ಹೊಸದಿಲ್ಲಿ, ಅಕ್ಟೋಬರ್ 29
ಒಂದು ವೇಳೆ ನಾನು ಜವಾಬ್ದಾರಿ ಹೊರುತ್ತಿದ್ದರೆ ಡೆಲ್ಲಿ ತಂಡವನ್ನು ಮೂರನೇ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದೆ ಎಂದು ನಾರ್ತ್ ಈಸ್ಟ್ ಯುನೈಟೆಡ್ ತಂಡದ ಕೋಚ್ ಎಲ್ಕೊ ಷೆಟ್ಟೋರಿ ಹೇಳುವುದರೊಂದಿಗೆ ಡೆಲ್ಲಿ ಹಾಗೂ ನಾರ್ತ್ ಈಸ್ಟ್ ನಡುವಿನ ಪಂದ್ಯಕ್ಕೆ ಮುನ್ನ ಮಾತಿನ ಸಮರ ಆರಂಭಗೊಂಡಿದೆ.
ಆಡಿರುವ ಐದು ಪಂದ್ಯಗಳಿಂದ ಕೇವಲ ಮೂರು ಅಂಕ ಗಳಿಸಿರುವ ಡೆಲ್ಲಿ ಡೈನಮೋಸ್ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಈ ತಂಡ ಇನ್ನೂ ಜಯದ ಖಾತೆ ತೆರೆದಿಲ್ಲ. ಮಂಗಳವಾರ ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಮುನ್ನ ನಾರ್ತ್ ಈಸ್ಟ್ ಯುನೈಟೆಡ್‌ನ ಕೋಚ್ ಷೆಟೋರಿ ಡೆಲ್ಲಿ ಕೋಚ್‌ಗೆ ಟೀಕಾಸ್ತ್ರ ಎಸೆದಿದ್ದಾರೆ.
‘ಇದು ಅತ್ಯಂತ ಸವಾಲಿನ ಪಂದ್ಯವಾಗಲಿದೆ. ಡೆಲ್ಲಿಯಂಥ ಬಲಿಷ್ಠ ತಂಡ ಅಂಕ ಪಟ್ಟಿಯಲ್ಲಿ ಕೆಳ‘ಭಾಗದಲ್ಲಿರುವುದು ನನಗೆ ಅಚ್ಚರಿಯನ್ನುಂಟುಮಾಡಿದೆ. ಧೈರ್ಯವಾಗಿ ಹೇಳುತ್ತೇನೆ ಒಂದು ವೇಳೆ ಈ ತಂಡದ ಕೋಚ್ ಆಗಿದ್ದರೆ ತಂಡವನ್ನು ಮೂರನೇ ಸ್ಥಾನದಲ್ಲಿರಿಸುತ್ತಿದ್ದೆ, ಇದು ಬಹಳ ಉಡೊಯ ಮಾತನಾಗಬಹುದು ಎಂಬುದೂ ನನಗೆ ಗೊತ್ತು,‘ ಎಂದು ಷಟ್ಟೋರಿ ಹೇಳಿದ್ದಾರೆ.
ಆಡಿರುವ ನಾಲ್ಕು ಪಂದ್ಯಗಳಿಂದ ಎಂಟು ಅಂಕ ಗಳಿಸುವ ಮೂಲಕ ನಾರ್ತ್ ಈಸ್ಟ್ ಪರ ಷೆಟ್ಟೋರಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಎರಡು ಜಯ ಹಾಗೂ ಎರಡು ಡ್ರಾ ಸಾಧಿಸಿರುವ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗೋವಾ ಅಗ್ರ ಸ್ಥಾನದಲ್ಲಿದೆ.
ನಾರ್ತ್ ಈಸ್ಟ್ ಕೋಚ್ ಹೇಳಿರುವ ಮಾತು, ಡೆಲ್ಲಿ ತಂಡದ ಕೋಚ್ ಜೊಸ್‌ಫ್ ಗೊಂಬಾವ್ ಅವರಿಗೆ ಸರಿಕಾಣಲಿಲ್ಲ, ತೀವ್ರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ನಾರ್ತ್ ಈಸ್ಟ್ ಕೋಚ್ ತಮ್ಮ ತಂಡದ ಕಡೆಗೆ ಗಮನಹರಿಸಬೇಕಿದೆ. ಅವರು ಈ ರೀತಿಯ ಹೇಳಿಕೆ ನೀಡಬೇಕಾಗಿರಲಿಲ್ಲ,‘ ಎಂದು ಗೊಂಬಾವ್ ಹೇಳಿದ್ದಾರೆ.
