ಸ್ಪೋರ್ಟ್ಸ್ ಮೇಲ್ ವರದಿ, ಗೋವಾ:
ರಾರ್ ಕೃಷ್ಣ (15ನೇ ನಿಮಿಷ), ಡೇವಿಡ್ ವಿಲಿಯಮ್ಸ್ (72ನೇ ನಿಮಿಷ) ಮತ್ತು ಜೇವಿಯರ್ ಹೆರ್ನಾಂಡೀಸ್ (89ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಎಸ್ ಸಿ ಈಸ್ಟ್ ಬೆಂಗಾಲ್ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿದ ಎಟಿಕೆ ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ಸ್ಥಾವನ್ನು ಭದ್ರಪಡಿಸಕೊಂಡಿತಲ್ಲಿದೆ 100ನೇ ಕೋಲ್ಕೊತಾ ಡರ್ಬಿಯನ್ನು ಸ್ಮರಣಿಯವಾಗಿಸಿತು.
ಸಮಬಲದ ಹೋರಾಟ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅತ್ಯಂತ ಕುತೂಹಲದ ಪಂದ್ಯವೆನಿಸಿರುವ ಕೋಲ್ಕೊತಾ ಡರ್ಬಿಯ ಪ್ರಥಮಾರ್ಧದ ಪಂದ್ಯ 1-1 ಗೋಲುಗಳಿದ ಸಮಬಲಗೊಂಡಿದೆ. ಮೋಹನ್ ಬಾಗನ್ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆರಂಭದಿಂದಲೂ ಪಂದ್ಯದದ ಮೇಲೆ ಹಿಡಿತ ಸಾಧಿಸಿತ್ತು. 15ನೇ ನಿಮಿಷದಲ್ಲಿ ರಾಯ್ ಕೃಷ್ಣ ಮಿಂಚಿನ ವೇಗದಲ್ಲಿ ಓಪನ್ ಗೋಲ್ ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಈಸ್ಟ್ ಬೆಂಗಾಲ್ ಉತ್ತಮ ರೀತಿಯಲ್ಲೇ ತಿರುಗೇಟು ನೀಡಿತ್ತು, ಆದರೆ ಅವಕಾಶಗಳನ್ನು ಗೋಲಾಗಿಸುವಲ್ಲಿ ವಿಫಲವಾಗಿತ್ತು. ಆದರೆ 41ನೇ ನಿಮಿಷದಲ್ಲಿ ಜೋಸ್ ಲೂಯಿಸ್ ತಿರಿ ನೀಡಿದ ಉಡುಗೊರೆ ಗೋಲು ಈಸ್ಟ್ ಬೆಂಗಾಲ್ ತಂಡಕ್ಕೆ ಸಮಬಲಗೊಳಿಸಲು ಅವಕಾಶ ನೀಡಿತು. ರಾಯ್ ಕೃಷ್ಣ ಗೋಲ್ಡನ್ ಬೂಟ್ ಗೌರವಕ್ಕೆ ಹತ್ತಿರವಾಗುತ್ತಿದ್ದು ಒಟ್ಟು ಗೋಲುಗಳ ಸಂಖ್ಯೆಯನ್ನು 14ಕ್ಕೆ ಕೊಂಡೊಯ್ದರು.
