Thursday, November 21, 2024

ಪ್ಲೇ ಆಫ್ ಗೆ ಟೇಕ್ ಆಫ್ ಆದ ಮುಂಬೈ

ಸ್ಪೋರ್ಟ್ಸ್ ಮೇಲ್ ವರದಿ 

ಮೊಡೌ ಸೌಗೌ (26, 39ಹಾಗೂ  60 ನೇ ಮಿಮಿಷ ) ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಎಟಿಕೆ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿದ ಮುಂಬೈ ಸಿಟಿ ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ಹಂತಕ್ಕೆ ಮೂರನೇ ತಂಡವಾಗಿ ಹೆಜ್ಜೆ ಇಟ್ಟಿತು.

ಉಳಿದಿರುವ ಒಂದು ಸ್ಥಾನಕ್ಕಾಗಿ ಈಗ ಜಮ್ಶೆಡ್ಪುರ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ನಡುವೆ ಸ್ಪರ್ಧೆ ನಡೆಯಲಿದೆ. ಎಟಿಕೆ ಈ ಸೋಲಿನೊಂದಿಗೆ ಸೆಮಿಫೈನಲ್ ತಲಪುವ ಅವಕಾಶದಿಂದ ದೂರವಾಯಿತು. 67ನೇ ನಿಮಿಷದಲ್ಲಿ ಆಂಡ್ರೆ ಬಿಕೆ ಗಳಿಸಿದ ಗೋಲಿನಿಂದ ಸೋಲಿನ ಅಂತರ ಕಡಿಮೆಯಾಯಿತೇ ವಿನಃ ಮುಂದಿನ ನಡೆಗೆ ಅನುಕೂಲವಾಗಲಿಲ್ಲ. ಮ್ ಮುಂಬೈ 17 ಪಂದ್ಯಗಳಿಂದ  30 ಅಂಕ ಗಳಿಸಿತು.
ಪ್ಲೇ ಆಫ್ಗೆ ವೇದಿಕೆ ಸಜ್ಜುಗೊಳಿಸಿದ ಮುಂಬೈ
ಮೊಡೌ ಸೌಗೌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಮುಂಬೈ ಸಿಟಿ ತಂಡ ಇಂಡಿಯನ್ ಸೂಪರ್ ಲೀಗ್‌ನ ಪ್ಲೆ‘ ಆಫ್  ತಲಪುವ ಮೂರನೇ ತಂಡವಾಗಿ ಹೊರ ಹೊಮ್ಮಲು ವೇದಿಕೆ ಸಜ್ಜು ಮಾಡಿಕೊಂಡಿತು.  26ನೇ ನಿಮಿಷದಲ್ಲಿ ಸೌಗೌ ಗಳಿಸಿದ ಗೋಲು ಪ್ರವಾಸಿ ತಂಡಕ್ಕೆ ಮೇಲುಗೈ ಸಾಧಿಸುವಂತೆ ಮಾಡಿತು. ಪ್ರಾಂಜಲ್ ಭೂಮ್ಜಿ ನೀಡಿದ ಪಾಸ್ ಮೂಲಕ ಸೌಗೌ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಆರಂಭದಲ್ಲೇ ಮುನ್ನಡೆ ಕಂಡುಕೊಂಡ ಮುಂಬೈ ಅಲ್ಲಿಗೆ ವಿರಮಿಸಲಿಲ್ಲ. ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಪರಿಮಾಮ ಸೌಗೌ  ಅವರಿಗೆ 39ನೇ ನಿಮಿದಲ್ಲಿ ಮತ್ತೊಂದು ಯಶಸ್ಸು.  ಅರ್ನಾಲ್ಡ್ ಇಸೋಕೊ ನೀಡಿದ ಪಾಸ್ ಮೂಲಕ ಗಳಿಸಿದ ಗೋಲು ಮುಂಬೈ ತಂಡಕ್ಕೆ 2-0 ಮುನ್ನಡೆ ಕಲ್ಪಿಸಿತು. ಎಟಿಕೆ ತಂಡ ಉತ್ತ ಮ ರೀತಿಯಲ್ಲಿ ಹೋರಾಟ ನೀಡಿದರೂ  ಗೋಲು ಗಳಿಸುವಲ್ಲಿ ವಿಫಲವಾಯಿತು. ಪ್ರಥಮಾರ್ಧದಲ್ಲಿ ಮುಂಬೈ ಮೇಲುಗೈ ಸಾಧಿಸಿ ಪ್ಲೇ ಆಆಫ್ ಗೆ  ಅಗತ್ಯವಿರುವ ವೇದಿಕೆ ಸಜ್ಜು ಮಾಡಿಕೊಂಡಿತು.
ಕೇವಲ ಒಂದು ಜಯದ ಅಗತ್ಯದೊಂದಿಗೆ ಕೋಲ್ಕೊತಾಕ್ಕೆ ಆಗಮಿಸಿದ ಮುಂಬೈ ಸಿಟಿ ತಂಡಕ್ಕೆ ಎದುರಾಳಿ ಎಟಿಕೆ ಸುಲಭ ತುತ್ತಾಗುವ ಲಕ್ಷಣ ಕಾಣಲಿಲ್ಲ. ಎಟಿಕೆಯ ಪ್ಲೇ ಆಫ್  ಕನಸು ಸದ್ಯ ಕನಸಾಗಿಯೇ ಉಳಿಯುಲ ಹಂತ ತಲುಪಿದೆ.  ಕೋಲ್ಕೊತಾ ಪಡೆಗೂ ಇಲ್ಲಿ ಜಯದ ಅನಿವಾರ್ಯವಿದೆ. ಎಟಿಕೆ ತಂಡಕ್ಕೂ ಇಲ್ಲಿ ಮೂರು ಅಂಕ ಗಳಿಸಿ, ಜತೆಯಲ್ಲಿ ಇತರ ತಂಡಗಳ ಲಿತಾಂಶವನ್ನು ಆ‘ರಿಸಬೇಕಿದೆ. ಉತ್ತಮ ರೀತಿಯಲ್ಲಿ ಆಡುತ್ತಿದ್ದ ಮುಂಬೈ ತಂಡ ಇತ್ತೀಚಿನ ಪಂದ್ಯಗಳಲ್ಲಿ ಸೋಲನುಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಮೂರು ಪಂದ್ಯಗಳಲ್ಲಿ ಸೋಲನುಭವಿಸಿ ಮುಂಬೈ ತಂಡ ಕೋಲ್ಕೊತಾಕ್ಕೆ ಆಗಮಿಸಿತು. ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ಎಟಿಕೆ ತಂಡ ಈ ಋತುವಿನಲ್ಲಿ ಮಿಶ್ರ ಫಲ ಕಂಡಿದೆ. ಸ್ಥಿರ ಪ್ರದರ್ಶನ ತೋರುವಲ್ಲಿ ವಿಲವಾಗಿದೆ.  ಗೋವಾ ವಿರುದ್ಧ ಸೋಲಿನ ಆಘಾತ ಅನುಭವಿಸಿದ ನಂತರ ಎಟಿಕೆ ಮನೆಯಂಗಣದ ಪಂದ್ಯಕ್ಕೆ ಸಜ್ಜಾಯಿತು. ಇತ್ತಂಡಗಳು ಮುಖಾಮುಖಿಯಲ್ಲಿ ತಲಾ ನಾಲ್ಕು ಪಂದ್ಯಗಳನು ಗೆದ್ದಿವೆ. ಆದ್ದರಿಂದ ಜಯಕ್ಕೆ ಕೊರಳೊಡ್ಡುವ ತಂಡ ಯಾವುದೆಂದು ಹೇಳುವುದು ಕಷ್ಟ.

Related Articles