ಆಕ್ರಮಣಕಾರಿ ಮಿಡ್‌ಫೀಲ್ಡರ್ ಫೆಡ್ರಿಕೊ ಗಲ್ಲೆಗೋ ಹಾಗೂ ಸ್ಟಾರ್ ಸ್ಟ್ರೈಕರ್ ಬಾರ್ತಲೋಮ್ಯೊ ಒಗ್ಬಚೆ ನಡುವಿನ ಹೊಂದಾಣಿಕೆಯ ಆಟವೇ ನಾರ್ತ್ ಈಸ್ಟ್ ಯುನೈಟೆಡ್ ತಂಡ ಈ ಬಾರಿ ಐಎಸ್‌ಎಲ್‌ನ ಆರಂಭದಲ್ಲೇ ಮೊದಲ ಬಾರಿಗೆ ಎರಡನೇ ಸ್ಥಾನದಲ್ಲಿರಲು ಮುಖ್ಯ ಕಾರಣ. ಒಗ್ಬಚೆ ಈಗಾಗಲೇ ಐದು ಗೋಲುಗಳನ್ನು ಗಳಿಸಿದ್ದು, ಗಲ್ಲೆಗೊ ಈಗಾಗಲೇ ಮೂರು ಗೋಲುಗಳ ಗಳಿಕೆಯಲ್ಲಿ ನೆರವಾಗಿದ್ದಾರೆ. ಈ ಇಬ್ಬರು ಆಟಗಾರರು ಡೆಲ್ಲಿ ತಂಡಕ್ಕೆ ದಿಟ್ಟ ಸವಾಲು ನೀಡುವುದು ಸಹಜ.
ರಾಲ್ವಿನ್ ಬೋರ್ಗಸ್ ಹಾಗೂ ಜೋಸ್ ಲ್ಯೂಡೋ ಮಿಡ್‌ಫೀಲ್ಡ್‌ನಲ್ಲಿ ಅತ್ಯಂತ ಪರಿಣಾಮಕಾರಿ ಆಟವಾಡಿದ್ದಾರೆ. ಆದರೆ ಮಿಸ್ಲಾವ್ ಕೊಮಾರ್‌ಸ್ಕಿ ರೆಡ್ ಕಾರ್ಡ್ ಪಡೆದು ತಂಡದಿಂದ ಹೊರಗುಳಿದಿರುವುದು ತಂಡದ ಬಲವನ್ನು ಕುಂದಿಸುವಂತೆ ಮಾಡಿದೆ. ಕೊಮಾರ್‌ಸ್ಕಿ ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ಅಟ್ಯಾಕ್ ವಿಭಾಗ ಹೆಚ್ಚಿನ ಯಶಸ್ಸು ಕಾಣುವ ಸಾದ್ಯತೆ ಇದೆ.
‘ಮುಂಬೈ ವಿರುದ್ಧ ನಾವು ಸೋತಿರಬಹುದು, ಆದರೆ ನಾವು 20 ಬಾರಿ ಗೋಲ್‌ಗೆ ಗುರಿ ಇಟ್ಟಿದ್ದೇವೆ. ಅದರಲ್ಲಿ ಆರು ನಿಖರವಾಗಿತ್ತು. ಅಲ್ಲದೆ 400ಕ್ಕೂ ಹೆಚ್ಚು ಪಾಸ್ ದಾಖಲಿಸಿದ್ದೇವೆ. 555 ಟಚ್‌ಗಳಿವೆ. ಶೇ. 58ರಷ್ಟು ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದೇವೆ. ಎಲ್ಲವೂ ಸರಿಯಾಗಿದೆ ಆದರೆ ಗೋಲು ಗಳಿಸದಿರುವುದು ಬೇಸರದ ಸಂಗತಿ,‘ ಎಂದು ಗೊಂಬಾವ್ ಹೇಳಿದ್ದಾರೆ.
Fanbannapadega
‘ಸಾಕಷ್ಟು ಅವಕಾಶವಿದ್ದು, ಗೋಲು ಗಳಿಸದಿರುವಾಗ ಆತ್ಮವಿಶ್ವಾಸಕ ಕಳೆದುಕೊಳ್ಳುವುದು ಸಹಜ, ಇದು ತಂಡದ ಮೇಲೆ ಪರಿಣಾಮ ಬೀರುತ್ತದೆ. ಆದರೆ ನಾಳೆ ಪಂದ್ಯದಲ್ಲಿ ಉತ್ತಮವಾಗಿ ಆಡಲಿದ್ದೇವೆ,‘ ಎಂದರು. ಗೊಂಬಾವ್ ಅವರಿಗೆ ಜಯವಲ್ಲದೆ ಬೇರೇನೂ ಬೇಕಾಗಿಲ್ಲ, ಆದರೆ ನಾರ್ತ್ ಈಸ್ಟ್ ಯುನೈಟೆಡ್ ಅವರ ನಿರೀಕ್ಷೆಯನ್ನು ಹುಸಿಗೊಳಿಸಲಿದೆ ಎಂದು ಷೆಟ್ಟೋರಿ ಹೇಳಿದ್ದಾರೆ.