ರೋಮ್: ಇಟಲಿಯ ಪಾಲ್ಮನೊವಾದಲ್ಲಿ ನಡೆದ ಎಂಯು-15 ಫುಟ್ಬಾಲ್ ಟೂರ್ನಿಯಲ್ಲಿ 15 ವಯೋಮಿತಿ ಭಾರತ ಬಾಲಕರ ತಂಡ ಹಾಗೂ ಸ್ಲೊವೆನಿಯಾ ತಂಡಗಳ ನಡುವೆ ನಡೆದ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಸಮಾಪ್ತಿಯಾಯಿತು.
ಆರಂಭದಲ್ಲೇ ಉತ್ತಮ ಪ್ರದರ್ಶನ ತೋರಿದ ಭಾರತ ಬಹುಬೇಗ ಮುನ್ನಡೆ ಸಾಧಿಸಿತು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಸಿದ್ಧಾರ್ಥ್ ಭಾರತಕ್ಕೆ ಗೋಲಿನ ಖಾತೆ ತೆರೆದರು. ನಂತರ, ಎನೆಜ್ ಮಾರ್ಸೆಟಿಕ್ ಅವರ ಮೊದಲ ಗೋಲಿನ ಸಹಾಯದಿಂದ ಸ್ಲೊವೆನಿಯಾ ಸಮಬಲ ಸಾಧಿಸುತ್ತದೆ. ಮೊದಲಾರ್ಧದ ಮುಕ್ತಾಯಕ್ಕೆ ಉಭಯ ತಂಡಗಳು 1-1 ಸಮಬಲ ತೃಪ್ತಿಯಾದವು.
ಎರಡನೇ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸ್ಲೊವೆನಿಯಾ ಗೋಲು ಗಳಿಸಿ ಮುನ್ನಡೆ ಸಾಧಿಸಿತ್ತದೆ. ಆದರೆ, ಇದಕ್ಕೆ ಪ್ರತಿಯಾಗಿ ಸಿದ್ಧಾರ್ಥ್ ಗೋಲು ಸಿಡಿಸಿ ಭಾರತಕ್ಕೆ ಸಮಬಲ ತಂದುಕೊಟ್ಟರು.
ಸ್ಲೊವೆನಿಯಾ ತಂಡದ ಎರಿಕ್ ಹಾಗೂ ಹಿಮಾಂಶು ಅವರು ಗೋಲು ಗಳಿಸುವ ಹಲವು ಅವಕಾಶಗಳನ್ನು ಭಾರತದ ರಕ್ಷಣಾ ಕೋಟೆ ತಡೆಯುವಲ್ಲಿ ಸಫಲವಾಯಿತು. ಇದರೊಂದಿಗೆ ಅಂತಿಮವಾಗಿ ಭಾರತ ಹಾಗೂ ಸ್ಲೊವೆನಿಯಾ ತಂಡಗಳು 2-2 ಅಂತರದಲ್ಲಿ ಡ್ರಾಗೆ ತೃಪ್ತಿಪಟ್ಟವು.
ಕಳೆದ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ ಭಾರತ 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಸಿದ್ಧಾರ್ಥ್ ಮಾತ್ರ ಏಕೈಕ ಗೋಲು ಗಳಿಸಿದ್ದರು.