Thursday, March 28, 2024

ಗೋಲ್ಮಳೆಯಲ್ಲಿ ಗೆದ್ದ ಗೋವಾ

ಗೋವಾ, ಅಕ್ಟೋಬರ್ 28

ಫೆರಾನ್ ಕೊರೊಮಿನಾಸ್ (5 ಮತ್ತು 35ನೇ ನಿಮಿಷ), ಹ್ಯೂಗೋ ಬೌಮೌಸ್ (12ನೇ ನಿಮಿಷ), ಮತ್ತು ಜಾಕಿಚಾಂದ್ ಸಿಂಗ್ (20ನೇ ನಿಮಿಷ) ಅವರ ಗೋಲಿನ ಮಳೆಯಿಂದ ಎಫ್ ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನ ರೋಚಕ ಪಂದ್ಯದಲ್ಲಿ ಎಫ್ ಸಿ ಪುಣೆ ಸಿಟಿ ತಂಡವನ್ನು 4-2  ಗೋಲುಗಳ ಅಂತರದಲ್ಲಿ ಮಣಿಸಿ ಜಯದ ಓಟವನ್ನು ಮುಂದುವರಿಸಿದೆ. ಪುಣೆ ಪರ ಮರ್ಸಿಲೋ ಪೆರೇರಾ (8ನೇ ನಿಮಿಷ) ಹಾಗೂ ಎಮಿಲಿಯಾನೊ ಅಲ್ಫಾರೋ (23 ನೇ ನಿಮಿಷ) ಎರಡು ಗೋಲು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಪ್ರಥಮಾರ್ಧದಲ್ಲಿ ಗೋಲಿನ ಮಳೆಯಾದರೂ ದ್ವಿತೀಯಾರ್ಧ ಗೋಲು ದಾಖಲಾಗಲೇ ಇಲ್ಲ.

