ಜೆಮ್ಷೆಡ್ಪುರ, ಅಕ್ಟೋಬರ್ 22
ದಿಟ್ಟ ಹೋರಾಟ ಎರಡೂ ತಂಡಗಳಲ್ಲಿ ಮನೆ ಮಾಡಿದಾಗ, ಗೆಲ್ಲುವ ಛಲ ಎರಡೂ ತಂಡಗಳಲ್ಲಿ ಬೇರೂರಿದಾಗ ಅಲ್ಲಿ ಜಯ ಕೂಡ ಹಂಚಿಹೋಗುತ್ತದೆ ಎಂಬುದಕ್ಕೆ ಜೆಮ್ಷೆಡ್ಪುರ ಹಾಗೂ ಎಟಿಕೆ ನಡುವಿನ ಪಂದ್ಯ ಸಾಕ್ಷಿಯಾಯಿತು.
ದ್ವಿತೀಯಾರ್ಧದಲ್ಲಿ ಸಮಬಲದ ಹೋರಾಟ ನಡೆದ ಕಾರಣ ಮೊದಲಾರ್ಧದಲ್ಲಿ ಸರ್ಗಿಯೋ ಸಿಡೊಂಚಾ(35ನೇ ನಿಮಿಷ) ಹಾಗೂ ಮಾನ್ವೆಲ್ ಲಾನ್ಜರೋಟ್ (45ನಿಮಿಷ) ಗಳಿಸಿದ ಗೋಲಿನಿಂದ ಪಂದ್ಯ 1-1ರಲ್ಲಿ ಸಮಬಲಗೊಂಡಿತು.
ಸಮಬಲದ ಹೋರಾಟ
ಜೆಮ್ಷೆಡ್ಪುರ ತಂಡ ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಪರಿಣಾಮ 35ನೇ ನಿಮಿಷದಲ್ಲಿ ಗೋಲಿನ ಯಶಸ್ಸು. ಎಟಿಕೆ ತಂಡ ಕೊನೆಯವರೆಗೂ ಆ ಆಕ್ರಮಣದ ಆಟವನ್ನು ಮುಂದುವರಿಸಿತು. ಪರಿಣಾಮ 45ನೇ ನಿಮಿಷದಲ್ಲಿ ಎಟಿಕೆ ತಂಡದಿಂದ ಸಮಬಲದ ಸಾಧನೆ. ಟಾಟಾ ತಂಡದ ಪರ ಸರ್ಗಿಯೋ ಸಿಡೋಂಚಾ ಗೋಲು ಗಳಿಸಿದರೆ, ಎಟಿಕೆ ತಂಡದ ಪರ ಮೆನ್ವೆಲ್ ಲಾನ್ಜರೋಟ್ ಗೋಲು ಗಳಿಸಿ ದ್ವಿತಿಯಾ‘ರ್ಕ್ಕೆ ಕುತೂಹಲದ ವೇದಿಕೆ ಹುಟ್ಟುಹಾಕಿದರು.
ರೋಚಕ ಸಮಬಲ
ಮಾನ್ವೆಲ್ ಲಾನ್ಜರೋಟ್ ಪ್ರಥಮಾರ್ಧದ ಕೊನೆಯ 45 ಗಳಿಸಿದ ಗೋಲು ಜೆಮ್ಷೆಡ್ಪುರ ಆಟಗಾರರು ಮಾತ್ರವಲ್ಲ ಪ್ರೇಕ್ಷಕರನ್ನೂ ನಿಬ್ಬೆರಗಾಗಿಸಿತು. ಪ್ರಥಮಾರ್ಧ ಇನ್ನೇನು ಮುಗಿದೇ ಹೋಯಿತೆನ್ನಾಗವ ದಾಖಲಾದ ಈ ಗೋಲಿನಿಂದ ಎಟಿಕೆ ತಂಡದ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ. ಬಲಭಾಗದಿಂದ ಬಂದ ಕಾರ್ನರ್ ಪಾಸ್‌ಗೆ ಲಾನ್ಜರೋಟ್ ಅದ್ಭುತ ರೀತಿಯಲ್ಲಿ ಸ್ಪಂದಿಸಿ ಗೋಲ್‌ಕೀಪರ್ ಸುಭಾಶಿಶ್ ರಾಯ್ ಅವರನ್ನು ವಂಚಿಸಿ ಗೋಲ್‌ಬಾಕ್ಸ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು.
