Thursday, April 18, 2024

ಸರಳ ಆಟವಾಡಿ, ವಿರಳ ಗೋಲುಗಳಿಸಿದ ಕೇರಳ ನಿರ್ಗಮನ

ಸ್ಪೋರ್ಟ್ಸ್ ಮೇಲ್ ವರದಿ

ಕೇರಳ ಬ್ಲಾಸ್ಟರ್ಸ್ ತಂಡ ಕೊನೆಯ ಪಂದ್ಯದಲ್ಲಿ ಗೆದ್ದು ಮನೆಯಂಗಣದ ಪ್ರೇಕ್ಷಕರಿಗೆ ಉಡುಗೊರೆ ನೀಡುತ್ತೇವೆ ಎಂಬ ಕೇರಳ ತಂಡದ ಮಾತು ಕೊನೆಗೂ ಈಡೇರಲಿಲ್ಲ. ನಾರ್ತ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧ ನಡೆದ ಕೊನೆಯ ಲೀಗ್ ಪಂದ್ಯವೂ ಗೋಲಿಲ್ಲದೆ 0-0 ಯಲ್ಲಿ ನೀರಸ ಡ್ರಾ ಗೊಂಡಿತು. ಇದರೊಂದಿಗೆ ಕೇರಳ ಬ್ಲಾಸ್ಟರ್ಸ್ ಕಳಪೆ ಪ್ರದರ್ಶನದೊಂದಿಗೆ ಈ ಋತುವನ್ನು ಕೊನೆಗೊಳಿಸಿತು.