ಕೋಲ್ಕೊತಾ ಡರ್ಬಿಯ ಸಂಭ್ರಮ: ಈಸ್ಟ್ ಬೆಂಗಾಲ್ ಹಾಗೂ ಮೋಹನ್ ಬಾಗನ್ ನಡುವಿನ ಫುಟ್ಬಾಲ್ ಜಿದ್ದಾಜಿದ್ದಿಗೆ ನೂರು ವರುಷಗಳ ಸಂಭ್ರಮ. 1921ರಲ್ಲಿ ಕೂಚ್ ಬೆಹಾರ್ ಫುಟ್ಬಾಲ್ ಚಾಂಪಿಯನ್ಷಿಪ್ ನಲ್ಲಿ ಹುಟ್ಟಿಕೊಂಡ ಈ ವೈರತ್ವ ಈ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಸ್ ಸಿ ಈಸ್ಟ್ ಬೆಂಗಾಲ್ ಹಾಗೂ ಎಟಿಕೆ ಮೋಹನ್ ಬಾಗನ್ ಮೂಲಕ ಮತ್ತೆ ಗತ ವರುಷಗಳನ್ನು ನೆನಪಿಸುವಂತೆ ಮಾಡಿದೆ. ಇಂದಿನ ಪಂದ್ಯ ಹೀರೋ ಇಂಡಿಯನ್ ಸೂಪರ್ ಲೀಗ್ ಗಿಂತಲೂ ಇತ್ತಂಡಗಳಿಗೆ ಪ್ರತಿಷ್ಠೆಯ ಪಂದ್ಯವೆನಿಸಿದೆ. ಇಲ್ಲಿ ಜಯವೇ ಪ್ರಮುಖವಾದುದು. ಮೋಹನ್ ಬಾಗನ್ ಈಗ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು ಈಗಾಗಲೇ ಪ್ಲೇ ಆಫ್ ಗೆ ಅರ್ಹತೆ ಪಡೆದಿದೆ. ಈಸ್ಟ್ ಬೆಂಗಾಲ್ ಪ್ಲೇ ಆಫ್ ತಲಪುವಲ್ಲಿ ವಿಫಲವಾಗಿದ್ದು ಗೌರವ ಕಾಯ್ದುಕೊಳ್ಳುವ ಉದ್ದೇಶದಿಂದ ಹೋರಾಟ ಮುಂದುವರಿಸಿದೆ. ಹಿಂದಿನ ಪಂದ್ಯದಲ್ಲಿ ಮೋಹನ್ ಬಾಗನ್ ಏಕೈಕ ಗೋಲಿನಿಂದ ಜಯ ಗಳಿಸಿತ್ತು.
ಇಲ್ಲಿ ಇತ್ತಂಡಗಳ ನಡುವಿನ ಅಂತರವೆಂದರೆ ಮೋಹನ್ ಬಾಗನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಈಸ್ಟ್ ಬೆಂಗಾಲ್ ಕೆಳ ಹಂತದಲ್ಲಿದೆ. ಮೋಹನ್ ಬಾಗನ್ ಲೀಗ್ ಹಂತದಲ್ಲಿ ಅಗ್ರ ಸ್ಥಾನ ಪಡೆದವರಿಗೆ ಸಿಗುವ ಲೀಗ್ ವಿನ್ನರ್ಸ್ ಶೀಲ್ಡ್ ಗೆಲ್ಲುವ ಫೇವರಿಟ್ ಎನಿಸಿದೆ. ಒಂದು ವೇಳೆ ಇಂದು ಅಸಾಧ್ಯವಾದರೆ ನಾಳೆ ಮುಂಬೈ ಸಿಟಿ ಎಫ್ ಸಿ ಆ ಸ್ಥಾವನ್ನು ಮತ್ತೊಮ್ಮೆ ಏರಲಿದೆ.
ಋತುವಿನುದ್ದಕ್ಕೂ ಮರಿನರ್ಸ್ ಪಡೆ ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ. ಇತರ ತಂಡಗಳಿಗೆ ಹೋಲಿಸಿದರೆ ಕಡಿಮೆ ಗೋಲುಗಳನ್ನು ನೀಡಿ ಹೆಚ್ಚು ಗೋಲುಗಳನ್ನು ಗಳಿಸಿದೆ. 17ನೇ ಪಂದ್ಯ ಮುಗಿದಿರುವ ಈ ಹಂತದಲ್ಲಿ ಮೋಹನ್ ಬಾಗನ್ 36 ಗೋಲುಗಳನ್ನು ಗಳಿಸಿದ್ದರೆ, ಈಸ್ಟ್ ಬೆಂಗಾಲ್ 17 ಗೋಲುಗಳನ್ನು ಗಳಿಸಿದೆ.