Friday, January 3, 2025

ಕಪ್ ನಮ್ದೇ ….ಬೆಂಗಳೂರು ಐಎಸ್ ಎಲ್ ಚಾಂಪಿಯನ್

ಮುಂಬೈ, ಮಾರ್ಚ್ 18

ಕೊನೆಗೂ ಕಪ್ ನಮ್ದೇ …ಪ್ರಥಮಾರ್ಧದಲ್ಲಿ ಗೋಲು ಆಗಲಿಲ್ಲ, ದ್ವಿತೀಯಾರ್ಧದಲ್ಲೂ ಗೋಲಾಗಲಿಲ್ಲ, ಹೆಚ್ಚುವರಿ ಸಮಯದಲ್ಲೂ ಇದುವರೆಗೂ ಗೋಲು ಗಳಿಸಿದವರು ಗೋಲು ಗಳಿಸಲಿಲ್ಲ. ಬದಲಾಗಿ ಭಾರತೀಯ ಆಟಗಾರ ರಾಹುಲ್ ಭಿಕೆ (116ನೇ ) ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಎಫ್ ಸಿ ಗೋವಾ ತಂಡವನ್ನು 1-0 ಗೋಲಿನಿಂದ ಮಣಿಸಿದ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್ ಗೆ ನೂತನ ಚಾಂಪಿಯನ್.