ಗೋಲಿನ ಮಳೆ

ಪ್ರಥಮಾರ್ಧದಲ್ಲಿ ಗೋವಾ ಗೋಲಿನ ಮಳೆಗರೆಯಿತು. 20ನೇ ನಿಮಿಷದಲ್ಲಿ  ಜಾಕಿಚಾಂದ್ ಸಿಂಗ್ ಗಳಿಸಿದ ಗೋಲಿನಿಂದ ಗೋವಾ 3-1ರ ಮುನ್ನಡೆ ಕಂಡಿತು. ನಂತರ 23ನೇ ನಿಮಿಷದಲ್ಲಿ ಪುಣೆ ಪರ ಎಮಿಲಿನಯಾನೋ ಅಲ್ಫಾರೋ ಗಳಿಸಿದ ಗೋಲಿನಿಂದ ಪಂದ್ಯ 3-2ರಲ್ಲಿ ಸಾಗಿತು. ಕೊರೊಮಿನಾಸ್ ಅವರನ್ನು ತಡೆಯುವವರೇ ಕಾಣುತ್ತಿಲ್ಲ 35ನೇ ನಿಮಿಷದಲ್ಲಿ ಕೊರೊಮಿನಾಸ್ ಗಳಿಸಿದ ಗೋಲು ಗೋವಾ ತಂಡವನ್ನು ಬೃಹತ್ ಮುನ್ನಡೆಯತ್ತ ಕೊಂಡೊಯ್ದಿತು. 4-2ರ ಮುನ್ನಡೆ.
ಗೋವಾಕ್ಕೆ ಮುನ್ನಡೆ
12 ನಿಮಿಷಗಳ ಆಟದಲ್ಲಿ ಇತ್ತಂಡಗಳು ಎರಡು ಗೋಲು ಗಳಿಸಿದವು, ಅದ್ಭುತ ಹೋರಾಟ. ಹ್ಯುಗೋ ಬೌಮೌಸ್ ಚೆಂಡನ್ನು ಕೊರೊಮಿನಾಸ್‌ಗೆ ನೀಡಿದರು. ಮತ್ತೆ ಚೆಂಡು ಬೌಮೌಸ್ ನಿಯಂತ್ರಣಕ್ಕೆ. ಅದ್ಭುತ ಹೆಡರ್ ಮೂಲಕ ಬೌಮೌಸ್ ಚೆಂಡನ್ನು ಗೋಲ್‌ಬಾಕ್ಸ್‌ಗೆ ತಳ್ಳಿದರು. ವಿಶಾಲ್ ಕೈತ್ ಅವರ ಪ್ರಯತ್ನ ಯಾವುದೇ ಲ ನೀಡಲಿಲ್ಲ. ಗೋವಾಕ್ಕೆ 2-1ರ ಮುನ್ನಡೆ.
ಸಮಬಲದ ಸಾಧನೆ 
ಮುಂಬೈ ರೀತಿಯಲ್ಲಿ ಗೋವಾ ಆಡಲಿಲ್ಲ. ತಕ್ಕ ತಿರುಗೇಟು ನೀಡಿತು. 8ನೇ ನಿಮಿಷದಲ್ಲಿ ಮಾರ್ಸೆಲೋ ಗಳಿಸಿದ ಗೋಲಿನಿಂದ ಪುಣೆ ತಂಡ ಸಮಬಲ ಸಾಧಿಸಿತು. ರಾಬಿನ್ ಸಿಂಗ್ ಹಾಗೂ ಮಾರ್ಕೋ ಸ್ಟಾನ್ಕೋವಿಕ್ ಮೂಲಕ ಸಾಗಿ ಬಂದ ಚೆಂಡು ಬಾಕ್ಸ್‌ನಲ್ಲಿದ್ದ ಮಾರ್ಸೆಲೋ ಅವರಿಗೆ ಸಿಕ್ಕಿತು. ಗೋಲ್‌ಕೀಪರ್ ಡೈವ್ ಮಾಡಿದರೂ ತಪ್ಪಿ ಹೋಗುವ ರೀತಿಯಲ್ಲಿ ಮಾರ್ಸೆಲೋ ತುಳಿದ ಚೆಂಡು ಗೋಲ್‌ಬಾಕ್ಸ್ ಸೇರಿತು. ಪಂದ್ಯ 1-1ರಲ್ಲಿ ಸಮಬಲ.
ಕೊರೊಮಿನಾಸ್ ಮಿಂಚು
ಪಂದ್ಯ ಆರಂಭಗೊಂಡ 5ನೇ ನಿಮಿಷದಲ್ಲಿ ಫೆರಾನ್ ಕೊರೊಮಿನಾಸ್ ಗಳಿಸಿದ ಗೋಲಿನಿಂದ ಆತಿಥೇಯ ಗೋವಾ ತಂಡ ಮೇಲುಗೈ ಸಾಧಿಸಿತು. ಪುಣೆಯ ಬ್ಯಾಕ್‌ಲೈನ್‌ನಿಂದ ಅಹಮ್ಮದ್ ಜಹೌ ಉತ್ತಮ ಪಾಸ್ ನೀಡಿದರು. ಕೊರೊಮಿನಾಸ್ ನಿಯಂತ್ರಣಕ್ಕೆ ಸಿಕ್ಕ ಚೆಂಡುನ್ನು ಪುಣೆಯ ಡಿಫೆನ್ಸ್ ವಿಭಾಗ ನಿಯಂತ್ರಿಸುವಲ್ಲಿ ವಿಲವಾಯಿತು. ವಿಶಾಲ್ ಕೈತ್‌ಗೆ ಯಾವುದೇ ಅವಕಾಶ ನೀಡದೆ ಚೆಂಡನ್ನು ಸುಲಭವಾಗಿ ಗೋಲ್‌ಬಾಕ್ಸ್‌ಗೆ ತಲುಪಿಸಿದರು. ಆರಂಭದಲ್ಲೇ ಗೋವಾ ಪ್ರಭುತ್ವ ಕಂಡಿತು.

Related Articles