ಚೆನ್ನೈ, ಫೆಬ್ರವರಿ 10
ಜೆಜೆ ಲಾಲ್‌ಪೆಲ್ಖುವಾ (32ನೇ ನಿಮಿಷ) ಹಾಗೂ ಗ್ರೆಗೋರಿ ನೆಲ್ಸ್ (43ನೇ ನಿಮಿಷ) ಅವರು ಪ್ರಥಮಾರ್ಧದಲ್ಲಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಬೆಂಗಳೂರು ಎಫ್ ಸಿ ತಂಡವನ್ನು 2-1 ಅಂತರದಲ್ಲಿ ಮಣಿಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಗೌರವ ಕಾಯ್ದುಕೊಂಡಿತು. ಬೆಂಗಳೂರು ಪರ ಸುನಿಲ್ ಛೆಟ್ರಿ 57ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಸೋಲು ಬೆಂಗಳೂರಿನ ಅಗ್ರ ಸ್ಥಾನಕ್ಕೆ ಯಾವುದೇ ಅಡ್ಡಿ ಮಾಡಲಿಲ್ಲ. ಚೆನ್ನೈಯಿನ್ ತಂಡದ ಕೊನೆಯ ಸ್ಥಾನದ ಮೇಲೂ ಪರಿಣಾಮ ಬೀರಲಿಲ್ಲ.
ಮರಿನಾ ಅರೆನಾದಲ್ಲಿ ಚೆನ್ನೈ ಮಿಂಚು
ಜೆಜೆ ಲಾಲ್‌ಪೆಲ್ಖುವಾ (32ನೇ ನಿಮಿಷ) ಹಾಗೂ ಗ್ರೆಗೋರಿ ನೆಲ್ಸ್ (43ನೇ ನಿಮಿಷ) ಅವರ ಎರಡು ಗೋಲುಗಳ ನೆರವಿನಿಂದ ಚೆನ್ನೈ ತಂಡ ಪ್ರಥಮಾರ್ಧದಲ್ಲಿ 2-0 ಗೋಲುಗಳ ಅಂತರದಲ್ಲಿ ಮುನ್ನಡೆಯಿತು. ಬೆಂಗಳೂರಿನ ಡಿಫೆನ್ಸ್ ವಿಭಾಗ ಈ ಬಾರಿ ವಿಲವಾಗಿರುವುದು ಸ್ಪಷ್ಟವಾಗಿತ್ತು. ಪ್ರಥಮಾರ್ಧದಲ್ಲಿ ಚೆನ್ನೈ ಬಲಿಷ್ಠವೆನಿಸಿರುವುದು ಕೇವಲ ಗೋಲು ಗಳಿಸಿದ ಮಾತ್ರಕ್ಕೆ ಅಲ್ಲ, ಆಡಿದ ರೀತಿ ಹಾಗಿತ್ತು. ಆರಂ‘ದಿಂದಲೂ ಚೆನ್ನೈ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತ್ತು. ಅಲ್ಲದೆ ಪಾಸ್‌ಗಳಲ್ಲಿ ನಿಖರತೆ ಇದ್ದಿತ್ತು. 32ನೇ ನಿಮಿಷದಲ್ಲಿ ನಿಶು ಕುಮಾರ್ ಚೆಂಡನ್ನು ನಿಯಂತ್ರಿಸುವಲ್ಲಿ ವಿಲರಾದ ಕಾರಣ ಅದು ಜೆಜೆ ಅವರ ಮಿಂಚಿನ ವೇಗಕ್ಕೆ ಸಿಲುಕಿತು. ನೇರವಾಗಿ ಗೋಲ್ ಬಾಕ್ಸ್‌ಗೆ ಗುರಿ ಇಟ್ಟ ಜೆಜೆ ಪ್ರಸಕ್ತ ಐಎಸ್‌ಎಲ್‌ನಲ್ಲಿ ಮೊದಲ ಗೋಲು ಗಳಿಸಿದರು. 43ನೇ ನಿಮಿಷದಲ್ಲಿ ಚೆನ್ನೈಗೆ ಎರಡನೇ ಗೋಲಿನ ಯಶಸ್ಸು. ಈ ಬಾರಿ ಗ್ರೆಗೋರಿ ನೆಲ್ಸನ್ ಅವರ ಹೆಡರ್ ಮೂಲಕ ದಾಖಲಾಯಿತು. ಲಾಲ್‌ದಿನ್‌ಲಿಯಾನ ರೆನ್‌ಥ್ಲೆ ಅವರ ಕಾರ್ನರ್ ಕ್ರಾಸ್‌ಗೆ ತಕ್ಕ ಬೆಲೆ ನೀಡಿದ ನೆಲ್ಸನ್ ಬೆಂಗಳೂರಿನ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಅವರನ್ನು ವಂಚಿಸುವಲ್ಲಿ ಯಶಸ್ವಿಯಾದರು. ಚೆನ್ನೈಗೆ 2-0 ಮುನ್ನಡೆ.