ಗೋಲಿಲ್ಲದ ಪ್ರಥಮಾರ್ಧ 
ಚೆಂಡನ್ನು ಹೆಚ್ಚು ಕಾಲ ನಿಯಂತ್ರಿಸಲಾಗಿತ್ತು, ಹೆಚ್ಚು ಮೇಲುಗೈ ಸಾಧಿಸಿದ್ದೆವು ಎಂದು ಹಿಂದಿನಂತೆ ಮತ್ತೆ ಹೇಳಬೇಕಾಯಿತು. ಏಕೆಂದರೆ ಕೇರಳ ಬ್ಲಾಸ್ಟರ್ಸ್ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳ ನಡುವಿನ  ಇಂಡಿಯನ್ ಸೂಪರ್ ಲೀಗ್ ನ ಕೊನೆಯ ಪಂದ್ಯದ ಪ್ರಥಮಾರ್ಧ ಗೋಲಿಲ್ಲದೆ  ಕೊನೆಗೊಂಡಿತು. ಕೇರಳ ತಂಡಕ್ಕೆ ಗೋಲು ಗಳಿಸಲು ಉತ್ತಮ ಅವಕಾಶವಿದ್ದಿತ್ತು, ಆದರೆ ಆತಿಥೇಯ ತಂಡ ಹಿಂದಿನಂತೆ ತನ್ನ ಆಟವಾಡಿ ಅವಕಾಶ ಕೈ ಚೆಲ್ಲಿತು.ಆದರೆ ಈಬಾರಿ ಕೇರಳ ತಂಡದ ಆಟದಲ್ಲಿ ಮಾತ್ರ ಆತ್ಮವಿಶ್ವಾಸವಿದ್ದಿತ್ತು. ಮಾಟೆಜ್ ಪಾಪ್ಲಟ್ನಿಕ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರು. ಪವನ್ ಕುಮಾರ್ ಅವರು ಉತ್ತಮ ಗೋಲ್ ಕೀಪಿಂಗ್ ಮಾಡಿದ್ದು ಪ್ರಥಮಾರ್ಧದ ಮತ್ತೊಂದು ಹೆಲೈಲೈಟ್
ಇಂಡಿಯನ್ ಸೂಪರ್ ಲೀಗ್‌ನ 88ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾದವು. ಕೇರಳದ ಪಾಲಿಗೆ ಇದು ಕೊನೆಯ ಪಂದ್ಯವಾದ ಕಾರಣ ಮನೆಯಂಗಣದ ಪ್ರೇಕ್ಷಕರಿಗೆ ಜಯದ ಉಡುಗೊರೆ ನೀಡಿ ವಿರಮಿಸುವ ಗುರಿ ತಂಡದ ಆಟಗಾರರದ್ದಾಗಿದೆ. ಕೇರಳ ಉತ್ತಮವಾಗಿ ಆಡಿದೆ ಎಂಬುದಕ್ಕೆ ಈ ತಂಡದ ಡ್ರಾ ಪಂದ್ಯಗಳೇ ಸಾಕ್ಷಿ ಹೊರತು ಗೆದ್ದ ಪಂದ್ಯಗಳಲ್ಲ. ಎಂಟು ಪಂದ್ಯಗಳಲ್ಲಿ ಡ್ರಾ ಕಂಡಿರುವ ಕೇರಳ ಈ ಋತುವಿನಲ್ಲಿ ಈ ದಾಖಲೆ ಬರೆದ ತಂಡಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಡಿಫೆನ್ಸ್‌ನಲ್ಲೂ ಹಾಗೂ ಫಾರ್ವರ್ಡ್‌ನಲ್ಲೂ ಯಶಸ್ಸು ಕಾಣುವಲ್ಲಿ ವಿಫಲವಾಗಿರುವ ತಂಡ ಈ ಋತುವಿನ ನಂತರ ಮತ್ತೆ ಮತ್ತೆ ಯೋಚಿಸಬೇಕಾದ ಅಗತ್ಯವಿದೆ. 17 ಪಂದ್ಯಗಳಲ್ಲಿ ಕೇರಳ ಗಳಿಸಿದ್ದು ಕೇವಲ 18 ಗೋಲುಗಳು. ಆದ್ದರಿಂದ ಕೇರಳ ಈ ಬಾರಿಯ ಲೀಗ್‌ನಿಂದ ಯಾವುದನ್ನು ಸ್ಮರಿಸಿಕೊಳ್ಳದೆ ಮರೆಯಬೇಕಾದ ಸ್ಥಿತಿ ತಲುಪಿತು. ಆತಿಥೇಯ ನಾರ್ತ್ ಈಸ್ಟ್ ತಂಡಕ್ಕೆ ಇಲ್ಲಿ ಜಯದ ಅಗತ್ಯವಿದೆ. ಏಕೆಂದರೆ ಇಲ್ಲಿ ಗೆದ್ದರೆ ಮೂರನೇ ಸ್ಥಾನ ತಲಪುವುದು ಸ್ಪಷ್ಟ. ಒಂದು ಮುಂಬೈ ತಂಡ ನಾಳೆಯ ಪಂದ್ಯದಲ್ಲಿ ಸೋತರೆ ನಾರ್ತ್ ಈಸ್ಟ್ ತಂಡ ಗೋವಾ ವಿರುದ್ಧ ಸೆಮಿಫೈನಲ್ ಆಡಲಿದೆ. ಆಗ ಮುಂಬೈ ಹಾಗೂ ಬೆಂಗಳೂರು ಮುಖಾಮುಖಿಯಾಗಲಿವೆ. ನಾರ್ತ್ ಈಸ್ಟ್ ತಂಡ ಇದೇ ಮೊದಲ  ಬಾರಿಗೆ ಅಂತಿಮ ನಾಲ್ಕರ ಹಂತ ತಲುಪಿದೆ. ಮನೆಯಂಗಣದ ಹೊರಗಡೆ ನಡೆದ ಪಂದ್ಯದಲ್ಲಿ ನಾರ್ತ್ ಈಸ್ಟ್ 16 ಅಂಕಗಳನ್ನು ಗಳಿಸಿರುವುದೇ ತಂಡದ ನೈಜ ಶಕ್ತಿ.  ಅಂತಿಮ ಪಂದ್ಯದಲ್ಲೂ ಜಯ ಗಳಿಸಿ, ಪ್ಲೇ ಆಫ್ಗೆ ‘ಧನಾತ್ಮಕವಾಗಿ ಹೆಜ್ಜೆ ಇಡಬೇಕೆಂಬುದು ತಂಡದ ಗುರಿ. ಆದರೆ ಕಳೆದ ಐದು ಪಂದ್ಯಗಳಲ್ಲಿ ನಾರ್ತ್ ಈಸ್ಟ್‌ನ ಸಾಧನೆ ಉತ್ತಮವಾಗಿಲ್ಲ. ಐದು ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡು. ಅಲ್ಲದೆ ಕೇರಳ ವಿರುದ್ಧ ನಡೆದ ಮುಖಾಮುಖಿಯಲ್ಲಿ ನಾರ್ತ್ ಈಸ್ಟ್ ಉತ್ತಮ ದಾಖಳೆ ಹೊಂದಿಲ್ಲ. ಒಂಬತ್ತು ಪಂದ್ಯಗಳಲ್ಲಿ ಗೆದ್ದಿರುವುದು ಮೂರು ಮಾತ್ರ.

Related Articles