ಗೋಲಿಲ್ಲ, ಆದರೆ ಕುತೂಹಲಕ್ಕೆ ಎಣೆ ಇಲ್ಲ
ಪ್ರಥಮಾರ್ಧದಲ್ಲಿ   ಇತ್ತಂಡಗಳು ಗೋಲು ಗಳಿಸಿಲ್ಲ, ಆದರೆ ಮೊದಲ ಅವಧಿ ಅತ್ಯಂತ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಯಿತು. ಫೈನಲ್ ತಲುಪಿದ್ದು ಎರಡು ಬಲಿಷ್ಠ ತಂಡಗಳೆಂಬುದು 45 ನಿಮಿಷಗಳ ಆಟದಲ್ಲಿ ಕಂಡು ಬಂತು. ಇತ್ತಂಡಗಳಿಗೂ ಗೋಲು ಗಳಿಸುವ ಅವಕಾಶ ಆಗಾಗ ಸಿಕ್ಕಿತ್ತು. ಆದರೆ ಗೋವಾದ ಗೋಲ್‌ಕೀಪರ್ ನವೀನ್ ಕುಮಾರ್ ಹಾಗೂ ಬೆಂಗಳೂರಿನ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧೂ  ಅದಕ್ಕೆ ಅವಕಾಶ ಕೊಡಲಿಲ್ಲ. ಗೋವಾ ಆಕ್ರಮಣಕಾರಿ ಆಟಕ್ಕೆ ಮನಸ್ಸು ಮಾಡಿದ್ದರೂ, ಬೆಂಗಳೂರಿನ ಡಿಫೆನ್ಸ್ ಅದಕ್ಕೆ ತಕ್ಕ ರೀತಿಯಲ್ಲಿ ಬ್ರೇಕ್ ಹಾಕಿತ್ತು. ಒಂದು ಹಂತದಲ್ಲಿ ಮಿಕು ಹಾಗೂ ಸುನಿಲ್ ಛೆಟ್ರಿ ಬೆಂಗಳೂರು ಪರ ಗೋಲು ಗಳಿಸುವ ಅವಕಾಶವನ್ನು ಕೈ ಚೆಲ್ಲಿದ್ದರು. ಇದರೊಂದಿಗೆ ಪ್ರಥಮ ಅವಧಿ ಗೋಲಿಲ್ಲದೆ ಅಂತ್ಯಗೊಂಡಿತು.
ಲೀಗ್‌ನ 90 ಪಂದ್ಯಗಳು ಮುಗಿದು, ನಾಲ್ಕು ಸೆಮಿಫೈನಲ್ ನಡೆದು, ಕೊನೆಗೂ ಇಂಡಿಯನ್ ಸೂಪರ್ ಲೀಗ್‌ನ ಫೈನಲ್ ಪಂದ್ಯಕ್ಕೆ ಬೆಂಗಳೂರು ಎಫ್ ಸಿ ಹಾಗೂ ಎಫ್ ಸಿ ಗೋವಾ ತಂಡಗಳು ಮುಖಾಮುಖಿಯಾದವು. ಯಾರೇ ಗೆದ್ದರೂ ಹೊಸ ಚಾಂಪಿಯನ್ ಮೂಡಿ ಬರುವುದು ಸ್ಪಷ್ಟ. ಲೀಗ್‌ನಲ್ಲಿ ಅಗ್ರ ಸ್ಥಾನದೊಂದಿಗೆ ಫೈನಲ್ ತಲುಪಿದ ಬೆಂಗಳೂರು ತಂಡ ಬಲಿಷ್ಠವೆಂದರೆ ತಪ್ಪಾಗಲಾರದು. ಅದೇ ರೀತಿ ಗೋವಾ ಲೀಗ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಗಿದೆ. ಈ ಋತುವಿನಲ್ಲಿ ಗೋವಾ ತಂಡ ಬೆಂಗಳೂರು ವಿರುದ್ಧ ಗೆಲ್ಲಲು ವಿಲವಾಗಿದೆ. ಆದರೆ ಫೈನಲ್ ಬೇರೆಯೇ ಹೋರಾಟ. ಹಿಂದಿನ ಯಾವ ಲೆಕ್ಕಚಾರವೂ ಇಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಸೆಮಿಫೈನಲ್ ಪಂದ್ಯದ ಮೊದಲ ಲೆಗ್‌ನಲ್ಲಿ ನಾರ್ತ್ ಈಸ್ಟ್ ವಿರುದ್ಧ 1-2 ಗೋಲುಗಳಿಂದ ಸೋತ ಬೆಂಗಳೂರು ತಂಡ ಮನೆಯಂಗಣದಲ್ಲಿ ಎರಡನೇ ಲೆಗ್ ಪಂದ್ಯದಲ್ಲಿ 3-0 ಗೋಲಿನಿಂದ ಗೆದ್ದು ಫೈನಲ್ ಪ್ರವೇಶಿಸಿತ್ತು. ಬೆಂಗಳೂರು ಸತತ ಎರಡನೇ ಬಾರಿ ಫೈನಲ್ ತಲುಪಿದ್ದರೆ, ಗೋವಾ ಕೂಡ ಎರಡನೇ ಫೈನಲ್ ಪಂದ್ಯಕ್ಕೆ ಸಜ್ಜಾಯಿತು. ಎರಡೂ ತಂಡಗಳು ತಾವು ಎದುರಿಸಿದ ಫೈನಲ್‌ನಲ್ಲಿ ಚೆನ್ನೈಯಿನ್ ವಿರುದ್ಧ ಸೋಲನುಭವಿಸಿರುವುದು ವಿಶೇಷ. ಬೆಂಗಳೂರು ತಂಡ ಗೆಲ್ಲಬೇಕಾದರೆ ನಾಯಕ ಸುನಿಲ್ ಛೆಟ್ರಿ ಅವರಿಂದ ಗೋಲು ದಾಖಲಾಗಬೇಕಾದ ಅನಿವಾರ್ಯತೆ ಇದೆ ಎಂಬುದು ಫುಟ್ಬಾಲ್ ಪಂಡಿತರ ಲೆಕ್ಕಾಚಾರ. ಆದರೆ ತಂಡ ಗೆಲ್ಲಲು ಯಾರ ಗೋಲು ಕೂಡ ನೆರವಾಗಬಲ್ಲುದು ಎಂಬುದು ಸತ್ಯದ ವಿಚಾರ.
ಗೋವಾ ಹಾಗೂ ಬೆಂಗಳೂರು ತಂಡಗಳು ಸಮಾನ ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಗಳಿಸಿದ್ದರೂ, ಗೋವಾ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ತಂಡವೆನಿಸಿದೆ. ಇದೇ ಅಂಗಣದಲ್ಲಿ ಮುಂಬೈ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 5-1 ಗೋಲುಗಳಿಂದ ಗೋವಾ ಪ್ರಭುತ್ವ ಸಾಧಿಸಿತ್ತು. ಕೊರೊಮಿನಾಸ್ 16 ಗೋಲುಗಳನ್ನು ಗಳಿಸಿ ಗೋಲ್ಡನ್ ಬೂಟ್ ಧರಿಸಲು ಸಜ್ಜಾಗಿದ್ದಾರೆ. 2015 ರಲ್ಲಿ ಗೋವಾ ತಂಡ ಚೆನ್ನೈಯಿನ್ ವಿರುದ್ಧ ಸೋಲನುಭವಿಸಿತ್ತು. ಅದೇ ರೀತಿ ಕಳೆದ ಋತುವಿನಲ್ಲಿ ಬೆಂಗಳೂರು ತಂಡ ಕೂಡ ಚೆನ್ನೈಯಿನ್ ವಿರುದ್ಧ ಸೋಲನುಭವಿಸಿ ಪ್ರಶಸ್ತಿಯಿಂದ ವಂಚಿತವಾಗಿತ್ತು. ಅಂದು ಅಂದಿಗೇ, ಇಂದು ಏನು ನಡೆಯುತ್ತದೆಯೋ ಅದೇ ಮುಖ್ಯ.

Related Articles