ಟಾಟಾ ಪಡೆ ಮೇಲುಗೈ
ಟಾಟಾ ಸ್ಟೀಲ್ ಹೇಗೆ ಬಲಿಷ್ಠವೋ ಮನೆಯಂಗಣದಲ್ಲಿ ಜೆಮ್ಷೆಡ್ಪುರ ತಂಡ ಕೂಡ ಅಷ್ಟೇ ಬಲಿಷ್ಠ. 35ನೇ ನಿಮಿಷದಲ್ಲಿ ಜೆಮ್ಷೆಡ್ಪುರ ತಂಡಕ್ಕೆ ಪ್ರಥಮಾ‘ರ್ದ ಎರಡನೇ ಫ್ರೀ ಕಿಕ್. ಎಟಿಕೆ ಅರಿಂದಂ ಭಟ್ಟಾಚಾರ್ಯ ಅವರಿಗೆ ಚೆಂಡನ್ನು ತಡೆಯುವ ಸವಾಲು. ಹಲವಾರು ಪಂದ್ಯಗಳಲ್ಲಿ ಯಶಸ್ಸು ಕಂಡಿರುವ ಭಟ್ಟಾಚಾರ್ಯ, ಸರ್ಗಿಯೋ ಸಿಡೊಂಚಾ ಅವರ ಕಿಕ್ ಎದುರಿಸಲು ಸಜ್ಜಾದರು. ಎಡ ಭಾಗದ ಕಡೆಗೆ ಚೆಂಡನ್ನು ತುಳಿಯಬಹುದು ಎಂಬ ನಿರೀಕ್ಷೆ ಭಟ್ಟಾಚಾರ್ಯ ಅವರದ್ದು, ಆದರೆ ಸಿಡೋಂಚಾ ಸಿಡಿಸಿದ ಚೆಂಡು ನೇರವಾಗಿ ಭಟ್ಟಾಚಾರ್ಯ ಅವರ ಕೈ ಸವರಿಕೊಂಡು ಗೋಲ್‌ಬಾಕ್ಸ್ ಸೇರಿತು. ನಿರೀಕ್ಷೆಯಂತೆ ಟಾಟಾ ಪಡೆ ಮನೆಯಂಗಣದಲ್ಲಿ ಮೊದಲ ಗೋಲಿನಿಂದ ಸಂಭ್ರಮಿಸಿತು.
ಇಂಡಿಯನ್ ಸೂಪರ್ ಲೀಗ್‌ನ 14ನೇ ಪಂದ್ಯದಲ್ಲಿ ಜೆಮ್ಷೆಡ್ಪುರ ಎಫ್ಸಿ ಹಾಗೂ ಎಟಿಕೆ ತಂಡಗಳು ಜೆಆರ್‌ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಮುಖಾಮುಖಿಯಾದವು. ಸ್ಟೀವ್ ಕೊಪ್ಪೆಲ್ ಪಾಲಿಗೆ ಇದು ಹೊಸ ಅನುಭವ. ಹಳೆ ತಂಡದ ವಿರುದ್ಧ ಹೊಸ ತಂಡದೊಂದಿಗೆ ಹೋರಾಟ. ಡೆಲ್ಲಿಡೈನಾಮೋಸ್ ವಿರುದ್ಧ ನಡೆದ ಪಂದ್ಯದಲ್ಲಿ ಜಯ ಗಳಿಸಿದ ಎಟಿಕೆ ಅತ್ಯಂತ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕೆ ಇಳಿಯಿತು. ಮೊದಲ ಎರಡು ಪಂದ್ಯದಲ್ಲಿ ಮಾಜಿ ಚಾಂಪಿಯನ್ ಎಟಿಕೆ ಸತತ ಎರಡು ಸೋಲನುಭವಿಸಿತ್ತು. ಈಗ ಸಿಕ್ಕ ಜಯದ ಲಯದೊಂದಿಗೆ ಮುನ್ನಡೆಯಬೇಕಾಗಿದೆ. ಪ್ರಬೀರ್ ದಾಸ್ ಹಾಗೂ ಅರ್ನಬ್ ಮಂಡಲ್ ಅವರ ಅನುಪಸ್ಥಿತಿಯಲ್ಲಿ ತಂಡದ ಬ್ಯಾಕ್‌ಲೈನ್ ಕೊಂಚ ಸೊರಗುವ ಸಾಧ್ಯತೆ ಇದೆ. ಆದರೆ ಲಾನ್ಜರೋಟ್, ಸ್ಯಾಂಟೋಸ್ ಹಾಗೂ ಬಲ್ವಂತ್ ಸಿಂಗ್ ಅವರ ಉಪಸ್ಥಿತಿ ತಂಡದ ಎಲ್ಲ ದೌರ್ಬಲ್ಯಗಳನ್ನು ಹಿಮ್ಮೆಟ್ಟಲಿದೆ
ಜೆಮ್ಷೆಡ್ಪುರ ತಂಡ ಒಂದು ಜಯ ಹಾಗೂ ಡ್ರಾದ ಮೂಲಕ ಉತ್ತಮ ಆರಂ‘ ಕಂಡಿದೆ. ನಾಲ್ಕು ಅಂಕಗಳೊಂದಿಗೆ ಆತಿಥೇಯ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಮುಂಬೈ ಸಿಟಿ ಎಫ್ಸಿ ವಿರುದ್ಧ ಜಯ ಗಳಿಸಿದ ಜೆಮ್ಷೆಡ್ಪುರ ತಂಡ ಬೆಂಗಳೂರು ತಂಡದ ವಿರುದ್ಧ ಡ್ರಾ ಗಳಿಸಿತ್ತು. ಈ ಲಿತಾಂಶ ಆತಿಥೇಯ ತಂಡದ ಆತ್ಮಬಲವನ್ನು ಹೆಚ್ಚಿಸಿರುವುದು ಸ್ಪಷ್ಟ. ಮನೆಯಂಗಣದಲ್ಲಿ ನಡೆಯುವ ಋತುವಿನ ಮೊದಲ ಪಂದ್ಯದಲ್ಲಿ ತವರಿನ ಪ್ರೇಕ್ಷಕರ ಪ್ರೋತ್ಸಾಹದೊಂದಿಗೆ ಎಟಿಕೆ ತಂಡಕ್ಕೆ ಸೋಲುಣಿಸುವ ಗುರಿಯೊಂದಿಗೆ ಟಾಟಾ ಪಡೆ ಅಂಗಣಕ್ಕೆ ಕಾಲಿಟ್ಟಿತು.