋರಾಟ
ಮೊದಲ ಗೋಲು ಗಳಿಸಿದ ಭಾರತದ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. 33ನೇ ನಿಮಿಷದಲ್ಲಿ ಥಾಯ್ಲೆಂಡ್ ಸಮಬಲಗೊಳಿಸುವಲ್ಲಿ ಯಶಸ್ವಿಯಾಯಿತು. ಥೀರಥೋನ್ ಬುನ್ಮಥಾನ್ ನೀಡಿದ ಕಾರ್ನರ್ ಪಾಸ್‌ಗೆ ನಾಯಕ ತೀರಾಸಿಲ್ ದಾಂಗ್ಡಾ  ಹೆಡರ್ ಮೂಲಕ ಗೋಲು ಗಳಿಸುವುದರೊಂದಿಗೆ ಪ್ರಥಮಾರ್ಧ  1-1 ರಲ್ಲಿ ಸಮಬಲಗೊಂಡಿತು.
27ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ. ಆಶಿಕ್ ಕುರ್ನಿಯಾನ್ ಅವರು ಗೋಲ್‌ಬಾಕ್ಸ್‌ಗೆ ಗುರಿ ಇಟ್ಟ ಚೆಂಡನ್ನು ಥಾಯ್ಲೆಂಡ್‌ನ ಬನ್‌ಮಾಥಾನ್ ಅವರ ಕೈ ತಗಲಿತು. ಪೆನಾಲ್ಟಿ ವಲಯದಲ್ಲಿ ಆ ಪ್ರಮಾದ ಸಂಭವಿಸಿದ ಕಾರಣ ರೆರಿ ಕ್ಷಣಮಾತ್ರದಲ್ಲೇ ಭಾರತಕ್ಕೆ  ಪೆನಾಲ್ಟಿ ಅವಕಾಶ ನೀಡಿದರು. ಸುನಿಲ್ ಛೆಟ್ರಿ ಯಾವುದೇ ಪ್ರಮಾದವೆಸಗದೆ ಭಾರತಕ್ಕೆ 27ನೇ ನಿಮಿಷದಲ್ಲಿ ಗೋಲು ತಂದುಕೊಟ್ಟರು. ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ನಿರತರಾಗಿರುವ ಫುಟ್ಬಾಲಿಗರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲು ಗಳಿಸಿದ ಆಟಗಾರರೆಂಬ ಹೆಗ್ಗಳಿಕೆಗೆ ಛೆಟ್ರಿ ಪಾತ್ರರಾದರು. ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿಯ ದಾಖಲೆಯನ್ನು ಮುರಿದರು. ಮೆಸ್ಸಿ ಇದುವರೆಗೂ 65 ಗೋಲುಗಳನ್ನು ಗಳಿಸಿದ್ದರು, ಛೆಟ್ರಿ 66ನೇ ಗೋಲು ಗಳಿಸಿ ಈ ದಾಖಲೆಯನ್ನು ಮುರಿದರು.
‘ಭಾರತ ಹಾಗೂ ಥಾಯ್ಲೆಂಡ್ ತಂಡಗಳು ಇದುವರೆಗೂ 21 ಬಾರಿ ಮುಖಾಮುಖಿಯಾಗಿವೆ. ಭಾರತ ಗೆದ್ದಿರುವುದು ಕೇವಲ 4 ಬಾರಿ ಮಾತ್ರ. 2010ರಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದವು.
2018ರ ಎಎಫ್ಸಿ ಕಪ್ ಫೈನಲ್ ತಲಪುವಲ್ಲಿ ವಿಲವಾಗಿರುವ ಥಾಯ್ಲೆಂಡ್ ತಂಡಕ್ಕೆ ಈಗ ಪ್ರಮುಖ ಆಟಗಾರರು ಆಗಮಿಸಿದ್ದಾರೆ. ಲೆಫ್ಟ್  ಬ್ಯಾಕ್ ಬುನ್‌ಮಾಥಾನ್, ಸಾಂಗ್‌ಕ್ರೈಸಿನ್, ನಾಯಕ ಹಾಗೂ ಸ್ಟ್ರೈಕರ್ ದಾಂಗ್ಡಾ ಜಪಾನ್ ಕ್ಲಬ್ ಪರ ಆಡಿ ಅಪಾರ ಅನುಭವ ಹೊಂದಿದ್ದಾರೆ. ಜೈಡೆಡ್ ಅವರನ್ನು ಲೆಫ್ಟ್  ವಿಂಗ್‌ನಲ್ಲಿ ಆಡಿಸಿ ಡೆಕ್ಮಿಕರ್ ಅವರನ್ನು ಸೆಂಟ್ರಲ್‌ವಿಭಾಗದಲ್ಲಿ ಆಡಿಸುತ್ತಿರುವುದು ಥಾಯ್ಲೆಂಡ್ ಕೋಚ್ ಮಿಲೊವಾನ್ ರಾಜೆವಾಕ್ ಅವರ ಅಚ್ಚರಿಯ ಬದಲಾವಣೆಯಾಗಿತ್ತು. ಅಧಿಸಾಕ್ ಕ್ರೈಸಾರ್ನ್ ಭಾರತದ ಪಾಲಿಗೆ ಅಪಾಯಕಾರಿ ಆಟಗಾರರಾಗಿ ಅಂಗಣಕ್ಕಿಳಿದರು.
ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಜೆಜೆ ಲಾಲ್‌ಪೆಖ್ಲುವಾ ನಿರೀಕ್ಷೆಯಂತೆ ತಂಡದಿಂದ ಹೊರಗುಳಿದರು. ಆಶಿಖ್ ಕುರುನಿಯಾನ್ ಹಾಗೂ ಸುನಿಲ್ ಛೆಟ್ರಿ ಫಾರ್ವರ್ಡ್ ವಿಭಾಗವನ್ನು ಮುನ್ನಡೆಸಲು ಸಜ್ಜಾದರು.  ಪ್ರಣೋಯ್ ಹಾಲ್ದರ್ ಹಾಗೂ ಅನಾಸ್ ಎಡಥೋಡಿಕಾ ಕೂಡ ತಂಡದಲ್ಲಿ ಆಡುವ ಹನ್ನೊಂದು ಮಂದಿಯಲ್ಲಿ ಅವಕಾಶ ಪಡೆದರು. ಗುರ್‌ಪ್ರೀತ್ ಸಿಂಗ್ ಸಂಧೂ  ಅವರಿಗೆ ನಾಯಕನ ಪಟ್ಟ ನೀಡಲಾಯಿತು.
ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ ಇತಿಹಾಸದಲ್ಲೇ ಭಾರತ ನಾಲ್ಕನೇ ಬಾರಿಗೆ ಅರ್ಹತೆ ಪಡೆಯಿತು. ಕಳೆದ ಬಾರಿ ಬ್ಲೂ ಟೈಗರ್ಸ್ ಕಾಂಟಿನೆಂಟಲ್ ಹಂತದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಹಾಗೂ ಬೆಹರಿನ್ ವಿರುದ್ಧ ನಡೆದ ಮೂರು ಪಂದ್ಯಗಳಲ್ಲೂ ಸೋಲನುಭವಿಸಿತ್ತು.

Related Articles