ಇಂಡಿಯನ್ ಸೂಪರ್ ಲೀಗ್‌ನ 73ನೇ ಪಂದ್ಯ ಒಂದು ತಂಡ ಅಂಕ ಪಟ್ಟಿಯ ಅಗ್ರ ಸ್ಥಾನದಲ್ಲಿದ್ದರೆ, ಇನ್ನೊಂದು ತಂಡ ಅಂಕ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಅಗ್ರ ಸ್ಥಾನದಲ್ಲಿರುವ ಬೆಂಗಳೂರು ಎಫ್ ಸಿ ಹಾಗೂ ಕೊನೆಯ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಚೆನ್ನೈಯಿನ್ ತಂಡಗಳ ನಡುವೆ ಹೋರಾಟ ನಡೆಯಿತು. ಇದುವರೆಗೂ ಕೇವಲ ಒಂದು ಪಂದ್ಯ ಗೆದ್ದಿರುವ ಚೆನ್ನೈಯಿನ್ ಈಗಾಗಲೇ ಪ್ಲೇ ಆಫ್ ನಿಂದ ಹೊರ ಬಿದ್ದಿದೆ, ಬೆಂಗಳೂರು ವಿರುದ್ಧ ಗೌರವ ಕಾಯ್ದುಕೊಳ್ಳುವುದಕ್ಕಾಗಿ ಅಂಗಣಕ್ಕಿಳಿಯಿತು. ಇದುವರೆಗೂ ಕೇವಲ 14 ಗೋಲುಗಳನ್ನು ಗಳಿಸಿರುವ ಚೆನ್ನೈ ಎದುರಾಳಿ ತಂಡಕ್ಕೆ ನೀಡಿದ್ದು ಬರೋಬ್ಬರಿ 27 ಗೋಲುಗಳು. ಇದು ತಂಡವೊಂದು ನೀಡಿರುವ ಅತಿ ಹೆಚ್ಚು ಗೋಲಾಗಿದೆ. ಇಲ್ಲಿ ಗೆದ್ದು ಖುಷಿಯೊಂದಿಗೆ ನಿರ್ಗಮಿಸಬೇಕೆಂಬುದು ಚೆನ್ನೈ ಪಡೆಯ ಗುರಿಯಾಗಿದೆ. ಬೆಂಗಳೂರು ತಂಡ ಇಲ್ಲಿ ಜಯ ಗಳಿಸಿದರೆ ಸುಲಭವಾಗಿ ಅಗ್ರ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಲಿದೆ. ಬೆಂಗಳೂರು ತಂಡ ಎದುರಾಳಿ ತಂಡಕ್ಕೆ ನೀಡಿದ್ದು ಕೇವಲ 12 ಗೋಲುಗಳು. ಈ ಬಾರಿ ಐಎಸ್‌ಎಲ್‌ನಲ್ಲಿ ತಂಡವೊಂದು ನೀಡಿದ ಅತಿ ಕಡಿಮೆ ಗೋಲು ಇದಾಗಿದೆ. ಚಿಂತೆಯ ವಿಷಯವೆಂದರೆ ಸುನಿಲ್ ಛೆಟ್ರಿ ಗೋಲು ಗಳಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಅವರು ಇದುವರೆಗೂ ಐದು ಗೋಲುಗಳನ್ನು ಗಳಿಸಿರುತ್ತಾರೆ. ಕಳೆದ ಏಳು ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ ಒಂದು ಗೋಲು. ಬೆಂಗಳೂರು ಅಗ್ರ ಸ್ಥಾನದಲ್ಲಿರಬಹುದು, ಚೆನ್ನೈ ಕೊನೆಯ ಸ್ಥಾನದಲ್ಲಿರಬಹುದು, ಆದರೆ ಮನೆಯಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಜಯ ಗಳಿಸಿ ಪ್ರವಾಸಿ ತಂಡಕ್ಕೆ ಆಘಾತ ನೀಡುವ ಗುರಿ ಚೆನ್ನೈ ತಂಡದ್ದು.